ತಿಪಟೂರು: ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಶಿಕ್ಷಣ ಇಲಾಖೆ ಮತ್ತು ತಾಲ್ಲೂಕು ಪದವಿ ಪೂರ್ವ ಕಾಲೇಜುಗಳ ಸಹಯೋಗದಲ್ಲಿ ಎರಡು ದಿನ ತುಮಕೂರು ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ ನಡೆಯಿತು.

ಬಾಲಕಿಯರ ವಿಭಾಗದಲ್ಲಿ 100 ಹಾಗೂ 200 ಮೀಟರ್ ಓಟದಲ್ಲಿ ಶಿವಾನಿ ಎಸ್.ರೈ, 400 ಮೀ ಓಟದಲ್ಲಿ ಉಷಾ.ಸಿ.ಆರ್ 800ಮೀ– ಕವನ ಕೆ.ಜೆ ಪ್ರಥಮ ಸ್ಥಾನ ಪಡೆದರು.

1500 ಮೀ– ಕಾವ್ಯ, 3000 ಮೀ– ಕಾವ್ಯ, 3000 ನಡಿಗೆ ವಿಭಾಗದಲ್ಲಿ ವರ್ಷಿಣಿ ಪ್ರಥಮ ಸ್ಥಾನ ಪಡೆದರು. 100 ಮೀ ಹರ್ಡಲ್ಸ್ ವಿಭಾಗದಲ್ಲಿ ಐಶ್ವರ್ಯ ಪ್ರಥಮ, 4x100 ಮೀ ರಿಲೇ ತುರವೇಕೆರೆ ಎಸ್.ಬಿ.ಜಿ ಪ್ರಥಮ, 4 ಕೀ.ಮೀ ಗುಡ್ಡಗಾಡು ಓಟದಲ್ಲಿ ತ್ರೀವೇಣಿ ಪ್ರಥಮ, ಉದ್ದಜಿಗಿತ– ಪ್ರಿಯಾಂ, ಎತ್ತರ ಜಿಗಿತ– ನಿಸರ್ಗ, ತ್ರೀವಿಧ ಜಿಗತದಲ್ಲಿ ಪ್ರೀಯಾಂಕ ಪ್ರಥಮ ಸ್ಥಾನ ಪಡದರು.

ಬಾಲಕರ ವಿಭಾಗದ ಗುಂಡು ಎಸೆತದಲ್ಲಿ ನಿಖೀತ್ ಪ್ರಥಮ, ಜಾವವಿನ್– ಲಿಖಿತ್, ಹ್ಯಾಮರ್ ಎಸೆತ– ರಂಗಸ್ವಾಮಿ, ಉದ್ದ ಜಿಗಿತ– ಕುಶಾಲ್ ಗೌಡ, ಎತ್ತರ ಜಿಗಿತ– ರಂಗನಾಥ್, ತ್ರಿವಿಧ ಜಿಗಿತದಲ್ಲಿ ಸುದೀಪ್ ಪ್ರಥಮ ಸ್ಥಾನ ಗಳಿಸಿದರು.

6 ಕಿ.ಮೀ ಗುಡ್ಡಗಾಡು ಓಟದಲ್ಲಿ ದರ್ಶನ್, 1500 ಮೀ ಓಟ– ದರ್ಶನ್, 3000– ದರ್ಶನ್, 5 ಕಿ.ಮೀ ನಡಿಗೆಯಲ್ಲಿ ತರುಣ್ ಕುಮಾರ್, 100 ಮೀ ಹರ್ಡಲ್ಸ್ನಲ್ಲಿ ಭುವನ್ ಪ್ರಥಮ ಸ್ಥಾನ ಪಡೆದರು.

ಶಾಸಕ ಕೆ.ಷಡಕ್ಷರಿ ಮಾತನಾಡಿ, ತಿಪಟೂರು ಶಿಕ್ಷಣ, ಆರೋಗ್ಯ, ಕ್ರೀಡೆಗೆ ಹೆಸರುವಾಸಿಯಾಗಿದೆ. ವಿದ್ಯಾರ್ಥಿಗಳು ನಾಲ್ಕು ಗೋಡೆಗಳ ಮಧ್ಯ ಪಾಠಕ್ಕೆ ಸೀಮಿತವಾಗದೆ ಪಠ್ಯದ ಜೊತೆ ಕ್ರೀಡೆಗೂ ಪ್ರಾತಿನಿಧ್ಯ ನೀಡಬೇಕು ಎಂದರು.

ಉಪವಿಭಾಗಾಧಿಕಾರಿ ಬಿ.ಕೆ.ಸಪ್ತಶ್ರೀ ಮಾತನಾಡಿ, ಸದೃಢ ದೇಹ, ಆರೋಗ್ಯ ಮತ್ತು ಆತ್ಮವಿಶ್ವಾಸ ಹೆಚ್ಚಿಸುವಲ್ಲಿ ಕ್ರೀಡೆ ಸಹಕಾರಿ. ಮಕ್ಕಳು ಶೈಕ್ಷಣಿಕ ಪ್ರಗತಿ ಜೊತೆಗೆ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಹೇಳಿದರು.

ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಾಲಗುರುಮೂರ್ತಿ ಮಾತನಾಡಿದರು. ಡಿವೈಎಸ್ಪಿ ವಿನಾಯಕ ಎನ್. ಶೆಟಗೇರಿ, ನೋಡಲ್ ಅಧಿಕಾರಿ ಎಂ.ಡಿ. ಶಿವಕುಮಾರ್, ತಹಶೀಲ್ದಾರ್ ಪವನ್ಕುಮಾರ್, ಬಿಇಒ ಚಂದ್ರಯ್ಯ, ರೋಟರಿ ಅಧ್ಯಕ್ಷ ಗವಿಯಣ್ಣ, ಜಿಲ್ಲಾ ಪ್ರಾಚಾರ್ಯ ಸಂಘದ ಅಧ್ಯಕ್ಷ ಪ್ರಭಾಕರ್ರೆಡ್ಡಿ, ಕಸಾಪ ಅಧ್ಯಕ್ಷ ಬಸವರಾಜಪ್ಪ, ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಅಧ್ಯಕ್ಷ ಬಸವರಾಜು, ಕ್ರೀಡಾಕೂಟ ಸಂಚಾಲಕ ಚಂದ್ರಶೇಖರ್, ಪ್ರಾಂಶುಪಾಲರು, ದೈಹಿಕ ಶಿಕ್ಷಕ ನಿರ್ದೇಶಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.