ಕುಂದಾಪುರ: ಹಟ್ಟಿಯಂಗಡಿಯ ಶ್ರೀಸಿದ್ಧಿ ವಿನಾಯಕ ದೇವಸ್ಥಾನ, ಗುಡ್ಡಟ್ಟು ವಿನಾಯಕ ದೇವಸ್ಥಾನ, ಕುಂಭಾಸಿ ಆನೆಗುಡ್ಡೆ ಶ್ರೀವಿನಾಯಕ ದೇವಸ್ಥಾನವೂ ಸೇರಿದಂತೆ ತಾಲ್ಲೂಕಿನ ಗಣಪತಿ ದೇವಸ್ಥಾನದಲ್ಲಿ ಬುಧವಾರ ವಿನಾಯಕ ಚೌತಿ ಪ್ರಯುಕ್ತ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ವೈಭವದಿಂದ ನಡೆದವು.

ಬೆಳಿಗ್ಗೆಯಿಂದಲೇ ದೇವಸ್ಥಾನಕ್ಕೆ ಬಂದ ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದುಕೊಂಡರು. ಶ್ರೀಕ್ಷೇತ್ರದಲ್ಲಿ ನಿರ್ಮಾಲ್ಯ ವಿಸರ್ಜನಾ ಪೂಜೆ, ಅಪರಾಹ್ನ ಪಂಚಾಮೃತ ಸಹಿತ ಉಪನಿಷತ್ ಕಲಶಾಭಿಷೇಕ, ಲೋಕ ಕಲ್ಯಾಣಾರ್ಥವಾಗಿ ಅಷ್ಟೋತ್ತರ ಸಹಸ್ರ ನಾಲಿಕೇರ ಗಣಯಾಗ, ಸತ್ಯ ಗಣಪತಿ ವ್ರತ ಸಹಿತ ಮಹಾಪೂಜೆ, ಮೂಡುಗಣಪತಿ, ಸಾಮೂಹಿಕ ರಂಗಪೂಜೆ, ಅಷ್ಟೋತ್ತರ ಸೇವೆ ಹಾಗೂ ಕಡುಬಿನ ಸೇವೆ, ಅನ್ನಸಂತರ್ಪಣೆ ನಡೆದವು. ಆನೆಗುಡ್ಡೆಯಲ್ಲಿ ರಾತ್ರಿ ಶ್ರೀದೇವರ ಸ್ವರ್ಣ ಪಲ್ಲಕ್ಕಿ ಉತ್ಸವವನ್ನು ನಡೆಸಲಾಯಿತು.

ಪ್ರಸಾದ ವಿತರಣೆ: ಹಟ್ಟಿಯಂಗಡಿ ಶ್ರೀಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಆಡಳಿತ ಧರ್ಮದರ್ಶಿ ಎಚ್.ಬಾಲಚಂದ್ರ ಭಟ್ ಅವರ ನೇತೃತ್ವದಲ್ಲಿ, ಅಷ್ಟೋತ್ತರ ಸಹಸ್ರ ನಾಲಿಕೇರ ಮಹಾಗಣಯಾಗ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ, ಮಹಾ ಸಂತರ್ಪಣೆ ನಡೆಸಲಾಯಿತು. ಸಂಜೆ ಮಂಗಳೂರಿನ ಕದ್ರಿ ರಮೇಶ್ನಾಥ್ ಬಳಗದವರಿಂದ ಸ್ಯಾಕ್ಸೋಫೋನ್ ವಾದನ ಹಾಗೂ ರಾತ್ರಿ ರಂಗಪೂಜೆ ನಡೆದವು. ಗುರುವಾರ ಶ್ರೀಸತ್ಯಗಣಪತಿ ವ್ರತ, ಲಕ್ಷ ದೂರ್ವಾರ್ಚನೆ ಜರುಗಿತು. ಶುಕ್ರವಾರ ಸಿಂದೂರಾರ್ಚನೆ ನಡೆಯಲಿದೆ.

