ಹೊನ್ನಾವರ: ತಾಲ್ಲೂಕಿನ ವಂದೂರು ಜಡ್ಡಿಗದ್ದೆಯಲ್ಲಿ ಶನಿವಾರ ನಸುಕಿನ ಜಾವ ಚಿರತೆಯೊಂದು ಬೋನಿನಲ್ಲಿ ಸೆರೆಯಾಗಿದೆ.

ಅರಣ್ಯ ಇಲಾಖೆ ನೀಡಿದ್ದ ಬೋನಿನಲ್ಲಿ ಊರಿನ ಜನರೇ ಚಿರತೆ ಸೆರೆಹಿಡಿಯಲು ಯತ್ನಿಸುತ್ತಿದ್ದರು. ಕೊನೆಗೂ ಗ್ರಾಮಸ್ಥರ ಪ್ರಯತ್ನ ಫಲ ನೀಡಿದೆ.

'ಶುಕ್ರವಾರ ಸಂಜೆ ಬೋನಿನಲ್ಲಿ ನಾಯಿ ಮರಿಯೊಂದನ್ನು ಕಟ್ಟಿ ಹಾಕಲಾಗಿತ್ತು. ನಾಯಿಯನ್ನು ಹಿಡಿಯಲು ಬಂದು ಚಿರತೆ ಬೋನಿನಲ್ಲಿ ಸೆರೆಯಾಗಿದೆ. ನಸುಕಿನಲ್ಲಿ ಚಿರತೆ ಸೆರೆಯಾಗಿರುವುದು ಕಂಡುಬಂತು' ಎಂದು ಸ್ಥಳೀಯಯರಾದ ನಿವೃತ್ತ ಪ್ರಾದ್ಯಾಪಕ ಜಿ. ಎಸ್. ಭಟ್ಟ ತಿಳಿಸಿದರು.

'ಕಳೆದ ಹಲವು ದಿನಗಳಿಂದ ಗ್ರಾಮದಲ್ಲಿ ಚಿರತೆ ದಾಳಿ ನಡೆಯುತ್ತಿರುವುದು ಜನರನ್ನು ಆತಂಕಕ್ಕೀಡು ಮಾಡಿತ್ತು' ಎಂದು ಹೇಳಿದರು.

ಕಳೆದ ವರ್ಷವೂ ಇದೇ ಜಾಗದಲ್ಲಿ ಚಿರತೆಯೊಂದು ಬೋನಿನಲ್ಲಿ ಸೆರೆ ಸಿಕ್ಕಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.