ಈಗಾಗಲೇ ಅಳವಡಿಸಿದ್ದ ತೇಲುವ ಕಾಂಕ್ರೀಟ್ ಜಟ್ಟಿಗೆ ಮತ್ತು ಪ್ರಸ್ತಾವಿತ ಹೊಸ ಜಟ್ಟಿಗಳಿಗೆ ಸಿಆರ್‌ಝಡ್ ಅನುಮತಿಗೆ ಅರ್ಜಿ ಸಲ್ಲಿಸಿದ್ದು ಒಂದೆರಡು ವಾರದಲ್ಲಿ ಅನುಮತಿ ಸಿಗುವ ನಿರೀಕ್ಷೆ ಇದೆ
ವಿನಾಯಕ ನಾಯ್ಕ ಬಂದರು ಎಂಜಿನಿಯರ್
ಹೊಸದಾಗಿ 4 ಜಟ್ಟಿ ಅಳವಡಿಕೆ
‘ಸಾಗರಮಾಲಾ ಯೋಜನೆಯಡಿ ಜಿಲ್ಲೆಯಲ್ಲಿ ಆರು ತೇಲುವ ಕಾಂಕ್ರೀಟ್ ಜಟ್ಟಿಗಳ ಅಳವಡಿಕೆಗೆ ಅನುಮತಿ ಸಿಕ್ಕಿದೆ. ಅವುಗಳಲ್ಲಿ ಎರಡು ಜಟ್ಟಿ ಈಗಾಗಲೆ ಸದಾಶಿವಗಡದ ಬಳಿ ಅಳವಡಿಕೆಯಾಗಿದೆ. ಅದರ ಸಮೀಪದಲ್ಲಿ ಇನ್ನೂ 3 ಜಟ್ಟಿ ಅಳವಡಿಕೆಯಾಗಲಿದೆ. ಕಾಳಿ ದ್ವೀಪದಲ್ಲಿ ಒಂದು ಜಟ್ಟಿ ಅಳವಡಿಕೆಯ ಪ್ರಸ್ತಾವ ಇದೆ. ಜಲಸಾಹಸ ಚಟುವಟಿಕೆ ಪ್ರವಾಸೋದ್ಯಮಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಜಟ್ಟಿಗಳ ಸ್ಥಾಪನೆಯಾಗಲಿದೆ’ ಎಂದು ಬಂದರು ಜಲಸಾರಿಗೆ ಮಂಡಳಿಯ ಬಂದರು ಎಂಜಿನಿಯರ್ ವಿನಾಯಕ ನಾಯ್ಕ ತಿಳಿಸಿದರು.