ಬೈಂದೂರು: ಹೊಯ್ಸಳರ ಕಾಲದಿಂದ ಪ್ರಾರಂಭಗೊಂಡ ಕಂಬಳದ ಪರಂಪರೆಯನ್ನು ಉಳಿಸಿಕೊಂಡು ಬರುವಲ್ಲಿ ಸಾಂಪ್ರದಾಯಿಕ ಕಂಬಳಗಳ ಆಯೋಜಕರ ಪಾತ್ರ ಪ್ರಮುಖವಾದದ್ದು ಎಂದು ಜಿಲ್ಲಾ ಕಂಬಳ ಸಮಿತಿ ಗೌರವಾಧ್ಯಕ್ಷ ಶಾಂತರಾಮ ಶೆಟ್ಟಿ ಬಾರ್ಕೂರು ಹೇಳಿದರು.

ತಗ್ಗರ್ಸೆ ಹೆಗ್ಡೆ ಅವರ ಮನೆ ಕಂಬಳಗದ್ದೆಯಲ್ಲಿ ಆನುವಂಶೀಯವಾಗಿ ನಡೆದು ಬಂದ ಸಾಂಪ್ರದಾಯಕ ಕಂಬಳ ಮಹೋತ್ಸವದ ಬಹುಮಾನ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು. ಸರ್ಕಾರ ಕಂಬಳ ಸಮಿತಿ ರಚನೆ ಮಾಡಿದ್ದು, ಸಾಂಪ್ರದಾಯಿಕ ಕಂಬಳಗಳಿಗೆ ಗೌರವಧನ ನೀಡುವ ಯೋಜನೆ ಹಾಕಿಕೊಂಡಿದೆ ಎಂದರು.

ಕಾರ್ಯಕ್ರಮದ ಆಯೋಜಕ, ಕಂಬಳ ಗದ್ದೆಯ ಯಜಮಾನರಾದ ಕಂಠದಮನೆ ಟಿ. ನಾರಾಯಣ್ ಹೆಗ್ಡೆ, ಕ್ರೀಡಾ ರತ್ನ ಪ್ರಶಸ್ತಿ ಪುರಸ್ಕೃತ ಭಾಸ್ಕರ ದೇವಾಡಿಗ, ಬೈಂದೂರು ತಾಲ್ಲೂಕು ಕಂಬಳ ಸಮಿತಿ ಅಧ್ಯಕ್ಷ ಮಂಜು ಪೂಜಾರಿ ಅವರನ್ನು ಸನ್ಮಾನಿಸಲಾಯಿತು.

ಕಂಬಳೋತ್ಸವದಲ್ಲಿ 60 ಜೊತೆ ಕೋಣಗಳು ಭಾಗವಹಿಸಿದ್ದವು. ಕೋಣಗಳ ಓಟದ ವೇಗಮಿತಿಯನ್ನು ಅಳೆಯಲು ಸೆನ್ಸಾರ್ ಸಾಧನ ಅಳವಡಿಸಲಾಗಿತ್ತು. ವಿಜೇತ ಕೋಣಗಳಿಗೆ ಮೂಕಾಂಬಿಕಾ ಗೇರುಬೀಜ ಕಾರ್ಖಾನೆ ತಗ್ಗರ್ಸೆ ಪ್ರಾಯೋಜಕತ್ವದಲ್ಲಿ ನಗದು ಮತ್ತು ಶಾಶ್ವತ ಫಲಕ ನೀಡಲಾಯಿತು.

ಕೊಲ್ಲೂರು ಮೂಕಾಂಬಿಕಾ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಬಾಬು ಶೆಟ್ಟಿ, ರೈತ ಮುಖಂಡ ದೀಪಕ್ ಕುಮಾರ್ ಶೆಟ್ಟಿ, ರಾಜ್ಯ ಕಂಬಳ ಸಮಿತಿ ಸದಸ್ಯ ವಿಕ್ರಂ ಪೂಜಾರಿ, ಬೈಂದೂರು ಪಟ್ಟಣ ಪಂಚಾಯಿತಿ ನಾಮ ನಿರ್ದೇಶಿತ ಸದಸ್ಯ ಸದಾಶಿವ ಡಿ. ಪಡುವರಿ, ಮುಖಂಡ ಪುಷ್ಪರಾಜ ಶೆಟ್ಟಿ ಮತ್ತಿತರರು ಇದ್ದರು.

ಕಂಬಳದ ಫಲಿತಾಂಶ ಹಲಗೆ ವಿಭಾಗ: ಪ್ರಥಮ- ಆತ್ಮಜ್ ನೀರಜ್ ಬಾರ್ಕೂರು ಕೋಣಗಳು ದ್ವಿತೀಯ– ತೆಕ್ಕಟ್ಟೆ ಮೇಲ್ಗುಡ್ಡೆಮನೆ ದಿ.ಆನಂದ ದೇವಾಡಿಗರ ಕೋಣಗಳು ಹಗ್ಗ ಹಿರಿಯ ವಿಭಾಗ: ಪ್ರಥಮ– ಪನ್ನಗ ಹೆಬ್ಬಾರ್ ಭಟ್ಕಳದ ಕೋಣಗಳು ದ್ವಿತೀಯ– ದಿ.ಶೀನ ಪೂಜಾರಿ ಕೋಟ ಮಣೂರು ಪಡುಕೆರೆಯ ಕೋಣಗಳು ಹಗ್ಗ ವಿಭಾಗ ಅತಿ ಕಿರಿಯ: ಪ್ರಥಮ– ಮಂಜುನಾಥ ಗೌಡ ಗೋಳಿಹೊಳೆಯ ಕೋಣಗಳು ದ್ವಿತೀಯ– ಆಸಿಕಾನ ಜೋಗನಮನೆ ಭಟ್ಕಳದ ಕೋಣಗಳು ಹಗ್ಗ ವಿಭಾಗ ಕಿರಿಯ: ಪ್ರಥಮ– ಮಂಜುನಾಥ ಮೆತ್ತಿನಮನೆ ಮಯ್ಯಡಿಯ ಕೋಣಗಳು ದ್ವಿತೀಯ– ಸಮೃದ್ದಿ ಪ್ರಸಿದ್ದಿ ದುರ್ಗಾ ಫ್ರೆಂಡ್ಸ್ ಕಂಚಿಕಾನ್ ಕೋಣಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.