ಕಾರವಾರ (ಉತ್ತರ ಕನ್ನಡ ಜಿಲ್ಲೆ): ಇಲ್ಲಿನ ಗುಡ್ಡೆಹಳ್ಳಿ ಗ್ರಾಮದಲ್ಲಿ ಶನಿವಾರ 24 ಸೆಂ.ಮೀ ಅಗಲದ ರೆಕ್ಕೆ ಹೊಂದಿದ್ದ ದೈತ್ಯ ಪತಂಗ (ಅಟ್ಲಾಸ್ ಮೋತ್) ಕಂಡುಬಂದಿದೆ. ಹವ್ಯಾಸಿ ಛಾಯಾಗ್ರಾಹಕ ರವಿ ಗೌಡಾ ಎಂಬುವವರು ದೈತ್ಯ ಪತಂಗದ ಚಿತ್ರ ಸೆರೆಹಿಡಿದ್ದಾರೆ.

‘ಕರಾವಳಿ ಭಾಗದ ಕಾಡುಗಳಲ್ಲಿ ದೈತ್ಯ ಪತಂಗ ಕಾಣಿಸಿಕೊಳ್ಳುತ್ತದೆ. ಪ್ರಪಂಚದಲ್ಲಿ ದೊಡ್ಡ ಗಾತ್ರದಲ್ಲಿರುವ ಪತಂಗಗಳ ಪೈಕಿ ಇದೂ ಒಂದು. ಕೆಲ ನಿರ್ದಿಷ್ಟ ಮರಗಳ ಎಲೆಗಳ ಮೇಲೆ ಮಾತ್ರ ಮೊಟ್ಟೆ ಇಡುತ್ತವೆ. ಮೊಟ್ಟೆಯಿಂದ ಹೊರಬಂದ ಹುಳು ಆ ಮರದ ಎಲೆಗಳನ್ನು ತಿಂದು ಶಕ್ತಿಯನ್ನು ಸಂಗ್ರಹಿಸಿ ಕೋಶವನ್ನು ರಚಿಸುತ್ತದೆ. ಸಾವಿಗೂ ಮುನ್ನ ಹೆಣ್ಣು ಪತಂಗ ಮೊಟ್ಟೆ ಇಟ್ಟು ನಂತರ ಸಾಯುತ್ತದೆ’ ಎಂದು ಕೀಟ ತಜ್ಞರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.