ಶಿಕಾರಿಪುರ: ಎಚ್.ಟಿ.ಬಳಿಗಾರ್ ಅವರು ಶೋಷಿತರ, ನೊಂದವರ, ಅಸಹಾಯಕರ ಪರವಾಗಿ ಇದ್ದರು. ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಗೆ ಕೊಡುಗೆ ನೀಡುವ ಮೂಲಕ ಅವರ ಸ್ಮರಣೆ ಮಾಡಲಾಗಿದೆ ಎಂದು ಎಚ್.ಟಿ.ಬಳಿಗಾರ್ ಫೌಂಡೇಶನ್ ಅಧ್ಯಕ್ಷ ಇ.ಎಚ್.ಬಸವರಾಜ್ ಹೇಳಿದರು.

ಪಟ್ಟಣದಲ್ಲಿ ಶುಕ್ರವಾರ ಪಟ್ಟಣದ ವಿದ್ಯಾಜ್ಯೋತಿ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ನಿತ್ಯೋಪಯೋಗಿ ವಸ್ತುಗಳನ್ನು ಕೊಡುಗೆ ನೀಡಿ ಮಾತನಾಡಿದರು.

‘ತಾಲ್ಲೂಕಿನಲ್ಲಿ ಎಚ್.ಟಿ.ಬಳಿಗಾರ್ ರಾಜಕೀಯ ಮಾಡಲಿಲ್ಲ. ಬದಲಿಗೆ ನೊಂದವರ ಪರವಾಗಿ ನಿಂತು ಅವರ ರಕ್ಷಣೆ ಮಾಡುತ್ತಿದ್ದರು. ಸರಳ ಸಜ್ಜನಿಕೆ ವ್ಯಕ್ತಿತ್ವದ ಅವರ ಅಗಲಿಕೆಗೆ ಕೊರಗದೇ ಅವರ ಆಶಯ ಈಡೇರಿಸುವ ಕೆಲಸವನ್ನು ಫೌಂಡೇಶನ್ ಮೂಲಕ ಮಾಡಲಾಗುವುದು’ ಎಂದರು.

ಸಂಸ್ಥೆಯ ಗೌರವಾಧ್ಯಕ್ಷ ಕೆ.ಎಸ್.ಹುಚ್ರಾಯಪ್ಪ, ಶಿವಣ್ಣ ಬಿಎಸ್ಎನ್ಎಲ್, ಉಪಾಧ್ಯಕ್ಷ ರಸೂಲ್ಸಾಬ್, ರೇವಣಪ್ಪ, ನಾಗಪ್ಪ, ನಾಗಿಹಳ್ಳಿ, ನಾಗರಾಜ್ ಹಿರೇಜಂಬೂರು, ಟಿ.ಓಂಕಾರಪ್ಪ, ಐಶ್ವರ್ಯ, ಭೂಮಿಕಾ, ವಸತಿ ಶಾಲೆಯ ಮುಖ್ಯಸ್ಥ ಈರಪ್ಪ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.