ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ | ಬಿಜೆಪಿ ಅಭ್ಯರ್ಥಿಗಳ ಪರ ನಟ ಶರಣ್‌, ತರುಣ್‌ ಸುಧೀರ್‌ ಮತಯಾಚನೆ

Published 29 ಏಪ್ರಿಲ್ 2024, 15:49 IST
Last Updated 29 ಏಪ್ರಿಲ್ 2024, 15:49 IST
ಅಕ್ಷರ ಗಾತ್ರ

ನಾರಾಯಣಪುರ: ಪಟ್ಟಣದ ಮೌನೇಶ್ವರ ಕ್ಯಾಂಪ್‌ನಿಂದ ಇಲ್ಲಿನ ಮಹರ್ಷಿ ವಾಲ್ಮೀಕಿ ವೃತ್ತದವರೆಗೆ ಸೋಮವಾರ ನಟ ಶರಣ್ ಹಾಗೂ ನಿರ್ದೇಶಕ ತರುಣ ಸುಧೀರ್ ರೋಡ್ ಶೋ ನಡೆಸಿ ಸುರಪುರ ಉಪಚುನಾವಣೆ ಬಿಜೆಪಿ ಅಭ್ಯರ್ಥಿ ರಾಜೂಗೌಡ, ರಾಯಚೂರು ಲೋಕಸಭೆ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರನಾಯಕ ಪರ ಮತಯಾಚನೆ ಮಾಡಿದರು.

ನಟ ಶರಣ್ ಮಾತನಾಡಿ, ಸುರಪುರ ಮತಕ್ಷೇತ್ರದ ಸುರಕ್ಷತೆಗೆ ಹಾಗೂ ಸಮಗ್ರ ಅಭಿವೃದ್ಧಿಗೆ ಹಾಗೂ ಜನಪರ ಕಾಳಜಿ, ರೈತರಿಗಾಗಿ ಸದಾ ತುಡಿತ ಹೊಂದಿದ ರಾಜೂಗೌಡ ಅವರಿಗೆ ಅತಿ ಹೆಚ್ಚಿನ ಮತ ನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ನಿರ್ದೇಶಕ ತರುಣ ಸುಧೀರ್ ಮಾತನಾಡಿ, ರಾಜೂಗೌಡರ ಅಧಿಕಾರಾವಧಿಯಲ್ಲಿ ಹಲವು ಅಭಿವೃದ್ಧಿ ಕಾರ್ಯ ಆರಂಭವಾಗಿದ್ದರು.  ಕಳೆದ ಬಾರಿ ಸೋತಿರುವ ಕಾರಣಕ್ಕೆ ಅವೆಲ್ಲ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ.  ರೈತರು, ಜನಪರ ಕಾಳಜಿ ಹೊಂದಿರುವ ರಾಜೂಗೌಡ ಅವರನ್ನು ಗೆಲ್ಲಿಸಬೇಕು. ಜತೆಗೆ ದೇಶದ ಅಭಿವೃದ್ಧಿ ಹಾಗೂ ಸುಭದ್ರತೆಗಾಗಿ ನರೇಂದ್ರ ಮೋದಿ ಅವರನ್ನು ಮೂರನೇ ಬಾರಿ ಪ್ರಧಾನಿ ಮಾಡಲು ಲೋಕಸಭಾ ಅಭ್ಯರ್ಥಿ ರಾಜಾ ಅಮರೇಶ್ವರನಾಯಕ ಅವರನ್ನು ಕೂಡ ಹೆಚ್ಚಿನ ಮತಗಳಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ನಟ ಶರಣ್ ಯಾದಗಿರಿ ಜಿಲ್ಲೆಯೊಂದಿಗೆ ಇರುವ ಸಂಬಂಧದ ಬಗ್ಗೆ ಸ್ಮರಿಸಿಕೊಂಡರು. ನೆರದಿದ್ದ ಅಭಿಮಾನಿಗಳ ಕೋರಿಕೆಯಂತೆ ಸಿನಿಮಾ ಡೈಲಾಗ್ ಮತ್ತು ಹಾಡೊಂದನ್ನು ಹಾಡಿ ರಂಜಿಸಿದರು. ರಾಜೂಗೌಡ ಪುತ್ರ ಮಣಿಕಂಠ ನಾಯಕ, ಸ್ಥಳೀಯ ಬಿಜೆಪಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT