ಅಂಕೋಲಾ: ಪಟ್ಟಣದ ಹೊನ್ನಿಕೇರಿಯ ಮೋಹನ ನಾಯಕ ಎಂಬುವವರ ಮನೆ ಬಾಗಿಲು ಮುರಿದು ನಗದು, ಆಭರಣಗಳನ್ನು ಕಳವು ಮಾಡಿರುವ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಭಾನುವಾರ ಪ್ರಕರಣ ದಾಖಲಾಗಿದೆ.
‘ಸೆ.28ರಂದು ಪತ್ನಿಯ ಆರೋಗ್ಯ ತಪಾಸಣೆಗೆಂದು ಹೊರ ಜಿಲ್ಲೆಯ ಆಸ್ಪತ್ರೆಗೆ ತೆರಳಿದ್ದ ವೇಳೆ ಕಳವು ನಡೆದಿದೆ’ ಎಂದು ಮೋಹನ ನಾಯ್ಕ ದೂರು ನೀಡಿದ್ದಾರೆ.
‘ಮೂರು ಕಪಾಟುಗಳನ್ನು ಒಡೆದು ಸುಮಾರು ₹70 ಸಾವಿರ ನಗದು, ಬಂಗಾರದ ಬಳೆ, ಕರಿಮಣಿ ಸರ ಸೇರಿದಂತೆ ಅಂದಾಜು ₹7 ಲಕ್ಷ ಮೌಲ್ಯದ ಸ್ವತ್ತುಗಳನ್ನು ಕಳವು ಮಾಡಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.