ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ | ಲಾಕ್‌ಡೌನ್ ಪರಿಣಾಮ, ಇಂಧನ ಬೇಡಿಕೆ ಶೇ 75ರಷ್ಟು ಕುಸಿತ

ಸರ್ಕಾರಿ ವಾಹನ, ಅಗತ್ಯ ಸಾಮಗ್ರಿ ಪೂರೈಸುವ ವಾಹನಗಳಿಗೆ ಪೆಟ್ರೋಲ್, ಡೀಸೆಲ್‌ ಮೀಸಲು
Last Updated 22 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಯಾದಗಿರಿ: ಲಾಕ್‌ಡೌನ್‌ ಜಾರಿಯಾದ ಬಳಿಕ ಜಿಲ್ಲೆಯಲ್ಲಿ ಪೆಟ್ರೋಲ್, ಡೀಸೆಲ್‌ ಬೇಡಿಕೆ ಶೇಕಡ 75ರಷ್ಟು ಬೇಡಿಕೆ ಕುಸಿತ ಕಂಡಿದೆ.

ನಗರದಲ್ಲಿಇಂಡಿಯನ್ ಆಯಿಲ್ ಕಾರ್ಪೋರೇಷನ್ (ಐಒಸಿ), ಭಾರತ ಪೆಟ್ರೋಲಿಯಂ (ಬಿಪಿ) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ (ಎಚ್‌ಪಿ) ಸೇರಿ 10ಕ್ಕೂ ಹೆಚ್ಚುಇಂಧನ ಮಳಿಗೆಗಳಿವೆ. ಎಲ್ಲ ಕಡೆಯೂ ಇಂಧನದ ಬೇಡಿಕೆ ಕುಸಿತವಾಗಿದೆ. ಒಂದೊಂದು ದಿನ 10 ಸಾವಿರ ಡೀಸೆಲ್, 5–6 ಸಾವಿರ ಲೀಟರ್‌ ಪೆಟ್ರೋಲ್ ಪೂರೈಸುತ್ತಿದ್ದ ಬಂಕ್‌ಗಳು ಈಗ ಖಾಲಿ ಖಾಲಿಯಾಗಿವೆ.

‘ನಮ್ಮ ಬಂಕ್‌ನಲ್ಲಿ ದಿನಕ್ಕೆಪೆಟ್ರೋಲ್, ಡೀಸೆಲ್‌ ಸೇರಿದಂತೆ ಹತ್ತಾರು ಸಾವಿರ ಲೀಟರ್‌ ಬೇಡಿಕೆ ಇರುತ್ತಿತ್ತು. ಆದರೆ, ಲಾಕ್‌ಡೌನ್‌ ಜಾರಿಯಾದ ನಂತರ ಬೇಡಿಕೆ ಹೆಚ್ಚೆಂದರೆ 700 ಲೀಟರ್‌ ಒಳಗೆ ಇದೆ’ ಎಂದು ಭಾರತ ಪೆಟ್ರೋಲಿಯಂ ಸಿಬ್ಬಂದಿ ಮಾಹಿತಿ ನೀಡಿದರು.

ಯಾದಗಿರಿ ನಗರದಲ್ಲಿ ಭಾರತ ಪೆಟ್ರೋಲಿಯಂ (ಬಿಪಿ) 3 ಬಂಕ್‌ಗಳಿವೆ.ಬೆಳಿಗ್ಗೆ 4 ಗಂಟೆಯಿಂದ ಸಂಜೆ 4 ಗಂಟೆವರಗೆ ಬಂಕ್‌ ತೆರೆಯಲು ಜಿಲ್ಲಾಡಳಿತ ಅವಕಾಶ ನೀಡಿದೆ. ಕೊರೊನಾ ಸೋಂಕು ತಡೆಯುವ ಕಾರ್ಯದಲ್ಲಿ ತೊಡಗಿರುವ ಅಧಿಕಾರಿಗಳು, ಕೆಲಸಗಾರರು, ಸ್ವಯಂ ಸೇವಕರಿಗೆ ಅಗತ್ಯವಿದ್ದಾಗ ಇಂಧನ ಪೂರೈಸುತ್ತೇವೆ’ ಎಂದು ಭಾರತ ಪೆಟ್ರೋಲಿಯಂ ಬಂಕ್‌ ವ್ಯವಸ್ಥಾಪಕ ರಾಚನಗೌಡ ಮುದ್ನಾಳ ಹೇಳಿದರು.