ಕುಂಭಾಸಿಯ ಆನೆಗುಡ್ಡೆ ವಿನಾಯಕ ದೇವಸ್ಥಾನದಲ್ಲಿ ನಡೆದ 1008 ತೆಂಗಿನಕಾಯಿಯ ಅಷ್ಟೋತ್ತರ ಸಹಸ್ರ ನಾಲಿಕೇರ ಗಣಯಾಗಕ್ಕೆ, ನೂರಾರೂ ತೆಂಗಿನ ಕಾಯಿಯ ಪಂಚಕಜ್ಜಾಯ, ಕಡಲೆ ಮತ್ತು ಸಕ್ಕರೆ, ಎಳ್ಳು ಸೇರಿದಂತೆ ಇತ್ಯಾದಿ 5 ವಿವಿಧ ದ್ರವ್ಯವನ್ನೊಳಗೊಂಡ ಕ್ವಿಂಟಲ್ ತೂಕದ ಪಂಚಕಜ್ಜಾಯ, ವಿವಿಧ ಸಾಹಿತ್ಯಗಳನ್ನೊಳಗೊಂಡ ಅಷ್ಟ ದ್ರವ್ಯದ ಪಂಚಕಜ್ಜಾಯ, ಸಾವಿರಾರೂ ಮೂಡೆ (ಕೊಟ್ಟೆ ಕಡುಬು ಪ್ರಸಾದ), ಅಪ್ಪ ಮೊದಕಗಳಲ್ಲದೇ ವಿಶೇಷವಾದ ಖಾದ್ಯಗಳನ್ನು ದೇವರಿಗೆ ಸಮರ್ಪಿಸಲಾಯಿತು. ಪರ್ಯಾಯ ಅರ್ಚಕರ ನೇತೃತ್ವದಲ್ಲಿ 21 ಬಗೆಯ ವಿವಿಧ ಪಂಚಖಾದ್ಯಗಳನ್ನು ದೇವರಿಗೆ ಸಮರ್ಪಿಸಿ, ಬಳಿಕ ಭಕ್ತರಿಗೆ ವಿತರಿಸಲಾಯಿತು.

ಹಟ್ಟಿಯಂಗಡಿ ಹಾಗೂ ಆನೆಗುಡ್ಡೆ ದೇವಳಕ್ಕೆ 50 ಸಾವಿರಕ್ಕೂ ಅಧಿಕ ಭಕ್ತರು ಬಂದು, ದೇವರ ದರ್ಶನ ಪಡೆದುಕೊಂಡರು. ಶಾಸಕ ಯಶ್ಪಾಲ್ ಸುವರ್ಣ, ಮುಖಂಡ ಗೋಪಾಲ ಪೂಜಾರಿ, ಬಿ.ಎಂ.ಸುಕುಮಾರ ಶೆಟ್ಟಿ, ಉದ್ಯಮಿಗಳಾದ ಮಲ್ಯಾಡಿ ಶಿವರಾಮ ಶೆಟ್ಟಿ, ಮೊಳಹಳ್ಳಿ ದಿನೇಶ್ ಹೆಗ್ಡೆ ಅವರು ದೇವರ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು.

ಆನೆಗುಡ್ಡೆ ದೇವಳದ ಅನುವಂಶಿಕ ಆಡಳಿತ ಮೊಕ್ತೇಸರ ಕೆ.ಶ್ರೀರಮಣ ಉಪಾಧ್ಯಾಯ, ಪರ್ಯಾಯ ಅರ್ಚಕರಾದ ವ್ಯಾಸ ಉಪಾಧ್ಯಾಯ ಮತ್ತು ಸಹೋದರರು, ಮಾಜಿ ಆಡಳಿತ ಮೊಕ್ತೇಸರ ಕೆ.ಸೂರ್ಯನಾರಾಯಣ ಉಪಾಧ್ಯಾಯ, ಅನುವಂಶಿಕ ಮೊಕ್ತೇಸರರಾದ ಕೆ.ನಿರಂಜನ್ ಉಪಾಧ್ಯಾಯ, ಕೆ.ಪದ್ಮನಾಭ ಉಪಾಧ್ಯಾಯ, ದೇವಳದ ವ್ಯವಸ್ಥಾಪಕ ನಟೇಶ್ ಕಾರಂತ್ ಇದ್ದರು.

ಕುಂದಾಪುರ ಉಪ ವಿಭಾಗದ ಡಿವೈಎಸ್ಪಿ ಎಚ್.ಡಿ.ಕುಲಕರ್ಣಿ, ನಿರೀಕ್ಷಕ ಜಯರಾಮ್ ಗೌಡ ಮಾರ್ಗದರ್ಶನದಲ್ಲಿ, ಎಸ್.ಐ ನಂಜಾ ನಾಯ್ಕ್, ಪುಷ್ಪಾ, ನೂತನ್, ಸುದರ್ಶನ್ ಹಾಗೂ ಕಂಡ್ಲೂರು ಠಾಣಾಧಿಕಾರಿ ಭೀಮಾಶಂಕರ್ ನೇತೃತ್ವದಲ್ಲಿ ಪೊಲೀಸರು ಸುಗಮ ಸಂಚಾರ ವ್ಯವಸ್ಥೆ ಹಾಗೂ ದೇವರ ದರ್ಶನಕ್ಕಾಗಿ ಪೂರ್ವ ಸಿದ್ಧತೆಯ ಕ್ರಮ ಕೈಗೂಂಡಿದ್ದರು.

ವಿವಿಧೆಡೆ ಚೌತಿ ಆಚರಣೆ: ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನ, ಗುಡ್ಡೆಟ್ಟು ಶ್ರೀವಿನಾಯಕ ದೇವಸ್ಥಾನ, ಕುಂದಾಪುರದ ಕುಂದೇಶ್ವರ ದೇವಸ್ಥಾನ, ಶ್ರೀಸೀತಾರಾಮಚಂದ್ರ ದೇವಸ್ಥಾನ, ಶ್ರೀನಾರಾಯಣಗುರು ಸಿದ್ಧಿ ವಿನಾಯಕ ದೇವಸ್ಥಾನ, ನಾವಡರ ಕೇರಿ ವಿನಾಯಕ ದೇವಸ್ಥಾನ, ವ್ಯಾಸರಾಜ ಮಠ, ಕೊಡ್ಲಾಡಿ ಗಣಪತಿ ದೇವಸ್ಥಾನ, ವಂಡ್ಸೆ-ನೆಂಪು, ಮಲ್ಯಾಡಿಯ ಗಣಪತಿ ದೇವಸ್ಥಾನಗಳಲ್ಲಿಯೂ ಗಣೇಶ ಚೌತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಕುಂದಾಪುರ, ಕೋಟೇಶ್ವರ, ಕೋಡಿ, ತೆಕ್ಕಟ್ಟೆ, ಉಪ್ಪಿನಕುದ್ರು, ತಲ್ಲೂರು, ಹೆಮ್ಮಾಡಿ, ಕಟ್ಬೇಲ್ತೂರು, ಬಾಳಿಕೇರಿ, ಆನಗಳ್ಳಿ, ಬಸ್ರೂರು, ಕಣ್ಣುಕೆರೆ, ಕೆದೂರು, ಬೀಜಾಡಿ, ಹುಣ್ಸೆಮಕ್ಕಿ, ಗಂಗೊಳ್ಳಿ, ನಾಡಾ, ಗುಡ್ಡೆ ಹೋಟೇಲ್, ಪಡುಕೋಣೆ ಮುಂತಾದ ಕಡೆಗಳಲ್ಲಿ ಸಾರ್ವಜನಿಕ ಗಣೇಶೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.