ಪಾವಗಡ: ‘ಶೇಂಗಾ, ಜೋಳ ಸೇರಿದಂತೆ ಬೆಳೆಗೆ ಬೆಂಬಲ ಬೆಲೆ ನೀಡಬೇಕು’ ಎಂದು ಹಸಿರು ಸೇನೆ, ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪೂಜಾರಪ್ಪ ಒತ್ತಾಯಿಸಿದರು.

ಜಿಲ್ಲೆಯ ವಿವಿಧೆಡೆ ಅನಾವೃಷ್ಟಿ, ಅತಿವೃಷ್ಟಿಯಿಂದಾಗಿ ಶೆಂಗಾ, ರಾಗಿ, ಹತ್ತಿ, ಹೂವಿನ ಬೆಳೆ ಹಾಳಾಗಿವೆ. ಇದರಿಂದಾಗಿ ರೈತರು ಸಮಸ್ಯೆಯಲ್ಲಿ ಸಿಲುಕಿದ್ದಾರೆ. ಸರ್ಕಾರ ಈ ಕೂಡಲೆ ಸರ್ಕಾರ ರೈತರ ಸಹಾಯಕ್ಕೆ ಬರಬೇಕು ಎಂದು ಒತ್ತಾಯಿಸಿದರು.

ಮಧುಗಿರಿ, ಶಿರಾ, ಕೊರಟಗೆರೆ, ಪಾವಗಡ ತಾಲ್ಲೂಕುಗಳಲ್ಲಿ ಹುಣಸೆಯನ್ನು ಹೆಚ್ಚಿನ ರೈತರು ನೆಚ್ಚಿಕೊಂಡಿದ್ದಾರೆ. ಹುಣಸೆ ಬಿಡಿಸಲು ಕೂಲಿ ಕಾರ್ಮಿಕರ ಕೊರತೆ ಇದೆ. ಇದರಿಂದಾಗಿ ಬೆಳೆ ಕಟಾವು ಮಾಡಲಾಗದೆ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ ಎಂದರು.

ತೆಂಗು ಬೆಳೆಗೆ ರೋಗ ಹರಡಿದೆ. ತೋಟಗಾರಿಕೆ ಅಧಿಕಾರಿಗಳು ಈ ಕೂಡಲೆ ರೋಗ ನಿಯಂತ್ರಿಸಲು ಕ್ರಮ ತೆಗೆದುಕೊಳ್ಳಬೇಕು. ಜಮೀನುಗಳಿಗೆ ಹೋಗಲು ದಾರಿ ಬಿಡಿಸಿಕೊಡಬೇಕು. ಬಗರ್ ಹುಕುಂ ಅಡಿ ಅರ್ಜಿ ಸಲ್ಲಿಸಿದವರಿಗೆ ಖಾತೆ ಮಾಡಿಸಿಕೊಡಬೇಕು. ತಾಲ್ಲೂಕಿನ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹಾಳಾಗಿದ್ದು, ರಸ್ತೆ ದುರಸ್ತಿಪಡಿಸಬೇಕು ಎಂದು ಒತ್ತಾಯಿಸಿದರು.

ನಲಿಗಾನಹಳ್ಳಿ ಮಂಜುನಾಥ್, ಬ್ಯಾಡನೂರು ಶಿವು, ಚಿತ್ತಯ್ಯ, ಜಂಪಣ್ಣ, ಈರಣ್ಣ, ರಾಮಾಂಜಿ, ರಾಜಾನಾಯ್ಕ, ಜೋಗ್ಯಾನಾಯ್ಕ, ಅಂಕಾಲಮ್ಮ, ಗುಡಿಪಲ್ಲಪ್ಪ, ಹನುಮಂತರಾಯ, ಚಿಕ್ಕಣ್ಣ, ವೀರಭದ್ರಪ್ಪ, ಶ್ರೀರಾಮಪ್ಪ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.