ತಾಳಿಕೋಟೆ: ಪಟ್ಟಣದ ಗಣೇಶ ನಗರದಲ್ಲಿ ಗುರುವಾರ ತಡರಾತ್ರಿ 6 ಮಂದಿ ಮುಸುಕುದಾರಿ ‘ಚಡ್ಡಿ ಗ್ಯಾಂಗ್’ ಕಳ್ಳರು ಮನೆಯೊಂದರ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದಾರೆ.

‘ಚಡ್ಡಿ ಗ್ಯಾಂಗ್’ ಕಳ್ಳರ ಸಂಚಾರದ ಸಿಸಿಟಿವಿ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಪಟ್ಟಣದ ಜನತೆ ಭಯ ಭೀತರಾಗಿದ್ದಾರೆ.

ಮುಖಕ್ಕೆ ಮುಸುಕು ಹಾಕಿಕೊಂಡಿರುವ ಆರು ಜನರ ತಂಡ ಬೀಗ ಹಾಕಿದ್ದ ಮನೆಯ ಕಳ್ಳತನ ಮಾಡಲು ನುಗ್ಗಿದೆ. ನಾಯಿಗಳ ಕೂಗಾಟದಿಂದಾಗಿ ಮನೆಯ ಮಾಳಿಗೆ ಮನೆಯಲ್ಲಿ ಮಲಗಿದ್ದ ಅದೇ ಮನೆಯ ಬಾಡಿಗೆದಾರ ರಾಮನಗೌಡ ಕರಕಳ್ಳಿಯವರು ಎಚ್ಚೆತ್ತು, ಯಾರೆಂದು ವಿಚಾರಿಸುವಾಗಲೇ ತೂರಿಬಂದ ಕಲ್ಲುಗಳಿಂದ ಭಯಗೊಂಡು ಚೀರಾಟ ಪ್ರಾರಂಭಿಸಿದ್ದಾರೆ. ಇದೇ ವೇಳೆಗೆ ಅಲ್ಲಿನ ನಿವಾಸಿಯೊಬ್ಬರು ಪೊಲೀಸ್ ಠಾಣೆಗೂ ಕರೆ ಮಾಡಿದ್ದಾರೆ.

ಸುದ್ದಿ ತಿಳಿದು ತಕ್ಷಣವೇ ಸ್ಥಳಕ್ಕೆ ಧಾವಿಸಿದ ಪಿಎಸ್ಐ ಜ್ಯೋತಿ ಖೋತ್ ಅವರ ತಂಡ ಬರುವ ಮುಂಚೆಯೇ ಕಳ್ಳರು ಪರಾರಿಯಾಗಿದ್ದಾರೆ .

ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ತಾಳಿಕೋಟೆ ಪೊಲೀಸ್ ಠಾಣೆಯ ಪಿಎಸ್ಐ ಜ್ಯೋತಿ ಖೋತ್, ಸಾರ್ವಜನಿಕರಿಗೆ ಜಾಗೃತರಾಗಿರಲು ತಿಳಿಸಿದ್ದಾರೆ.

ಮನೆಯ ಸುತ್ತಮುತ್ತ ಯಾವುದೇ ಅಪರಿಚಿತ ವ್ಯಕ್ತಿಗಳು ಅನುಮಾನಾಸ್ಪದವಾಗಿ ಕಂಡುಬಂದರೆ, ಕೂಡಲೇ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ. ಮನೆಗೆ ಬೀಗ ಹಾಕಿ ಹೋಗುವವರಿದ್ದರೆ ಠಾಣೆಗೆ ತಿಳಿಸಿ. ಕಳ್ಳರನ್ನು ಹಿಡಿಯಲು ಇಲಾಖೆ ಕಾರ್ಯ ಪ್ರವೃತ್ತವಾಗಿದ್ದು, ಜನತೆ ಯಾವುದೇ ಭಯ - ಆತಂಕ ಪಡಬಾರದು. ಪೊಲೀಸರಿಗೆ ಮಾಹಿತಿ ನೀಡಲು 9480804265, 9902810601 ಸಂಪರ್ಕಿಸುವಂತೆ ತಿಳಿಸಿದ್ದಾರೆ.

ಮನೆಯ ಸುತ್ತಮುತ್ತ ಯಾವುದೇ ಅಪರಿಚಿತ ವ್ಯಕ್ತಿಗಳು ಅನುಮಾನಾಸ್ಪದವಾಗಿ ಕಂಡುಬಂದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಭಯಪಡಬೇಡಿ
ಜ್ಯೋತಿ ಖೋತ್ ಪಿಎಸ್ಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.