ಶನಿವಾರ, ಮೇ 28, 2022
31 °C

ಕೆಜಿಎಫ್-2 ಜತೆ ಸ್ಪರ್ಧೆಗೆ ಇಳಿಯಲಿದೆ ಅಮೀರ್ ಖಾನ್-ಕರೀನಾ ಕಪೂರ್ ಸಿನಿಮಾ!

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Kareena Kapoor Instagram Post

ಬೆಂಗಳೂರು: ಬಾಲಿವುಡ್ ನಟ ಅಮೀರ್ ಖಾನ್ ಮತ್ತು ನಟಿ ಕರೀನಾ ಕಪೂರ್ ನಟನೆಯ ‘ಲಾಲ್ ಸಿಂಗ್ ಛಡ್ಡಾ’ ಚಿತ್ರದ ಬಿಡುಗಡೆಗೆ ದಿನಾಂಕ ಘೋಷಣೆಯಾಗಿದೆ.

2022ರ ಏಪ್ರಿಲ್ 14ರಂದು ಅಮೀರ್ ಮತ್ತು ಕರೀನಾ ನಟನೆಯ ಸಿನಿಮಾ ದೇಶದಾದ್ಯಂತ ಬಿಡುಗಡೆಯಾಗುತ್ತಿದೆ.

ಈ ಮೊದಲು ಸಿನಿಮಾ ಡಿಸೆಂಬರ್‌ನಲ್ಲಿ ಕ್ರಿಸ್‌ಮಸ್‌ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿತ್ತು. ಆದರೆ ಮತ್ತೆ ಬಿಡುಗಡೆ ದಿನಾಂಕ ಬದಲಾಗಿದ್ದು, ಫೆಬ್ರುವರಿ 14ಕ್ಕೆ ನಿಗದಿಯಾಗಿತ್ತು. ಬಳಿಕ ಮತ್ತೊಮ್ಮೆ ದಿನಾಂಕ ಬದಲಾವಣೆ ಮಾಡಲಾಗಿದ್ದು, ಏಪ್ರಿಲ್ 14ರಂದು ಸಿನಿಮಾ ತೆರೆಗೆ ಬರಲಿದೆ.

ಆದರೆ, ಇದೇ ದಿನಾಂಕದಂದು ಕನ್ನಡದ ಬಹು ನಿರೀಕ್ಷಿತ ಮತ್ತು ಪ್ಯಾನ್ ಇಂಡಿಯಾ ಚಿತ್ರ, ನಟ ಯಶ್ ಅಭಿನಯದ ‘ಕೆಜಿಎಫ್-2’ ಕೂಡ ಬಿಡುಗಡೆಯಾಗುತ್ತಿದೆ.

ಕೆಜಿಎಫ್-2 ಸಿನಿಮಾ ಬಗ್ಗೆ ಚಿತ್ರರಂಗದಲ್ಲಿ ಅಪಾರವಾದ ನಿರೀಕ್ಷೆಯಿದೆ. ಅಲ್ಲದೆ, ಈಗಾಗಲೇ ಎರಡು ಬಾರಿ ಬಿಡುಗಡೆ ದಿನಾಂಕ ಮುಂದೂಡಲಾಗಿದೆ. ಹೀಗಾಗಿ ಏಪ್ರಿಲ್ 14, 2022ರಂದು ಚಿತ್ರ ಬಿಡುಗಡೆಯಾಗುವುದು ಪಕ್ಕಾ ಆಗಿದ್ದು, ಎರಡು ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಮುಖಾಮುಖಿಯಾಗಲಿವೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು