ಹೊಸಪೇಟೆ (ವಿಜಯನಗರ): ವಿಜಯನಗರ ಜಿಲ್ಲೆಯಲ್ಲಿ ಮಳೆ ಅಷ್ಟಾಗಿ ಇಲ್ಲದಿದ್ದರೂ ತುಂಗಭದ್ರಾ ಜಲಾಶಯಕ್ಕೆ ಭರ್ಜರಿಯಾಗಿಯೇ ನೀರು ಹರಿದುಬರುತ್ತಿದ್ದು, ಆರು ಕ್ರೆಸ್ಟ್ಗೇಟ್ಗಳು ನಿಶ್ಚಿಲವಾಗಿರುವುದರಿಂದ ಅಣೆಕಟ್ಟೆಯಲ್ಲಿ ನೀರಿನ ನಿರ್ವಹಣೆಗೆ ತುಂಗಭದ್ರಾ ಮಂಡಳಿ ಈ ಬಾರಿ ಸ್ವಲ್ಪ ಹೆಚ್ಚೇ ಸಾಹಸ ಮಾಡುತ್ತಿದೆ.

ಗೇಟ್ಗಳು ಶಿಥಿಲಗೊಂಡಿರುವುದರಿಂದ ಈ ಮಳೆಗಾಲ ಮುಗಿದರೆ ಸಾಕು ಎಂಬ ಮನಸ್ಥಿತಿಯಲ್ಲಿ ಮಂಡಳಿ ಇದ್ದಂತಿದ್ದು, ಮಲೆನಾಡು ಭಾಗದಲ್ಲಿ ಅಧಿಕ ಮಳೆ ಆಗುತ್ತಿರುವುದರಿಂದ ಒಳಹರಿವಿನಷ್ಟೇ ಹೊರಹರಿವನ್ನೂ ಕಾಯ್ದುಕೊಳ್ಳುವ ಪ್ರಯತ್ನದಲ್ಲಿ ಮಂಡಳಿಯ ಅಧಿಕಾರಿಗಳು ನಿರತರಾಗಿದ್ದಾರೆ.

ತಜ್ಞರ ಸಲಹೆಯಂತೆ ಜಲಾಶಯದಲ್ಲಿ 80 ಟಿಎಂಸಿ ಅಡಿಯಷ್ಟು ಮಾತ್ರ ನೀರು ಸಂಗ್ರಹಿಸಿ ಇಟ್ಟುಕೊಳ್ಳುವ ಅನಿವಾರ್ಯತೆ ಇದೆ. ಇದೀಗ ಅಧಿಕ ಒಳಹರಿವು ಇರುವ ಕಾರಣ ನೀರಿನ ಸಂಗ್ರಹವನ್ನು 75 ಟಿಎಂಸಿ ಅಡಿಯಷ್ಟು ತಗ್ಗಿಸಲಾಗಿದೆ. ಒಂದು ವೇಳೆ ಏಕಾಏಕಿ ಅಧಿಕ ಪ್ರಮಾಣದಲ್ಲಿ ನೀರು ಹರಿದುಬಂದರೆ ಧಕ್ಕೆ ಆಗಬಾರದು ಎಂಬ ಕಾರಣಕ್ಕೆ ಈ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ತುಂಗಭದ್ರಾ ಮಂಡಳಿಯ ಮೂಲಗಳು ತಿಳಿಸಿವೆ.

2 ಲಕ್ಷ ಕ್ಯೂಸೆಕ್ನಷ್ಟು ಒಳಹರಿವು ಇದ್ದರೂ 26 ಗೇಟ್ಗಳಿಂದಲೇ ಅಷ್ಟೂ ನೀರನ್ನು ಹೊರಗೆ ಕಳುಹಿಸಬಹುದು ಎಂದು ಮಂಡಳಿಯ ಕಾರ್ಯದರ್ಶಿ ಒ.ಆರ್.ಕೆ.ರೆಡ್ಡಿ ತಿಳಿಸಿದ್ದಾರೆ. ಅದರಂತೆ ಸದ್ಯ 1.13 ಲಕ್ಷ ಕ್ಯೂಸೆಕ್ನಷ್ಟು ಒಳಹರಿವಿದ್ದು, 1.07 ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ, ಕಾಲುವೆಗಳಿಗೆ ಹರಿಯುವ ನೀರು ಸೇರಿದಂತೆ ಒಟ್ಟು 1.22 ಲಕ್ಷ ಕ್ಯೂಸೆಕ್ ನೀರು ಅಣೆಕಟ್ಟೆಯಿಂದ ಹೊರಗೆ ಹರಿಯುತ್ತಿದೆ.

ಮುಳುಗಡೆ ಇಲ್ಲ:

ಹಂಪಿಯಲ್ಲಿ ಪುರಂದರ ಮಂಟಪ ತುಂಗಭದ್ರಾ ನದಿಯಲ್ಲೇ ಇದ್ದು, 25 ಸಾವಿರ ಕ್ಯೂಸೆಕ್ನಷ್ಟು ನೀರು ಹರಿದರೂ ಅದು ಬಹುತೇಕ ಮುಳುಗಿಬಿಡುತ್ತದೆ. ಇತರ ಸ್ಮಾರಕಗಳಿಗೆ ಅಂತಹ ಮುಳುಗಡೆ ಭೀತಿ ಇಲ್ಲ. 1.25 ಲಕ್ಷ ಕ್ಯೂಸೆಕ್ನಷ್ಟು ನೀರು ಹರಿದಾಗ ಹಂಪಿ ವಿರೂಪಾಕ್ಷ ದೇವಸ್ಥಾನ ಸಮೀಪದ ಸ್ನಾನಘಟ್ಟದಲ್ಲಿ ಅನುಷ್ಠಾನ ಮಂಟಪಗಳು ಬಹುತೇಕ ಮುಳುಗಡೆಯಾಗುತ್ತವೆ. ಸದ್ಯ ಅಂತಹ ಸ್ಥಿತಿ ಇದೆ. ಚಕ್ರತೀರ್ಥದಲ್ಲಿರುವ ಕೋದಂಡರಾಮ ದೇವಸ್ಥಾನಕ್ಕೆ ಮೆಟ್ಟಿಲ ತನಕ ನೀರು ಬಂದರೂ, 1.80 ಲಕ್ಷ ಕ್ಯೂಸೆಕ್ಗಿಂತ ಅಧಿಕ ನೀರು ಹರಿದರೆ ಮಾತ್ರ ಕೋದಂಡರಾಮ ದೇವಸ್ಥಾನದ ಒಳಗೆ ನೀರು ನುಗ್ಗಿ ತುಂಗಭದ್ರೆ ಶ್ರೀರಾಮನ ವಿಗ್ರಹದ ಪಾದಸ್ಪರ್ಶ ಮಾಡುತ್ತಾಳೆ ಎಂದು ಸ್ಥಳೀಯ ಪ್ರವಾಸಿ ಮಾರ್ಗದರ್ಶಿಗಳು ಹಾಗೂ ಅರ್ಚಕರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.