ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಕ್ತರಿಂದ ಕೆಂಡ ಸೇವೆ

Last Updated 25 ಜನವರಿ 2021, 1:11 IST
ಅಕ್ಷರ ಗಾತ್ರ

ಭಟ್ಕಳ: ತಾಲ್ಲೂಕಿನ ಪ್ರಸಿದ್ಧ ಸೋಡಿಗದ್ದೆ ಮಹಾಸತಿ ದೇವಿಯ ಜಾತ್ರೆಯ ಎರಡನೇ ದಿನವಾದ ಭಾನುವಾರ ಕೆಂಡ ಸೇವೆ ನಡೆಯಿತು. ನೂರಾರು ಭಕ್ತರು ದೇವಿಯ ಸಮ್ಮುಖದಲ್ಲಿ ಕೆಂಡ ತುಳಿದು ಹರಕೆ ಅರ್ಪಿಸಿದರು.

ಹಲವು ತಲೆಮಾರುಗಳಿಂದ ದೇವಸ್ಥಾನಕ್ಕೆ ನಡೆದುಕೊಂಡ ಬಂದ ಭಕ್ತರು, ಕಷ್ಟ ಕಾಲದಲ್ಲಿ ಹರಕೆ ಹೊತ್ತ ಮಹಿಳೆಯರು ಸೇರಿದಂತೆ ಎಲ್ಲರೂ ಕೆಂಡಸೇವೆಯಲ್ಲಿ ಭಾಗಿಯಾದರು. ಮುಂಜಾನೆಯೇ ದೇವಸ್ಥಾನದ ಮುಂಭಾಗದಲ್ಲಿ ಕಟ್ಟಿಗೆಗಳಿಗೆ ಬೆಂಕಿ ಹಾಕಿ ಸಿದ್ದಪಡಿಸಿದ ಕೆಂಡದಲ್ಲಿ ಭಕ್ತಾಧಿಗಳು ಪೂಜಾರಿಗಳ ನೇತೃತ್ವದಲ್ಲಿ ಕೆಂಡ ಸೇವೆಯನ್ನು ನೇರವೇರಿಸಿದರು.

ಸೋಡಿಗದ್ದೆ ದೇವಸ್ಥಾನಕ್ಕೆ ಕೇವಲ ಭಟ್ಕಳ ತಾಲ್ಲೂಕಿನ ಜನತೆ ಮಾತ್ರವಲ್ಲದೇ, ವಿವಿಧ ಜಿಲ್ಲೆಗಳ ಭಕ್ತಾಧಿಗಳು ಸೇರಿದಂತೆ ನೆರೆಯ ರಾಜ್ಯಗಳಿಂದಲೂ ಅನೇಕರು ಪಾಲ್ಗೊಳ್ಳುವುದು ವಿಶೇಷ. ದೇವಿಯ ದರ್ಶನಕ್ಕಾಗಿ ಗಂಟಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಪೂಜೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT