ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ | 14 ಕ್ಷೇತ್ರಗಳಲ್ಲಿಯೂ ನಮ್ಮದೆ ಗೆಲುವು: ಶಾಸಕ ಯತ್ನಾಳ ವಿಶ್ವಾಸ

Published 7 ಮೇ 2024, 7:07 IST
Last Updated 7 ಮೇ 2024, 7:07 IST
ಅಕ್ಷರ ಗಾತ್ರ

ವಿಜಯಪುರ: ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರು ಮಂಗಳವಾರ ಕುಟುಂಬ ಸಮೇತ ನಗರದ ಶ್ರೀ ಸಿದ್ದೇಶ್ವರ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿರುವ ಮತ ಕೇಂದ್ರ-70 ರಲ್ಲಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.

ಕೊಠಡಿ ನಂ.5ರ ಎದುರು ಸರತಿ ಸಾಲಿನಲ್ಲಿ ನಿಂತು ಪತ್ನಿ ಶೈಲಜಾ ಪಾಟೀಲ ಹಾಗೂ ಪುತ್ರ ರಾಮನಗೌಡ ಪಾಟೀಲ ಅವರೊಂದಿಗೆ ಮತ ಚಲಾಯಿಸಿದರು.

ದೇಶದ ಸುರಕ್ಷತೆ, ಸನಾತನ ಧರ್ಮ ಉಳಿಸಲು ಹಾಗೂ ಅಭಿವೃದ್ಧಿಗಾಗಿ ಪ್ರತಿಯೊಬ್ಬರು ಆದಷ್ಟು ಬೇಗ, ತಪ್ಪದೆ ಮತ ಕೇಂದ್ರಕ್ಕೆ ತೆರಳಿ, ಮತಯಾಚನೆ ಮಾಡುವ ಮೂಲಕ ಉತ್ತಮ ಸರ್ಕಾರ ರಚನೆಗೆ ಕೈ ಜೋಡಿಸಲು ವಿನಂತಿಸಿಕೊಂಡರು.

ರಾಜ್ಯದ ಎಲ್ಲಾ 14 ಕ್ಷೇತ್ರಗಳಲ್ಲಿಯೂ ಉತ್ತಮ ವಾತಾವರಣವಿದೆ. ನಮ್ಮ‌ಗೆಲುವು ನಿಶ್ಚಿತ. ಮತದಾನ ಪ್ರಮಾಣ ಹೆಚ್ಚಾದಂತೆ ನಮ್ಮ ಗೆಲುವಿನ ಅಂತರ ಹೆಚ್ಚುತ್ತದೆ. ವಿಜಯಪುರ ನಗರದಲ್ಲಿ ಬೆಳಿಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿರುವುದು ನೋಡಿ ಖುಷಿ ಆಯ್ತು ಎಂದು ಹೇಳಿದರು.

ಮಹಾನಗರ ಪಾಲಿಕೆ ಸದಸ್ಯರು, ಮುಖಂಡರು, ಕಾರ್ಯಕರ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT