ಭಾನುವಾರ, ಡಿಸೆಂಬರ್ 8, 2019
21 °C

‘2.0’: ಬಿಡುಗಡೆಯಾದ ನಾಲ್ಕೇ ದಿನಕ್ಕೆ ₹400 ಕೋಟಿ ಗಳಿಕೆ

Published:
Updated:

ಚೆನ್ನೈ: ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಹಾಗೂ ರಜನಿಕಾಂತ್‌ ಅಭಿನಯದ ‘2.0’ ಚಿತ್ರ ವಿಶ್ವದಾದ್ಯಂತ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುತ್ತಿದೆ.

ಎಸ್.ಶಂಕರ್ ನಿರ್ದೇಶನದ ಈ ಚಿತ್ರ ಬಿಡುಗಡೆಯಾದ ನಾಲ್ಕೇ ದಿನಕ್ಕೆ ₹400 ಕೋಟಿ ಗಳಿಸಿದ್ದು, ಹಿಂದಿ ಭಾಷೆಯೊಂದರಲ್ಲೇ ₹100 ಕೋಟಿ ಕಲೆಹಾಕಿದೆ.

ಚಿತ್ರದಲ್ಲಿ ರಜನಿಕಾಂತ್‌, ಅಕ್ಷಯ್‌ ಕುಮಾರ್‌, ಆ್ಯಮಿ ಜಾಕ್ಷನ್‌, ಸುಧಾಂಶು ಪಾಂಡೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಸುಮಾರು ₹600 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಈ ಚಿತ್ರದ ಸ್ಯಾಟಲೈಟ್‌ ಹಕ್ಕುಗಳು ₹350 ಕೋಟಿಗೆ ಮಾರಾಟವಾಗುವ ಮೂಲಕ ದಾಖಲೆ ನಿರ್ಮಾಣವಾಗಿತ್ತು. ಆನ್‌ಲೈನ್‌ನಲ್ಲೇ ಸುಮಾರು 10 ಲಕ್ಷ ಟಿಕೆಟ್‌ಗಳು ಮಾರಾಟವಾಗಿದ್ದು ಮತ್ತೊಂದು ದಾಖಲೆ.

ಚಿತ್ರದ ಟ್ರೆಂಡ್‌ ನೋಡಿರುವ ವಿಶ್ಲೇಷಕರು ‘ಉತ್ತಮ ಪ್ರದರ್ಶನ ಕಾಣುತ್ತಿರುವ ಚಿತ್ರ ಉತ್ತಮ ಗಳಿಕೆ ಮಾಡಲಿದೆ’ ಎಂದು ಅಂದಾಜಿಸಿದ್ದಾರೆ.

*

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು