ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ ಡಿವೋರ್ಸ್ ಎಕ್ಸ್‌ಪರ್ಟ್‌ನ್ನ ಭೇಟಿಯಾದ ಬಳಿಕ ನಾಗ ಚೈತನ್ಯ, ಸಮಂತಾ ಕೈಬಿಟ್ಟಿದ್ದು

Last Updated 3 ಅಕ್ಟೋಬರ್ 2021, 7:42 IST
ಅಕ್ಷರ ಗಾತ್ರ

ಬೆಂಗಳೂರು: ತೆಲುಗು ನಟ ನಾಗ ಚೈತನ್ಯ ಹಾಗೂ ಖ್ಯಾತ ನಟಿ ಸಮಂತಾ ದಾಂಪತ್ಯ ಜೀವನ ವಿವಾಹ ವಿಚ್ಚೇದನದಲ್ಲಿ ಅಂತ್ಯಗೊಂಡಿದ್ದು, ಈ ವಿಚಾರ ಟಾಲಿವುಡ್ ಸೇರಿದಂತೆ ಬಾಲಿವುಡ್‌ನಲ್ಲೂ ಚರ್ಚೆಗೆ ಗ್ರಾಸವಾಗಿದೆ.

ಈ ತಾರಾ ದಂಪತಿಯ ವಿಚ್ಚೇದನದ ಬಗ್ಗೆ ಪ್ರತಿಕ್ರಿಯಿಸಿ ತಮ್ಮ ಇನ್‌ಸ್ಟಾಂಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವ ನಟಿ ಕಂಗನಾ ರಣಾವತ್, ‘ನಾಗ ಚೈತನ್ಯ ಬಾಲಿವುಡ್‌ನ ಡಿವೋರ್ಸ್ ಎಕ್ಸಪರ್ಟ್‌ ಒಬ್ಬರನ್ನು ಭೇಟಿಯಾದ ಮೇಲೆಯೇ ಅವರು ಸಮಂತಾರನ್ನು ತೊರೆದಿದ್ದು‘ ಎಂದು ಪರೋಕ್ಷವಾಗಿ ನಟ ಅಮೀರ್ ಖಾನ್ ಮೇಲೆ ಹರಿಹಾಯ್ದಿದ್ದಾರೆ.

ಅಮೀರ್ ಖಾನ್ ನಟನೆಯ ಹಾಗೂ ನಿರ್ಮಾಣದ ಲಾಲ್‌ ಸಿಂಗ್ ಚಡ್ಡಾ ಸಿನಿಮಾದಲ್ಲಿ ನಾಗ ಚೈತನ್ಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ 2022ರಲ್ಲಿ ಬಿಡುಗಡೆಯಾಗಲಿದೆ.

2017 ರಲ್ಲಿ ನಾಗ ಚೈತನ್ಯ ಹಾಗೂ ಸಮಂತಾ ಅದ್ಧೂರಿಯಾಗಿ ಮದುವೆಯಾಗಿದ್ದರು.

‘ವಿಚ್ಚೇದನ ಕೊಟ್ಟಾಗ ಯಾವಾಗಲೂ ತಪ್ಪು ಗಂಡನದ್ದೇ ಆಗಿರುತ್ತದೆ. ಮಹಿಳೆಯರನ್ನು ಬಟ್ಟೆಯಂತೆ ಬದಲಾಯಿಸಿ, ನಂತರ ನಾವು ಉತ್ತಮ ಸ್ನೇಹಿತರು ಎನ್ನುವವರ ಹಿಂದೆ ಹೋಗುವುದನ್ನು ನಿಲ್ಲಿಸಿ’ಎಂದು ಅಮೀರ್ ಖಾನ್ ಅವರನ್ನು ಗುರಿಯಾಗಿಸಿ ಕಂಗನಾ ಹೇಳಿದ್ದಾರೆ.

ಲಾಲ್‌ ಸಿಂಗ್ ಚಡ್ಡಾದಲ್ಲಿ ನಾಗ ಚೈತನ್ಯ ಅಭಿನಯಿಸುವಾಗಲೇ ಅವರಿಬ್ಬರೂ ವಿಚ್ಚೇದನಕ್ಕೆ ಒಳಗಾಗಿದ್ದಾರೆ ಎಂದು ಕಂಗನಾ ಅಮೀರ್ ಖಾನ್‌ ಕಡೆಗೆ ಬೊಟ್ಟು ಮಾಡಿ ತೋರಿಸಿದ್ದಾರೆ. ಅಮೀರ್ ಖಾನ್ ಅವರು 2002 ರಲ್ಲಿ ತಮ್ಮ ಮೊದಲ ಪತ್ನಿ ರೀನಾ ದತ್ತ ಅವರಿಗೆ ವಿಚ್ಚೇದನ ನೀಡಿದ್ದರು. ಕಳೆದ ಜೂನ್‌ನಲ್ಲಿ ತಮ್ಮ ಎರಡನೇ ಹೆಂಡತಿ ಕಿರಣ್ ರಾವ್ ಅವರನ್ನು ಅಮೀರ್ ಖಾನ್ ತೊರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT