ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವಾ ಭದ್ರತೆ, ಕನಿಷ್ಠ ವೇತನ ವಂಚಿತ ಆಯುಷ್ ವೈದ್ಯರು: ಭವಿಷ್ಯ ಅತಂತ್ರ

ಅಕ್ಷರ ಗಾತ್ರ

ಕೊಲ್ಹಾರ: ರಾಜ್ಯದ ಗ್ರಾಮೀಣ ಭಾಗದ ಸಮುದಾಯ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಮುಂಚೂಣಿ ಸೇನಾನಿಗಳಾಗಿ ಸೇವೆ ಸಲ್ಲಿಸುತ್ತಿರುವ ಆಯುಷ್ ವೈದ್ಯರ ಭವಿಷ್ಯ ಅತಂತ್ರ ಸ್ಥಿತಿಯಲ್ಲಿದೆ.

ರಾಷ್ಟ್ರೀಯು ಆರೋಗ್ಯ ಅಭಿಯಾನದಡಿಯಲ್ಲಿ 16 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ರಾಜ್ಯದ ಸುಮಾರು 650ಕ್ಕೂ ಅಧಿಕ ಆಯುಷ್ ವೈದ್ಯರಿಗೆ ಯಾವುದೇ ಸರ್ಕಾರಿ ಸೌಲಭ್ಯಗಳು, ಸೇವಾ ಭದ್ರತೆಗಳು ಹಾಗೂ ಕನಿಷ್ಠ ವೇತನವೂ ಸಿಗುತ್ತಿಲ್ಲ.

ಆರೋಗ್ಯ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಅಲೋಪಥಿ ವೈದ್ಯರಿಗೆ ರೂ 60 ಸಾವಿರದ ವರೆಗೂ ವೇತನ ನೀಡಲಾಗುತ್ತಿದೆ. ಬಿಎಸ್ಸಿ ನರ್ಸಿಂಗ್ ಪದವಿಧರರಿಗೆ ರೂ. 32 ಸಾವಿರ ವೇತನ ಕೊಡಲಾಗುತ್ತಿದೆ. ಆದರೆ, ಅಲೋಪಥಿ ವೈದ್ಯರಷ್ಟೇ ಸಮಾನವಾಗಿ ಸೇವೆ ಸಲ್ಲಿಸುತ್ತಿರುವ ಆಯುಷ್ ವೈದ್ಯರಿಗೆ ರೂ 19,400 ವೇತನ ಮಾತ್ರ ನೀಡುವ ಮೂಲಕ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂಬುದು ಆಯುಷ್ ವೈದ್ಯರ ದೂರು.

ಕೋವಿಡ್ ವಾರ್ಡ್, ಎಮರ್ಜೆನ್ಸಿ ವಾರ್ಡ್, ಹೆರಿಗೆ ವಾರ್ಡ್, ರಾತ್ರಿ ಪಾಳಿ ಸೇವೆಗಳು ಅಲ್ಲದೇ, ನಿಯೋಜನೆ ಮೇರೆಗೆ ಮತ್ತೊಂದು ಆರೋಗ್ಯ ಕೇಂದ್ರಕ್ಕೆ ಕಳುಹಿಸುತ್ತಾರೆ. ಇಷ್ಟೆಲ್ಲ ಸೇವೆ ಸಲ್ಲಿಸುತ್ತಿದ್ದರೂ ನಮಗೆ ಸರಿಯಾದ ಪ್ರಯಾಣ ಭತ್ಯೆ, ಸೇವೆ ಭತ್ಯೆ ನೀಡುವುದಿಲ್ಲ ಎಂದುಆಯುಷ್ ವೈದ್ಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಪಿ.ಬಿ.ಹಂಪನಗೌಡ ದೂರಿದರು.

ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಆಯುಷ್ ವೈದ್ಯರನ್ನು ಸರ್ಕಾರ ಕಾಯಂಗೊಳಿಸಿ ಸಮಾನ ವೇತನ ನೀಡಬೇಕೆಂದು ಹೈಕೋರ್ಟ್ ಎರಡು ಬಾರಿ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ್ದರೂ ಸರ್ಕಾರ ನಿರ್ಲಕ್ಷಿಸುತ್ತಿದೆ. ಹರಿಯಾಣ ಮತ್ತು ಪಂಜಾಬ್ ರಾಜ್ಯಗಳಲ್ಲಿ ಗುತ್ತಿಗೆ ಆಯುಷ್ ವೈದ್ಯರನ್ನು ಸರ್ಕಾರ ಕಾಯಂಗೊಳಿಸಿದೆ. ಮಹಾರಾಷ್ಟ್ರ ಸರ್ಕಾರವೂ ಭರವಸೆ ನೀಡಿದೆ. ಅದೇ ಮಾದರಿಯಲ್ಲಿ ನಮ್ಮ ರಾಜ್ಯ ಸರ್ಕಾರವೂ ನಮಗೆ ಸೇವಾ ಭದ್ರತೆ, ಸಮಾನ ವೇತನ ನೀಡಬೇಕೆಂದು ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT