ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS polls | ಡಾಕ್ಟ್ರೇ... ನನ್ನ ಮಗಳ ಹಾರ್ಟ್‌ ಆಪರೇಷನ್ ಮಾಡಿದ ನಿಮಗೇ ವೋಟು

Published 11 ಏಪ್ರಿಲ್ 2024, 23:30 IST
Last Updated 11 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ಚನ್ನಪಟ್ಟಣ (ರಾಮನಗರ): ‘ನನ್ನ ಮಗಳಿಗೆ ಹಾರ್ಟ್‌ ಆಪರೇಷನ್ ಮಾಡಿದ ಡಾಕ್ಟ್ರು ನೀವೇ. ಚಿಂತೆ ಬಿಡಿ, ನಿಮಗೇ ನನ್ನ ವೋಟು’

ತಾಲ್ಲೂಕಿನ ಮತ್ತೀಕೆರೆ ಶೆಟ್ಟಿಹಳ್ಳಿ ಗ್ರಾಮದಲ್ಲಿ ಮೈತ್ರಿಕೂಟದ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ ಅವರು ಗುರುವಾರ ಪ್ರಚಾರಕ್ಕೆ ತೆರಳಿದಾಗ ಮಹಿಳೆಯೊಬ್ಬರು ಹೇಳಿದ ಮಾತಿದು...

ಪ್ರಚಾರ ವಾಹನದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ, ಜೆಡಿಎಸ್ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹಾಗೂ ಸ್ಥಳೀಯ ಮುಖಂಡರೊಂದಿಗೆ ಮತ ಯಾಚಿಸುತ್ತಿದ್ದ ಮಂಜುನಾಥ್, ವಾಹನದಿಂದ ಕೆಳಗಿಳಿದು ರಸ್ತೆ ಬದಿ ಜಮಾಯಿಸಿದ್ದ ಮಹಿಳೆಯರತ್ತ ತೆರಳಿ ಮತ ಹಾಕುವಂತೆ ಮನವಿ ಮಾಡಿದರು.

ಆಗ ಗುಂಪಿನಲ್ಲಿದ್ದ ಮಹಿಳೆಯೊಬ್ಬರು ಮಂಜುನಾಥ್ ಅವರನ್ನು ಉದ್ದೇಶಿಸಿ, ‘ಡಾಕ್ಟ್ರೆ ಮೂರು ವರ್ಷದ ಹಿಂದೆ ನನ್ನ ಮಗಳು ಅಶ್ವಿನಿಗೆ ಆಪರೇಷನ್ ಮಾಡಿದ್ರಲ್ಲಾ ಅವರ ತಾಯಿ ನಾನು. ನನ್ನ ಮಗಳ ಜೀವ ಉಳಿಸಿದ ನಿಮಗೇ ನನ್ನ ವೋಟು’ ಎಂದು ಕೈ ಮುಗಿದು ಹೇಳಿದರು.

ಅದಕ್ಕೆ ಮುಗುಳ್ನಕ್ಕ ಮಂಜುನಾಥ್, ‘ಒಳ್ಳೆಯದಾಗಲಿ ತಾಯಿ. ಚುನಾವಣೆಯಲ್ಲಿ ನನಗೆ ವೋಟು ಹಾಕಿ. ಮುಂದೆ ನಿಮಗೆ ಮತ್ತಷ್ಟು ಅನುಕೂಲವಾಗಿದೆ’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT