ವಿಜಯಪುರ: ‘ಸನಾತನಿಗಳು ಶರಣರ ವಚನಗಳನ್ನು ತಿರುಚಿ, ವಿರೂಪಗೊಳಿಸುತ್ತಿದ್ದಾರೆ. ನಕಲಿ ವಚನಗಳನ್ನು ಸೇರಿಸುವ ಮೂಲಕ ದಾಳಿ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಚನಗಳ ಸಮಗ್ರವಾಗಿ ಪರಿಷ್ಕರಿಸಿ, ಶುದ್ಧಿಕರಣ ಮಾಡುವ ಅಗತ್ಯವಿದೆ’ ಎಂದು ಪುಣೆಯ ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರದ ಸಂಸ್ಥಾಪಕ ಡಾ. ಶಶಿಕಾಂತ ಪಟ್ಟಣ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಚನ ಸಾಹಿತ್ಯ ಮತ್ತು ಸಂವಿಧಾನಕ್ಕೆ ಇಂದು ಅಪಾಯ ಎದುರಾಗಿದೆ. ಸನಾತನಿಗಳು, ಪಟ್ಟಭದ್ರ ಹಿತಾಸಕ್ತಿಗಳಿಂದ ಕುತ್ತು ಎದುರಾಗಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟಗಾರರನ್ನು, ಬಸವ ತತ್ವ ಪ್ರಚಾರಕರನ್ನು, ಲಿಂಗಾಯತ ಮಠಾಧೀಶರನ್ನು ಬಸವ ತಾಲಿಬಾನಿಗಳು ಎಂದಿರುವ ಕನೇರಿ ಸ್ವಾಮೀಜಿ ವೈದಿಕಪರ ನಿಂತಿರುವ ಒಬ್ಬ ಮೂಲಭೂತವಾದಿ’ ಎಂದರು.

‘ರಾಜ್ಯ ಸರ್ಕಾರ ಉದ್ದೇಶಿತ ವಚನ ವಿಶ್ವವಿದ್ಯಾಲಯವನ್ನು ಬೀದರ್ನಲ್ಲಿ ಸ್ಥಾಪಿಸುವ ಬದಲು ಕೂಡಲಸಂಗಮ ಅಥವಾ ಬಸವನ ಬಾಗೇವಾಡಿಯಲ್ಲಿ ಸ್ಥಾಪಿಸಬೇಕು’ ಎಂದು ಒತ್ತಾಯಿಸಿದರು.

‘ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆಗಾಗಿ ರಾಜ್ಯ ಸರ್ಕಾರವು ಮತ್ತೊಮ್ಮೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಬೇಕು’ ಎಂದು ಆಗ್ರಹಿಸಿದರು.

‘ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟವು ಯಾರ ವಿರುದ್ಧವೂ ಅಲ್ಲ, ಯಾರ ಪರವೂ ಅಲ್ಲ. ನಾವು ಹಿಂದೂಗಳ ಧಾರ್ಮಿಕ ನಂಬಿಕೆ, ಆಚರಣೆ ವಿರೋಧಿಗಳಲ್ಲ. ಹೀಗಾಗಿ ಲಿಂಗಾಯತ ವಿಚಾರಧಾರೆಗಳಿಗೆ ಯಾರೂ ಅಡ್ಡಿಪಡಿಸಬಾರದು’ ಎಂದರು.

‘ವಿಜಯಪುರದ ಮಹಿಳಾ ವಿಶ್ವವಿದ್ಯಾಲಯದ ಎದುರು ಹಾಗೂ ಶಿವಮೊಗ್ಗ ಜಿಲ್ಲೆ ಉಡುತಡಿಯಲ್ಲಿ ಪ್ರತಿಷ್ಠಾಪಿಸಿರುವ ಅಕ್ಕಮಹಾದೇವಿಯ ಅರೆಬೆತ್ತಲೆ ಪ್ರತಿಮೆಯನ್ನು ತೆರವುಗೊಳಿಸಿ, ಶ್ವೇತ ವಸ್ತ್ರಧಾರಿ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕು’ ಎಂದು ಒತ್ತಾಯಿಸಿದರು.

‘ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಇದುವರೆಗೂ ಬಸವ ಅಧ್ಯಯನ ಪೀಠ ಸ್ಥಾಪನೆಯಾಗಿಲ್ಲ, ಬಸವಾದಿ ಶರಣರ ಅಧ್ಯಯನಕ್ಕಾಗಿ ಪೀಠವನ್ನು ಕೂಡಲೇ ಸ್ಥಾಪಿಸಬೇಕು’ ಎಂದರು.

‘ಬಸವಣ್ಣ ಹುಟ್ಟಿದ ವಿಜಯಪುರದ ನೆಲದಲ್ಲಿ ಇಂದು ಬಸವಣ್ಣನ ವಿಚಾರಧಾರೆಗಳು ಕಂಡುಬರುತ್ತಿಲ್ಲ. ಜಿಲ್ಲೆಯಲ್ಲಿ ಬಸವಾದಿ ಶರಣರ ಸ್ಮಾರಕಗಳು ಇಲ್ಲ, ಬಡಾವಣೆಗಳಿಗೆ ಅವರ ಹೆಸರು ಇಡುವಂತೆ ಮನವಿ ಮಾಡಿದರೂ ಮಹಾನಗರ ಪಾಲಿಕೆ ಸ್ಪಂದಿಸುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಕೇಂದ್ರ ಉದ್ಘಾಟನೆ ಇಂದು:

ಪುಣೆಯ ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರದ ವಿಜಯಪುರ ಶಾಖೆ ಡಿ.14 ರಂದು ಬೆಳಿಗ್ಗೆ 10.30ಕ್ಕೆ ಉದ್ಘಾಟನೆಯಾಗಲಿದೆ ಎಂದು ಶಶಿಕಾಂತ ಪಟ್ಟಣ ಹೇಳಿದರು.

ನಗರದ ಬಿಎಲ್ಡಿಇ ನರ್ಸಿಂಗ್ ಕಾಲೇಜು ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಚಿವ ಎಂ.ಬಿ.ಪಾಟೀಲ ಅವರು ಶಾಖೆ ಉದ್ಘಾಟನೆ ಮಾಡಲಿದ್ದಾರೆ. ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಹಿರಿಯ ಜಾನಪದ ವಿದ್ವಾಂಸ ಡಾ.ಎಂ.ಎಂ.ಪಡಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಡಾ.ಸರಸ್ವತಿ ಪಾಟೀಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಕೃತಿಗಳ ಬಿಡುಗಡೆ:

ಮಹಾಮನೆ, ನಮ್ಮ ಶರಣರು, ಹೊಂಗಿರಣ, ಆವಿಯಾಯಿತು ಭಾವ, ಅವ್ವನಿರದ ಅಡುಗೆ ಮನಿ, ಬದುಕು ಬದಲಿಸಿದ ಮರದ ಪೆಟ್ಟಿಗೆ ಹಾಗೂ ಇತರೆ ಕಥೆಗಳು, ವಿಜಯಪುರ ಜಿಲ್ಲೆಯ ಶರಣರ ಸ್ಮಾರಕಗಳು ಹಾಗೂ ಐತಿಹಾಸಿಕ ತಾಣಗಳು, ಅರಿವಿನ ಅನುಸಂದಾನಕ್ಕೆ ವಚನಗಳು ಹಾಗೂ ಕೈ ಬಿಸಿ ಕರೆಯುತ್ತಿದೆ ಕೃತಿಗಳನ್ನು ಡಿವೈಎಸ್ ಪಿ ಬಸವರಾಜ ಯಲಿಗಾರ ಬಿಡುಗಡೆಗೊಳಿಸಲಿದ್ದಾರೆ.

ಶರಣ ಚಿಂತಕ ಮಹಾಂತೇಶ ಬಿರಾದಾರ, ಡಾ. ಉಮಾಕಾಂತ್ ಶೆಟ್ಕರ, ಸತೀಶ ಪಾಟೀಲ್, ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.

ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಡಾ. ಉಮಾಕಾಂತ್ ಶೆಟ್ಕರ್, ಪ್ರೊ. ಆರ್.ಎಸ್.ಬಿರಾದಾರ, ಡಾ. ಶಾರದಾಮಣಿ ಹುಣಸ್ಯಾಳ, ಸಿದ್ದಪ್ಪ ಪಡನಾಡ, ರತ್ನಾಕ್ಕ ಬಿರಾದಾರ, ಶರಣು ಸಬರದ, ರೇಣುಕಾ ಪಾಟೀಲ್, ಜಿ.ಬಿ.ಸಾಲಕ್ಕಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.