ನಮ್ಮ ಬೆಲೆಕಟ್ಟಲಾಗದ ಸಂಪತ್ತು ಅಕ್ಷಯ ತೃತೀಯ ದಿನದಂದು ಬಹಿರಂಗ: ರಾಧಿಕಾ ಪಂಡಿತ್

ಸೋಮವಾರ, ಮೇ 27, 2019
23 °C

ನಮ್ಮ ಬೆಲೆಕಟ್ಟಲಾಗದ ಸಂಪತ್ತು ಅಕ್ಷಯ ತೃತೀಯ ದಿನದಂದು ಬಹಿರಂಗ: ರಾಧಿಕಾ ಪಂಡಿತ್

Published:
Updated:

ಬೆಂಗಳೂರು: ತಾರಾ ದಂಪತಿ ಯಶ್–ರಾಧಿಕಾ ಅವರ ಮಗಳು ಹೇಗಿರಬಹುದೆಂದು ನೋಡಬೇಕೇ? ಹಾಗಾದರೆ ಮೇ 7 ರವರೆಗೆ ಅಭಿಮಾನಿಗಳು ಕಾಯಲೇಬೇಕು.

ಹುಟ್ಟಿದಾಗಷ್ಟೇ ಮಗಳ ಮೊಗವನ್ನು ತೋರಿಸಿ ಅಭಿಮಾನಿಗಳಲ್ಲಿ ಕುತೂಹಲ ಉಳಿಸಿದ್ದ ತಾರಾ ದಂಪತಿ ಇದೀಗ ತಮ್ಮ ಮಗಳನ್ನು ಅಭಿಮಾನಿಗಳಿಗೆ ತೋರಿಸಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ: ಜೋಗುಳದ ಗುಂಗಿನಲ್ಲಿ ರಾಧಿಕಾ ಪಂಡಿತ್

ತಾರಾ ದಂಪತಿ ಅಕ್ಷಯ ತೃತೀಯ (ಮೇ.7) ದಿನದಂದು ತಮ್ಮ ಕೂಸನ್ನು ತೋರಿಸುವುದಾಗಿ ರಾಧಿಕಾ ಪಂಡಿತ್ ತಮ್ಮ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ತಂದೆ–ಮಗಳ ಸಂಬಂಧ ಬೆಲೆ ಕಟ್ಟಲಾಗದ್ದು. ನಮ್ಮ ಮುದ್ದು ಮಗಳನ್ನು ನೋಡಲು ನೀವೆಲ್ಲಾ ಕಾತರರಾಗಿದ್ದೀರಿ. ನಾವು ನಿಮಗೆ ನಿರಾಸೆ ಮೂಡಿಸುವುದಿಲ್ಲ. ಇದೇ ಮೇ.7 ಅಕ್ಷಯ ತೃತೀಯ ದಿನದಂದು ನಮ್ಮ ಅತ್ಯಮೂಲ್ಯವಾದ, ಪ್ರಶಸ್ತ ಆಸ್ತಿಯನ್ನು ಬಹಿರಂಗಪಡಿಸಲಿದ್ದೇವೆ ಎಂದು ಮಲಗಿರುವ ಮಗಳನ್ನೇ ದಿಟ್ಟಿಸುತ್ತಿರುವ ಯಶ್ ಫೋಟೊವನ್ನು ಅಪ್‌ಲೋಡ್ ಮಾಡಿದ್ದಾರೆ. 

ಇದನ್ನೂ ಓದಿ: ಸಾಮಾಜಿಕ ಜಾಲತಾಣಗಳಲ್ಲಿ ನಟ ಯಶ್ ಮಗಳ ಫೋಟೊ ವೈರಲ್

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 1

  Frustrated
 • 2

  Angry

Comments:

0 comments

Write the first review for this !