ಕಾಳುಮೆಣಸು ದಾಸ್ತಾನಿಟ್ಟು ದರ ಏರಿಕೆ ಆಗದಿದ್ದರೆ ಸಹಕಾರ ಸಂಘಗಳಿಗೆ ಆರ್ಥಿಕ ಹೊಡೆತ ಬೀಳುತ್ತದೆ. ಹೀಗಾಗಿ ಆಮದು ಕಾಳುಮೆಣಸಿನ ಮೇಲೆ ನಿರ್ಬಂಧ ಹೇರಿ ದೇಶೀಯ ಉತ್ಪನ್ನಕ್ಕೆ ಪ್ರೋತ್ಸಾಹ ನೀಡಬೇಕಿದೆ
ವಿನಯ ಹೆಗಡೆ ಮಂಡೆಮನೆ ಟಿಎಂಎಸ್ ಮುಖ್ಯ ಕಾರ್ಯನಿರ್ವಾಹಕ
ಅಡಿಕೆಯ ನಂತರದ ಸ್ಥಾನ
ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಖ್ಯವಾಗಿ ಶಿರಸಿ ಯಲ್ಲಾಪುರ ಮತ್ತು ಸಿದ್ದಾಪುರ ತಾಲ್ಲೂಕುಗಳಲ್ಲಿ ಕಾಳುಮೆಣಸು ಮುಖ್ಯ ಬೆಳೆಯಾಗಿದ್ದು ಅಡಿಕೆಯ ನಂತರ ಎರಡನೇ ಸ್ಥಾನದಲ್ಲಿದೆ. ಈ ಬೆಳೆ ಕೊಳೆ ರೋಗದಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಕ್ಲಸ್ಟರ್ ಅಭಿವೃದ್ಧಿ ಯೋಜನೆಯಂತಹ ಕೇಂದ್ರ ಸರ್ಕಾರದ ಯೋಜನೆಗಳ ಮೂಲಕ ಬೆಳೆಗಾರರಿಗೆ ಪ್ರೋತ್ಸಾಹ ಸಿಗುತ್ತಿದೆ. ಹಲವು ರೈತರು ವಿವಿಧ ತಳಿಗಳನ್ನು ಬೆಳೆಸುತ್ತಿದ್ದು ಟಿಶ್ಯೂ ಕಲ್ಚರ್ ಮೂಲಕ ಉತ್ತಮ ಇಳುವರಿ ಪಡೆಯುತ್ತಿದ್ದಾರೆ. ಅಂದಾಜು 10 ಸಾವಿರ ಹೆಕ್ಟೇರ್‌ಗಿಂತಲೂ ಹೆಚ್ಚಿನ ಪ್ರದೇಶದಲ್ಲಿ ಕಾಳುಮೆಣಸು ಬೆಳೆಯಲಾಗುತ್ತಿದ್ದು ವಾರ್ಷಿಕ ಸರಾಸರಿ ಪ್ರತಿ ಹೆ.ಗೆ 8–10 ಕ್ವಿಂಟಲ್ ಇಳುವರಿ ಪಡೆಯಲಾಗುತ್ತದೆ. ಒಂದು ಕ್ವಿಂ. ಕಾಳುಮೆಣಸಿಗೆ ಪ್ರಸ್ತುತ ದರ ₹64 ಸಾವಿರದಿಂದ ₹66 ಸಾವಿರ ಇದೆ.