ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತಿರುವನಂತಪುರದಲ್ಲಿ ರಾಜೀವ್ ಚಂದ್ರಶೇಖರ್‌ಗೆ ಸೋಲು; ತರೂರ್‌ಗೆ ಪ್ರಯಾಸದ ಗೆಲುವು

Published 4 ಜೂನ್ 2024, 11:26 IST
Last Updated 4 ಜೂನ್ 2024, 11:26 IST
ಅಕ್ಷರ ಗಾತ್ರ

ತಿರುವನಂತಪುರ: ತೀವ್ರ ಜಿದ್ದಾಜಿದ್ದಿನಿಂದ ಕೂಡಿದ ತಿರುವನಂತಪುರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ಶಶಿ ತರೂರ್ ಪ್ರಯಾಸದ ಗೆಲುವು ದಾಖಲಿಸಿದ್ದಾರೆ.

ತರೂರ್ ಅವರ ನಿಕಟ ಪ್ರತಿಸ್ಪರ್ಧಿ ಎನ್‌ಡಿಎ ಅಭ್ಯರ್ಥಿ ರಾಜೀವ್ ಚಂದ್ರಶೇಖರ್ ಅವರು ಸೋಲು ಅನುಭವಿಸಿದ್ದಾರೆ. ಇದರೊಂದಿಗೆ ಕೇರಳದಲ್ಲಿ ಎರಡನೇ ಸ್ಥಾನ ಗೆಲ್ಲುವ ಎನ್‌ಡಿಎಗೆ ಅವಕಾಶ ಕೈತಪ್ಪಿದೆ.

ತರೂರ್ 3.5 ಲಕ್ಷಕ್ಕೂ ಅಧಿಕ ಮತ ಗಳಿಸಿದ್ದು, ರಾಜೀವ್ ಅವರಿಗಿಂತಲೂ 15 ಸಾವಿರ ಮತಗಳ ಅಂತರದ ಮುನ್ನಡೆ ಕಾಯ್ದುಕೊಂಡಿದ್ದಾರೆ.

'ನಿಕಟ ಪೈಪೋಟಿ ಒಡ್ಡಿದರೂ ಸೋಲು ನಿರಾಸೆ ತಂದಿದೆ' ಎಂದು ಚಂದ್ರಶೇಖರ್ ಪ್ರತಿಕ್ರಿಯಿಸಿದ್ದಾರೆ.

'ನಾವು ಗೆಲುವಿನ ಸನಿಹಕ್ಕೆ ಬಂದಿದ್ದೆವು. ದಾಖಲೆಯ ಅಂತರದ ಮತ ಹಂಚಿಕೆಯನ್ನು ಪಡೆದಿದ್ದೇವೆ. ಇದು ಕೇರಳದ ಜನತೆ ಬಿಜೆಪಿಯನ್ನು ಬೆಂಬಲಿಸುತ್ತಾರೆ ಎಂಬುದನ್ನು ಸಾಬೀತುಪಡಿಸುತ್ತದೆ. ಇಂದು ನನಗೆ ಗೆಲ್ಲಲು ಸಾಧ್ಯವಾಗಲಿಲ್ಲ. ಆದರೂ ಕ್ಷೇತ್ರದ ಜನರಿಗಾಗಿ ಸೇವೆ ಸಲ್ಲಿಸಲಿದ್ದೇನೆ' ಎಂದು ಹೇಳಿದ್ದಾರೆ.

ಮತ್ತೊಂದೆಡೆ ಪ್ರತಿಕ್ರಿಯಿಸಿರುವ ತರೂರ್, 'ನಿಕಟ ಪೈಪೋಟಿ ಒಡ್ಡಿದ ರಾಜೀವ್ ಚಂದ್ರಶೇಖರ್ ಹಾಗೂ ಪಣ್ಯನ್ ರವೀಂದ್ರನ್ ಅವರನ್ನು ನಾನು ಅಭಿನಂದಿಸುತ್ತೇನೆ. ಅಂತಿಮವಾಗಿ ಕಳೆದ ಮೂರು ಬಾರಿಯಂತೆ ಈ ಸಲವೂ ತಿರುವನಂತಪುರದ ಜನತೆ ನನ್ನನ್ನು ಆರ್ಶಿವರ್ದಿಸಿದ್ದಾರೆ. ಈ ಕ್ಷೇತ್ರದ ಜನತೆ ನನ್ನ ಮೇಲೆ ಇರಿಸಿರುವ ನಂಬಿಕೆಯನ್ನು ಈಡೇರಿಸಲು ಮತ್ತಷ್ಟು ಶ್ರಮವಹಿಸುತ್ತೇನೆ' ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT