‘1008 ಮಹಾಮಂಡಲೇಶ್ವರ’ ಬಿರುದು
2008ರಲ್ಲಿ ಶ್ರೀ ರಾಮ ಕ್ಷೇತ್ರದ ಅಂದಿನ ಸ್ವಾಮೀಜಿ ಶ್ರೀ ಆತ್ಮಾನಂದ ಶ್ರೀಗಳಿಂದ ಸನ್ಯಾಸ ದೀಕ್ಷೆ ಪಡೆದ ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ಕ್ಷೇತ್ರದ ಪೀಠಾಧೀಶರಾದರು. ತಮ್ಮ ಮಠದಲ್ಲಿ ಬಡ ವಿದ್ಯಾರ್ಥಿಗಳಿಗೆ ಉಚಿತ ಔದ್ಯೋಗಿಕ ತರಬೇತಿ ನೀಡುವ ಒಂದು ಅತ್ಯುತ್ತಮ ಶಿಕ್ಷಣ ಸಂಸ್ಥೆ ಆರಂಭಿಸುವ ಮೂಲಕ ಶ್ರೀಗಳು ಗಮನ ಸೆಳೆದರು. ಈ ವರ್ಷ ಪ್ರಯಾಗ್ ರಾಜ್‌ನಲ್ಲಿ ನಡೆದ ಕುಂಭಮೇಳದಲ್ಲಿ ಪಾಲ್ಗೊಂಡು ಅಲ್ಲಿಯ ನಾಗಾ ಸಾಧುಗಳಿಂದ ‘1008 ಶ್ರೀಮಹಾ ಮಂಡಲೇಶ್ವರ’ ಎಂಬ ಸ್ಥಾನಮಾನ ಪಡೆದಿರುವುದು ವಿಶೇಷ. ಹರಿದ್ವಾರದಲ್ಲಿ ತಮ್ಮ ಶಾಖಾ ಮಠ ಸ್ಥಾಪಿಸಿರುವ ಶ್ರೀಗಳು ಅಯೋಧ್ಯೆಯಲ್ಲೂ ಶಾಖಾಮಠ ಸ್ಥಾಪಿಸುವ ಪ್ರಯತ್ನದಲ್ಲಿದ್ದಾರೆ.