ವಿಜಯಪುರ: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜುಲೈ 9ರಂದು ಸಾರ್ವತ್ರಿಕ ಮುಷ್ಕರ ನಡೆಸಲಾಗುವುದು ಎಂದು ಜಂಟಿ ಕಾರ್ಮಿಕ ಸಂಘಟನೆ ಜಿಲ್ಲಾ ಸಂಚಾಲಕ, ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಅಣ್ಣರಾಯ ಈಳಗೇರ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘಟಿತ ವಲಯದ ಕಾರ್ಮಿಕರ ವೇತನವು 2023-24ರಲ್ಲಿ ಕುಸಿದು, 2017-18ರ ಮಟ್ಟಕ್ಕಿಂತ ಕೆಳಗೆ ತಲುಪಿದೆ. ತದ್ವಿರುದ್ಧವಾಗಿ ಉದ್ಯೋಗ ಸೃಷ್ಟಿ ಕೇವಲ ಶೇ 1.5 ರಷ್ಟು ಹೆಚ್ಚಿದೆ. ಹಂಗಾಮಿ ದಿನಗೂಲಿ ನೌಕರರ ವೇತನ ₹203 ರಿಂದ ₹242 ಇದ್ದರೆ, ಮಹಿಳಾ ದಿನಗೂಲಿಗಳ ಕೂಲಿ ₹128ರಿಂದ ₹159 ಆಗಿದೆ. ಕಾರ್ಪೊರೇಟ್ ಸಂಸ್ಥೆಗಳ ಲಾಭ ಶೇ 22.3 ರಷ್ಟು ಹೆಚ್ಚಿದೆ ಎಂದು ತಿಳಿಸಿದರು.

ಬಿಸಿಲಿನ ಅಲೆ, ಪ್ರವಾಹ, ಚಂಡಮಾರುತಗಳು, ಅಕಾಲಿಕ ಮಳೆ ಮತ್ತು ಇತರ ಹವಾಮಾನ ಪರಿಸ್ಥಿತಿಗಳಿಂದ ಉಂಟಾಗುವ ಅಪಾಯಗಳು ಮತ್ತು ಹಾನಿಗಳನ್ನು ಸರಿದೂಗಿಸಲು ಹವಾಮಾನ ಸ್ಥಿತಿಸ್ಥಾಪಕತ್ವನಿಧಿಯನ್ನು ಸ್ಥಾಪಿಸಬೇಕು. ವಲಸೆ ಕಾರ್ಮಿಕರ ಕುರಿತಾದ ರಾಷ್ಟ್ರೀಯ ನೀತಿಯು ತುರ್ತಾಗಿ ಜಾರಿಗೊಳಿಸಬೇಕು, ಅಂತರರಾಜ್ಯ ವಲಸೆ ಕಾರ್ಮಿಕರ ಕಾಯ್ದೆ 1979 ಅನ್ನು ಮರುಪರಿಶೀಲಿಸಿ ಬಲಪಡಿಸಬೇಕು ಎಂದು ಒತ್ತಾಯಿಸಿದರು.

ಅಂಗನವಾಡಿ, ಆಶಾ ಮತ್ತು ಮಧ್ಯಾಹ್ನದ ಬಿಸಿಯೂಟ, ಆಶಾ ಕಿರಣ ಇತ್ಯಾದಿ ಸ್ಕೀಮ್ ಕಾರ್ಯಕರ್ತೆಯರಿಗೆ ಕಾರ್ಮಿಕರ ಸ್ಥಾನಮಾನ ನೀಡುವ ಭಾರತೀಯ ಕಾರ್ಮಿಕ ಸಮ್ಮೇಳನದ ಶಿಫಾರಸನ್ನು ಜಾರಿಗೆ ತರಬೇಕು ಮತ್ತು ನ್ಯಾಯಾಂಗ ನಿರ್ದೇಶನಗಳ ಪ್ರಕಾರ ಅವರಿಗೆ ಗ್ರಾಚ್ಯುಟಿ ತಕ್ಷಣವೇ ಖಚಿತಪಡಿಸಬೇಕು. ನರೇಗಾ ಅಡಿಯಲ್ಲಿ ಹೆಚ್ಚಿದ ಕನಿಷ್ಠ ವೇತನದೊಂದಿಗೆ ವಾರ್ಷಿಕ 200 ದಿನಗಳ ಕೆಲಸವನ್ನು ಖಚಿತಪಡಿಸಬೇಕು ಎಂದು ಆಗ್ರಹಿಸಿದರು.

ಬ್ಯಾಂಕ್ ನೌಕರರ ಸಂಘದ ಜಿಲ್ಲಾ ಸಂಘಟನಾಕಾರ ಚಂದ್ರಶೇಖರ ಘಂಟೆಪ್ಪಗೋಳ ಮಾತನಾಡಿ, ಭಾರತೀಯ ಕಾರ್ಮಿಕ ಸಮ್ಮೇಳನವನ್ನು ತಕ್ಷಣವೇ ಕರೆಯಬೇಕು, ಗೃಹಾಧಾರಿತ ಕಾರ್ಮಿಕರ ಮೇಲಿನ ನಿರ್ಣಯಗಳನ್ನು ತಕ್ಷಣವೇ ಅನುಮೋದಿಸಬೇಕು, ಸಾರ್ವಜನಿಕ ಸೇವಾ ವಲಯಗಳ ಖಾಸಗೀಕರಣವನ್ನು ತಕ್ಷಣವೇ ನಿಲ್ಲಿಸಬೇಕು, ಪ್ರತಿ ಐದು ವರ್ಷಗಳಿಗೊಮ್ಮೆ ನಿಯಮಿತ ಪರಿಷ್ಕರಣೆಯೊಂದಿಗೆ ಬೆಲೆ ಸೂಚ್ಯಂಕದೊಂದಿಗೆ ಕನಿಷ್ಠ ವೇತನವಾಗಿ ₹26 ಸಾವಿರ ಖಚಿತಪಡಿಸಬೇಕು, 8 ನೇ ವೇತನ ಆಯೋಗವನ್ನು ಆದಷ್ಟು ಬೇಗ ರಚಿಸಬೇಕು, ಸ್ಥಿರಾವಧಿಯ ಉದ್ಯೋಗ ಮತ್ತು ಅಗ್ನಿಪಥ್ ಯೋಜನೆಯನ್ನು ರದ್ದುಗೊಳಿಸಬೇಕು ಎಂದರು.

ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಜಿಲ್ಲಾ ಸಂಚಾಲಕರಾದ ಸುರೇಶ ಜೀಬಿ ಮಾತನಾಡಿ, ಹೊರಗುತ್ತಿಗೆ ಪದ್ಧತಿ ನಿಲ್ಲಿಸಬೇಕು, ಕಾರ್ಮಿಕ ವರ್ಗ ಕಷ್ಟಪಟ್ಟು ಗಳಿಸಿದ 8 ಗಂಟೆ ಕೆಲಸದ ಹಕ್ಕಿನ ಉಲ್ಲಂಘನೆ ತಡೆಯಬೇಕು, ಹೊಸ ಶಿಕ್ಷಣ ನೀತಿ ಹಿಂಪಡೆಯಬೇಕು, ಹಳೆಯ ಪಿಂಚಣಿ ಯೋಜನೆ ಮರು ಜಾರಿ ಮಾಡಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಎಐಯುಟಿಯುಸಿ ಸಂಚಾಲಕರಾದ ಮಲ್ಲಿಕಾರ್ಜುನ ಎಚ್.ಟಿ, ಲಕ್ಷ್ಮಣ ಹಂದ್ರಾಳ, ಮಹಾದೇವಿ ಧರ್ಮಶೆಟ್ಟಿ, ಸುರೇಖಾ ರಜಪೂತ, ಭರತಕುಮಾರ ಎಚ್.ಟಿ., ಪ್ರಾಂತ ರೈತ ಸಂಘದ ಮುಖಂಡ ಭೀಮರಾಯ ಪೂಜಾರಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.