ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸೀದಿ ಕೆಡವಿ ಅಪಮಾನಕ್ಕೆ ಸೇಡು ತೀರಿಸಿಕೊಳ್ಳಬೇಕಿದೆ: ಸಂಸದ ಅನಂತಕುಮಾರ ಹೆಗಡೆ

Published 13 ಜನವರಿ 2024, 12:45 IST
Last Updated 13 ಜನವರಿ 2024, 12:45 IST
ಅಕ್ಷರ ಗಾತ್ರ

ಕುಮಟಾ: ‘ಬಾಬ್ರಿ ಮಸೀದಿಯಂತೆ ರಾಜ್ಯದ ಹಲವೆಡೆ ಮಸೀದಿಗಳನ್ನು ಕೆಡವಿ ಹಾಕುವ ಮೂಲಕ ಹಿಂದೂ ಸಮುದಾಯಕ್ಕೆ ಆದ ಅಪಮಾನಕ್ಕೆ ಸೇಡು ತೀರಿಸಿಕೊಳ್ಳುವವರೆಗೆ ಸುಮ್ಮನೆ ಕುಳಿತುಕೊಳ್ಳಬಾರದು’ ಎಂದು ಸಂಸದ ಅನಂತಕುಮಾರ ಹೆಗಡೆ ಪಟ್ಟಣದಲ್ಲಿ ಶನಿವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಕರೆ ನೀಡಿದರು.

‘ಭಟ್ಕಳದ ಚಿನ್ನದ ಪಳ್ಳಿಯ ಮಸೀದಿ, ಶಿರಸಿಯ ಸಿ.ಪಿ.ಬಝಾರದಲ್ಲಿರುವ ಮಸೀದಿ, ಶ್ರೀರಂಗ ಪಟ್ಟಣದಲ್ಲಿರುವ ಮಸೀದಿಗಳೆಲ್ಲವೂ ಒಂದು ಕಾಲದಲ್ಲಿ ಹಿಂದೂ ದೇವಾಲಯಗಳಾಗಿದ್ದವು’ ಎಂದರು.

‘ಜಾತಿ, ಧರ್ಮ, ಭಾಷೆಯ ಹೆಸರಿನಲ್ಲಿ ಹಿಂದೂ ಸಮುದಾಯವನ್ನು ಒಡೆಯುವ ಪ್ರಯತ್ನ ನಡೆದಿದೆ. ಕಾಂಗ್ರೆಸ್‍ನಲ್ಲಿರುವ ಸಿದ್ದರಾಮಯ್ಯನಂತಹ ನಾಯಕರು ಇಂತಹ ಪ್ರಯತ್ನ ಮಾಡಿದ್ದಾರೆ’ ಎಂದರು.

‘ಕಾಂಗ್ರೆಸ್ ನಮ್ಮ ವಿರೋಧಿಯಲ್ಲ. ರಾಜಕೀಯವಾಗಿ ಅದೊಂದು ವಿರೋಧ ಪಕ್ಷವಷ್ಟೆ. ಸನಾತನ ವಿರೋಧಿಗಳು, ಹಿಂದುತ್ವದ ವಿರೋಧಿಗಳು ನಮ್ಮ ನಿಜವಾದ ವಿರೋಧಿಗಳು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT