ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನು ಕೆಳಗಿಳಿಸಲಿ: ಆರ್. ರಾಜೇಂದ್ರ ಒತ್ತಾಯ

Last Updated 3 ಜೂನ್ 2019, 8:23 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ರಾಮಕೃಷ್ಣ ಅವರೇ ಕೆ.ಎನ್.ರಾಜಣ್ಣ ಮತ್ತು ಡಾ.ಜಿ.ಪರಮೇಶ್ವರ ಬೆಂಬಲಿಗರ ನಡುವೆ ವೈಷಮ್ಯಕ್ಕೆ ಕಾರಣವಾಗಿದ್ದು, ಅವರನ್ನು ಜಿಲ್ಲಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದರೆ ನಾಳೆ ಬೆಳಿಗ್ಗೆಯೇ ಎಲ್ಲ ಭಿನ್ನಾಭಿಪ್ರಾಯ, ವೈಷಮ್ಯ ಸರಿ ಹೋಗುತ್ತದೆ ಎಂದು ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರ ಮಗ ಆರ್.ರಾಜೇಂದ್ರ ಒತ್ತಾಯಿಸಿದರು.

ಮಾಧ್ಯಮದವರೊಂದಿಗೆ ಮಾತನಾಡಿ, ' ಪರಮೇಶ್ವರ ಹಠಾವೊ ಕಾಂಗ್ರೆಸ್ ಬಚಾವೊ ಭಿತ್ತಿಪತ್ರ ಅಂಟಿಸಿರುವವರು ಯಾರು ಎಂಬುದು ಗೊತ್ತಾಗಬೇಕಿದೆ. ನಾನೂ ಅದನ್ನು ಕಾಯುತ್ತಿದ್ದೇನೆ ಎಂದರು.

ಎಚ್.ಡಿ.ದೇವೇಗೌಡರ ಸೋಲಿಗೆ ಕೆ.ಎನ್.ರಾಜಣ್ಣ, ಅವರ ಮಗ ರಾಜೇಂದ್ರ ಕಾರಣ ಎಂದು ಪಕ್ಷದ ರಾಜ್ಯ ಅಧ್ಯಕ್ಷರಿಗೆ ಜಿಲ್ಲಾ ಘಟಕ ಅಧ್ಯಕ್ಷ ವರದಿ ಕೊಟ್ಟಿದ್ದಾರೆ. ರಾಜಣ್ಣ ಅವರು ಚುನಾವಣೆಯಲ್ಲಿ ತಟಸ್ಥವಾಗಿದ್ದರು. ಅವರ ಬೆಂಬಲಿಗರು, ಅಭಿಮಾನಿಗಳು ತಮಗನಿಸಿದಂತೆ ತೀರ್ಮಾನ ಮಾಡಿ ಚುನಾವಣೆ ಮಾಡಿದ್ದಾರೆ. ದೇವೇಗೌಡರೇನೂ ರಾಜಣ್ಣ ಅವರ ಮನೆಗೆ ಬಂದು ಬೆಂಬಲಿಸಿ ಎಂದು ಕೇಳಿದ್ದರೆ ಎಂದು ಪ್ರಶ್ನಿಸಿದರು.

ಇಲ್ಲಿ ಮೈತ್ರಿ ಅಭ್ಯರ್ಥಿ ಸೋತಿದ್ದಾರೆ. ಹಾಗಾದರೆ ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಯಾಕೆ ಸೋತರು ಎಂದು ಪ್ರಶ್ನಿಸಿದರು.

ಜಿಲ್ಲಾ ಘಟಕ ಅಧ್ಯಕ್ಷ ರಾಮಕೃಷ್ಣನೂ ಯಾರಿಗೂ ಓಟು ಹಾಕಿಸಿಲ್ಲ. ಸಂಜೆಯಾಗುತ್ತಿದ್ದಂತೆಯೇ ಯಾರು ದುಡ್ಡು ಕೊಡುತ್ತಿದ್ದರೊ ತೆಗೆದುಕೊಂಡು ಹತ್ತು ಪರ್ಸೆಂಟ್ ಇಟ್ಟುಕೊಂಡು ಕೊಡುವ ಕೆಲಸ ಮಾಡಿದ್ದಾನೆ ಎಂದು ಆರೋಪಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ನಾರಾಯಣಮೂರ್ತಿ ಬಡ್ಡಿ ವ್ಯವಹಾರವೇ ದಂಧೆ. ಬೇರೆಯವರ ಬಳಿ ಶೇ 4 ಬಡ್ಡಿಯಲ್ಲಿ ಹಣ ಪಡೆದು ಬೇರೆಯವರಿಗೆ 10 ಪರ್ಸೆಂಟ್ ಗೆ ನೀಡಿ ಬಡ್ಡಿ ವ್ಯವಹಾರ ಮಾಡುತ್ತಾರೆ. ಮಧುಗಿರಿ ತಾಲ್ಲೂಕು ಮಿಡಿಗೇಶಿ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿ ಸೋತಿದ್ದ ವ್ಗಕ್ತಿ. ಈಗ ಜನಾಂಗದ ಹೆಸರು ಹೇಳಿಕೊಂಡು ರಾಜಣ್ಣ ಅವರ ವಿರುದ್ಧ ವೀರಾವೇಶದ ಮಾತನಾಡುತ್ತಿದ್ದಾರೆ. ಜನಾಂಗದವರನ್ನು ಯಾರನ್ನಾದರೂ ಬೆಳೆಸಿದ್ದಾರಾ. ಬರೀ ರೋಲ್ ಕಾಲ್ ಗಿರಾಕಿ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT