ಹಾರ್ಸಿಕಟ್ಟಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಶೋಕ ಪ್ರೌಢಶಾಲೆಯ ಹತ್ತಿರ ಎರಡು ಕಡೆ, ಹೊನ್ನೆಹದ್ದ ಹಾಗೂ ಮಾನಿಹೊಳೆ ಬಸ್ ನಿಲ್ದಾಣದ ಸಮೀಪ ಅಳವಡಿಸಿದ್ದ ಸೋಲಾರ್ ಲೈಟಿನ ಬ್ಯಾಟರಿಯನ್ನು ಈ ಹಿಂದೆ ಯಾರೋ ಕಳವು ಮಾಡಿಕೊಂಡು ಹೋಗಿದ್ದು ಈ ಕುರಿತು ಗ್ರಾಮ ಪಂಚಾಯಿತಿಯವರು ಪೊಲೀಸರಿಗೆ ದೂರು ನೀಡಿದ್ದರೂ ಏನು ಪ್ರಯೋಜನವಾಗಿಲ್ಲ. ಪೊಲೀಸರು ರಾತ್ರಿ ಗಸ್ತು ಕಾಯಾಚರಣೆ ನಡೆಸಬೇಕು. ಗ್ರಾಮೀಣ ಭಾಗದಲ್ಲಿ ನಡೆಯುವ ಕಳವನ್ನು ತಡೆಯಬೇಕು ಎಂದು ವಾಜಗದ್ದೆ, ಮುಠ್ಠಳ್ಳಿ, ಹಾರ್ಸಿಕಟ್ಟಾ ಸುತ್ತಮುತ್ತಲಿನ ಸಾರ್ವಜನಿಕರು ಆಗ್ರಹಿಸಿದ್ದಾರೆ.