ಯಾವುದಕ್ಕೆ ಇಂಧನ ಪೂರೈಕೆ?:ಸರ್ಕಾರಿ ವಾಹನ, ಆಂಬುಲೆನ್ಸ್‌, ಸರಕು ಸಾಗಣೆ ವಾಹನ, ನಗರಸಭೆ ಕಸ ಸಂಗ್ರಹಿಸುವ ವಾಹನಗಳಿಗೆ ದಿನನಿತ್ಯ ಇಂಧನ ಹಾಕಲಾಗುತ್ತಿದೆ. ಇದರ ಜೊತೆಗೆ ಬೇರೆ ವಾಹನಗಳಿಗೂ ಹಾಕಲಾಗುತ್ತದೆ. ಬೇಡಿಕೆ ಕಡಿಮೆ ಇರುವುದರಿಂದ ಅಗತ್ಯಕ್ಕಿಂತ ಹೆಚ್ಚು ಇಂಧನ ಲಭ್ಯವಿದೆ ಎಂದು ಬಂಕ್‌ ವ್ಯವಸ್ಥಾಪಕರು ತಿಳಿಸಿದರು.

ಕೃಷಿ ಚಟುವಟಿಕೆ: ಕೃಷಿ ಕೆಲಸಗಳು ಇದ್ದರೂ ಲಾಕ್‌ಡೌನ್‌ ಕಾರಣ ಹೆಚ್ಚಿನ ಚಟುವಟಿಕೆಗಳು ನಡೆಯುತ್ತಿಲ್ಲ. ಇದರಿಂದಲೂ ಬೇಡಿಕೆ ಕಡಿಮೆಯಾಗಿದೆ’ ಎಂದುಇಂಡಿಯನ್ ಆಯಿಲ್ ಕಾರ್ಪೋರೇಷನ್‌ನ ಅಂಕುರ ಹೇಳಿದರು.‌

***
5 ಸಾವಿರ ಲೀ. ಡೀಸೆಲ್‌, 2 ಸಾವಿರ ಲೀ. ಪೆಟ್ರೋಲ್ ಸಂಗ್ರಹಿಸಿ ಇಟ್ಟುಕೊಳ್ಳಬೇಕು ಎಂದು ಸರ್ಕಾರ ಸೂಚಿಸಿದೆ. ಅಗತ್ಯ ವಾಹನಗಳಿಗೆ ಇಂಧನ ಪೂರೈಕೆಗೆ ಕೊರತೆ ಇಲ್ಲ.
-ರಾಚನಗೌಡ ಮುದ್ನಾಳ,ಭಾರತ ಪೆಟ್ರೋಲಿಯಂ ಬಂಕ್‌ ವ್ಯವಸ್ಥಾಪಕ

***

ಎರಡು ತಿಂಗಳು ಹಿಂದೆ ಇರುವಷ್ಟು ಇಂಧನ ಬೇಡಿಕೆ ಈಗ ಇಲ್ಲ. ವಾಹನಗಳ ಓಡಾಟ ಕಡಿಮೆ ಆಗಿದೆ.
-ಬಸವರಾಜ ದೇವನಕೊಂಡ, ಭಾರತ ಪೆಟ್ರೋಲಿಯಂ ಬಂಕ್‌ಕ್ಯಾಷಿಯರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT