ತುಮಕೂರು: ನಗರದ ಬಟವಾಡಿ ಕೆಳ ಸೇತುವೆ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿರುವ ಹೊಸ ಬಡಾವಣೆ ಠಾಣೆ ಪೊಲೀಸರು, ₹1.10 ಲಕ್ಷ ಮೌಲ್ಯದ 1 ಕೆ.ಜಿ 300 ಗ್ರಾಂ ಗಾಂಜಾ ಸೊಪ್ಪು ಜಪ್ತಿ ಮಾಡಿದ್ದಾರೆ.

ರಾಜೀವ್ಗಾಂಧಿ ನಗರದ ತೌಸಿಫ್ಪಾಷ, ಗುಬ್ಬಿ ಗೇಟ್ನ ವಸೀಂ ಅಕ್ರಂ ಬಂಧಿತರು. ಇಬ್ಬರು ಪ್ರತಿ ಸೋಮವಾರ ಬಟವಾಡಿ ಬಳಿ ವ್ಯಕ್ತಿಯೊಬ್ಬರಿಂದ ಗಾಂಜಾ ಖರೀದಿಸುತ್ತಿದ್ದರು. ಅದನ್ನು ನಗರದ ವಿವಿಧೆಡೆ ಮಾರಾಟ ಮಾಡುತ್ತಿದ್ದರು. ಸೋಮವಾರ ಸಂಜೆ ಬ್ಯಾಗ್ನಲ್ಲಿ ಗಾಂಜಾ ಸೊಪ್ಪು ಹಿಡಿದುಕೊಂಡು ನಿಂತಿದ್ದರು.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರು ಪಡಿಸಿದರು. ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಹೊಸ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.