ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಹಿಂದೂ ವಿರೋಧಿ ಯಾಕೆ: ಶಾಸಕ ಯತ್ನಾಳ ನೀಡಿದ ಕಾರಣಗಳಿವು...

Published 23 ಏಪ್ರಿಲ್ 2024, 8:31 IST
Last Updated 23 ಏಪ್ರಿಲ್ 2024, 8:31 IST
ಅಕ್ಷರ ಗಾತ್ರ

ಬೆಂಗಳೂರು: ಸಂವಿಧಾನವನ್ನು ಬಳಸಿಕೊಂಡು ಕಾಂಗ್ರೆಸ್ ಪಕ್ಷ ಭಾರತವನ್ನು ಮುಸ್ಲಿಮರ ರಾಷ್ಟ್ರವನ್ನಾಗಿ ಮಾಡಲು ಹೊರಟಿದೆ, ಆದರೆ ಅಧಿಕೃತವಾಗಿ ಘೋಷಣೆ ಮಾಡಲಾಗಲಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದ್ದಾರೆ.

ಕಾಂಗ್ರೆಸ್ ಹಿಂದೂ ವಿರೋಧಿ ಏಕೆ ಎಂಬುದರ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಕಾರಣಗಳನ್ನು ಪಟ್ಟಿ ಮಾಡಿದ್ದಾರೆ.

* ಆರ್ಟಿಕಲ್ 25, 28, 30 ಅನ್ನು ಸೇರಿಸಲಾಯಿತು.

* 1951ರಲ್ಲಿ ಹಿಂದೂ ರಿಲಿಜಿಯಸ್ ಅಂಡ್ ಚಾರಿಟೇಬಲ್ ಎಂಡೋಮೆನ್ಟ್ಸ್ ಆಕ್ಟ್ ಜಾರಿಗೆ ತರಲಾಯಿತು.

* 1956ರಲ್ಲಿ ಎಚ್‌ಸಿಬಿ ಕಾಯ್ದೆಯನ್ನು ಪರಿಚಯಿಸಿತು.

* 1975ರಲ್ಲಿ ಜಾತ್ಯತೀತತೆ ಎಂಬ ಪದವನ್ನು ಸೇರಿಸಿತು.

* 1992 ರಲ್ಲಿ ಸೆಕ್ಯುಲರಿಸಂ ಕಾಯ್ದೆಯನ್ನು ಪರಿಚಯಿಸಿತು.

* 1991ರಲ್ಲಿ POW ಕಾಯ್ದೆಯನ್ನು ಪರಿಚಯಿಸಿತು.

* 1995ರಲ್ಲಿ ವಕ್ಫ್ ಕಾಯ್ದೆಯನ್ನು ಪರಿಚಯಿಸಿತು.

* 2007ರಲ್ಲಿ ರಾಮ ಸೇತು ಟ್ರಸ್ಟ್ ಅನ್ನು ಪ್ರಾರಂಭಿಸಿತು.

ಕಾಂಗ್ರೆಸ್ ಹಿಂದೂ ವಿರೋಧಿ ಏಕೆ ?

* ಆರ್ಟಿಕಲ್ 25 ರ ಮೂಲಕ ಮತಾಂತರವನ್ನು ಕಾನೂನುಬದ್ಧಗೊಳಿಸಲಾಯಿತು.

* ಆರ್ಟಿಕಲ್ 28ರ ಮೂಲಕ ಹಿಂದೂಗಳ ಧಾರ್ಮಿಕ ಶಿಕ್ಷಣದ ಹಕ್ಕನ್ನು ಕಿತ್ತುಕೊಂಡು, ಮುಸ್ಲಿಮರಿಗೆ ಹಾಗೂ ಕ್ರೈಸ್ತರಿಗೆ ಆರ್ಟಿಕಲ್ 30ರ ಮೂಲಕ ಧಾರ್ಮಿಕ ಶಿಕ್ಷಣದ ಹಕ್ಕನ್ನು ನೀಡಿತು.

* HRCE Act 1951 ಮೂಲಕ ನಮ್ಮ ದೇವಸ್ಥಾನದ ಹಣವನ್ನು ತೆಗೆದುಕೊಂಡರು.

* ಹಿಂದೂ ಕುಟುಂಬಗಳನ್ನು ವಿಭಜಿಸಲು, ಒಗ್ಗಟ್ಟನ್ನು ಮುರಿಯಲು ಡೈವೋರ್ಸ್ ಆಕ್ಟ್, ಡೌರಿ ಕಾಯ್ದೆ, ಹಿಂದೂ ಕೋಡ್ ಬಿಲ್ ಅನ್ನು ಪರಿಚಯಿಸಿದರು; ಆದರೆ, ಮುಸಲ್ಮಾನರ ಪರ್ಸನಲ್ ಲಾ ಬೋರ್ಡ್ ಅನ್ನು ಮುಟ್ಟುವ ಧೈರ್ಯಕ್ಕೆ ಹೋಗಲಿಲ್ಲ. ಬಹುಪತ್ನಿತ್ವ ಕಾನೂನುಬದ್ಧ ಆಗಿರುವುದರಿಂದ ಮುಸ್ಲಿಮರ ಜನಸಂಖ್ಯೆ ಹೆಚ್ಚಾಯಿತು.

* 1951ರಲ್ಲಿ ವಿಶೇಷ ವಿವಾಹ ಕಾಯ್ದೆಯನ್ನು ಪರಿಚಯಿಸುವ ಮೂಲಕ ಮುಸ್ಲಿಂ ಗಂಡು ಮಕ್ಕಳು, ಹಿಂದೂ ಯುವತಿಯರನ್ನು ವಿವಾಹ ಮಾಡಿಕೊಳ್ಳುವ ಅವಕಾಶ ನೀಡಿತು.

* 1975ರಲ್ಲಿ ತುರ್ತು ಪರಿಸ್ಥಿತಿಯನ್ನು ಪರಿಚಯಿಸಿ ಮಾಧ್ಯಮಗಳ ಹಕ್ಕನ್ನು ಕಿತ್ತೆಸೆಯಲಾಯಿತು. ಸಾವಿರಾರು ಜನರನ್ನು ಜೈಲಿಗಟ್ಟಿದರು. ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ ಸೇರಿದಂತೆ ಸಾವಿರಾರು ಜನ ಅಮಾಯಕರನ್ನು ಜೈಲಿಗೆ ಕಳುಹಿಸಿದ್ದು ಇದೆ ಕಾಂಗ್ರೆಸ್ ಪಕ್ಷ.

* ಪ್ಲೇಸಸ್ ಆಫ್ ವರ್ಶಿಪ್ ಆಕ್ಟ್ ಮೂಲಕ ಹಿಂದೂಗಳ 40,000 ದೇವಸ್ಥಾನಗಳನ್ನು ಸರ್ಕಾರದ ವಶಕ್ಕೆ ಪಡೆಯಲಾಯಿತು.

* ವಕ್ಫ್ ಕಾಯಿದೆ ಮೂಲಕ ಮುಸ್ಲಿಮರು ಯಾವುದೇ ಭೂಮಿಯನ್ನು ತೆಗೆದುಕೊಳ್ಳುವ ಹಕ್ಕನ್ನು ಪಡೆದರು.

* 2009ರಲ್ಲಿ ಕೇಸರಿ ಭಯೋತ್ಪಾದನೆ (Saffron Terrorism) ಎಂಬ ಪದಪುಂಜವನ್ನು ಪರಿಚಯಿಸಿದರು.

* ಮಸೀದಿಗಳು ಮತ್ತು ಚರ್ಚ್‌ಗಳಿಗೆ ಸರ್ಕಾರದ ನಿಯಂತ್ರಣವಿಲ್ಲ, ಆದರೆ ಹಿಂದೂ ದೇವಾಲಯಗಳಿಗೆ ಇದೆ.

* ಸರ್ಕಾರಿ ಅನುದಾನಿತ ಮದರಸ ಇದೆ. ಆದರೆ, ಸರ್ಕಾರಿ ಅನುದಾನಿತ ಗುರುಕುಲಗಳಿಲ್ಲ.

* ವಕ್ಫ್ ಆಕ್ಟ್ ಇದೆ. ಆದರೆ, ಹಿಂದೂ ಭೂಮಿ ಕಾಯ್ದೆಯಿಲ್ಲ

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹಿಂದೂ ವಿರೋಧಿಗಳಿಗೆ ತಕ್ಕ ಪಾಠವನ್ನು ಕಲಿಸುವ ಸಮಯ ಬಂದಿದೆ. ಈ ಚುನಾವಣೆ ಸನಾತನ ಧರ್ಮಕ್ಕೆ ಮಾಡು ಇಲ್ಲವೇ ಮಡಿ ಎನ್ನುವ ಸನ್ನಿವೇಶವಾಗಿದೆ. ಸನಾತನ ಧರ್ಮ ಉಳಿಯಬೇಕಾದರೆ, ಹಿಂದೂಗಳಿಗೆ ಸಮಾನ ಹಕ್ಕು ಸಿಗಬೇಕಾದರೆ ಭಾರತೀಯ ಜನತಾ ಪಕ್ಷಕ್ಕೆ ಮತ ನೀಡಿ ಎಂದು ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT