ಬುಧವಾರ, ಸೆಪ್ಟೆಂಬರ್ 22, 2021
22 °C
ವಿದ್ಯುತ್ ತಂತಿ ತಗುಲಿ ನವಿಲು ಸಾವು

ರಾಷ್ಟ್ರಪಕ್ಷಿಗೆ ಅಂತಿಮ ವಿದಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೈಂದೂರು: ಗಂಗೊಳ್ಳಿ ಗ್ರಾಮದ ಮೇಲ್‌ಗಂಗೊಳ್ಳಿ ಮುಖ್ಯ ರಸ್ತೆಯಲ್ಲಿ ವಿದ್ಯುತ್ ತಂತಿಗೆ ತಗುಲಿ ಬಿದ್ದು ಮೃತಪಟ್ಟ ರಾಷ್ಟ್ರಪಕ್ಷಿ ನವಿಲಿಗೆ ಅಧಿಕಾರಿಗಳು ಭಾನುವಾರ ಅಂತಿಮ ವಿದಾಯ ಹೇಳಿದರು. ಮೃತ ಗಂಡು ನವಿಲು ಐದು ವರ್ಷದ್ದಾಗಿರಬಹುದು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದರು.

ಗಂಗೊಳ್ಳಿ ಆಂಬುಲೆನ್ಸ್ ಚಾಲಕ, ಆಪತ್ಭಾಂದವ ಇಬ್ರಾಹಿಂ ಗಂಗೊಳ್ಳಿ ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಗಂಗೊಳ್ಳಿ ಠಾಣೆಯ ಪೊಲೀಸ್ ಹಾಗೂ ಕುಂದಾಪುರ ವಲಯ ಅರಾಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ, ಮಹಜರು ನಡೆಸಿದರು. ಬಳಿಕ ವಂಡ್ಸೆ ನಾಟ ಸಂಗ್ರಹಾಲಯದ ಆವರಣದಲ್ಲಿ ಚಿತೆ ನಿರ್ಮಿಸಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ರವೀಂದ್ರ ಪೂಜಾರಿ ಸಹರಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು