ಸಿಂದಗಿ(ವಿಜಯಪುರ): ಪಂಚ ಗ್ಯಾರಂಟಿಗಳಿಗಾಗಿ ಸರ್ಕಾರದಿಂದ ಬಹಳಷ್ಟು ದುಡ್ಡು ಖರ್ಚಾಗುತ್ತಿದೆ. ನಡೆಯಬೇಕಾದ ಅಭಿವೃದ್ದಿ ಕಾರ್ಯ ನಡೆಯುತ್ತಿಲ್ಲ. ವಿರೋಧಪಕ್ಷ ಈ ಗ್ಯಾರಂಟಿಗಳನ್ನು ಪುನರ್ ವಿಮರ್ಶೆ ಮಾಡುವಂತೆ ಒತ್ತಾಯಿಸುತ್ತಿದ್ದರೂ ಕಾಂಗ್ರೆಸ್ ಹೈಕಮಾಂಡ್ ಮನಸ್ಸು ಮಾಡುತ್ತಿಲ್ಲ. ಹೀಗೆ ಕಾಲ ಕಳೆದರೆ ಜನಪ್ರತಿನಿಧಿಗಳಿಗೆ ಕಷ್ಟ ಎದುರಾಗುತ್ತದೆ. ಇದರಿಂದಾಗಿ ಪಶ್ಚಾತಾಪ ಅನುಭವಿಸುವ ಸಂದರ್ಭ ಬಂದರೂ ಬರಬಹುದು ಎಂದು ಬಾಳೆಹೊನ್ನೂರು ರಂಭಾಪುರಿ ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ಆದಿಶೇಷ ಸಂಸ್ಥಾನ ಹಿರೇಮಠದಲ್ಲಿ ಗುರುವಾರ ಜಾತ್ರಾ ಮಹೋತ್ಸವದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಶಾಸಕರಿಗೆ ಅಭಿವೃದ್ಧಿ ಕಾರ್ಯಕ್ಕೆ ಅನುದಾನ ನೀಡುವುದಾಗಿ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆದ ಅಧಿವೇಶನದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ₹ 10 ಕೋಟಿ ಅನುದಾನ ಘೋಷಣೆ ಮಾಡಿದ್ದಾರೆ. ಅದನ್ನಾದರೂ ತ್ವರಿತಗತಿಯಲ್ಲಿ ಬಿಡುಗಡೆ ಮಾಡುವ ಮೂಲಕ ಆಯಾ ಮತಕ್ಷೇತ್ರಗಳಗಳಲ್ಲಿ ಶಾಸಕರು ಜನರ ಪ್ರೀತಿ ಉಳಿಸಿಕೊಳ್ಳುವಂತೆ ಮಾಡಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.