ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೆಟ್ಟೇರಿದ ‘ಪದ್ಮಗಂಧಿ’

Published : 25 ಆಗಸ್ಟ್ 2024, 23:30 IST
Last Updated : 25 ಆಗಸ್ಟ್ 2024, 23:30 IST
ಫಾಲೋ ಮಾಡಿ
Comments

ಕನ್ನಡ,ಸಂಸ್ಕೃತ, ಹಿಂದಿ ಭಾಷೆಗಳಲ್ಲಿ ನಿರ್ಮಾಣಗೊಳ್ಳುತ್ತಿರುವ ‘ಪದ್ಮಗಂದಿ’ ಚಿತ್ರ ಇತ್ತೀಚೆಗಷ್ಟೇ ಸೆಟ್ಟೇರಿದೆ. ಕ.ಸುಚೇಂದ್ರ ಪ್ರಸಾದ ನಿರ್ದೇಶನದ ಚಿತ್ರಕ್ಕೆ ವಿಧಾನ ಪರಿಷತ್ ಮಾಜಿ ಸದಸ್ಯೆ ಎಸ್.ಆರ್ ಲೀಲಾ ಬಂಡವಾಳ ಹೂಡಿದ್ದಾರೆ. ನಟಿ ಶ್ರುತಿ, ನಟ ಶರಣ್ ಸೇರಿದಂತೆ ಹಲವು ಗಣ್ಯರು ಚಿತ್ರದ ಮುಹೂರ್ತ ಸಮಾರಂಭದಲ್ಲಿ ಹಾಜರಿದ್ದು ತಂಡಕ್ಕೆ ಶುಭ ಕೋರಿದರು. 

‘ಪದ್ಮಪುಷ್ಪದ ವೈಶಿಷ್ಟ್ಯತೆ ಹಾಗೂ ಅಖಂಡತೆಯನ್ನು ತಿಳಿಸುವ ಚಿತ್ರ. ‘ಶುಭಂ ಕರೋತಿ ಮೈತ್ರೇಯಿ ಬಾಲಕಿಯರ ಗುರುಕುಲ’ವನ್ನು ಹಿನ್ನೆಲೆಯಾಗಿರಿಸಿಕೊಂಡು ಚಿತ್ರ ಸಾಗುತ್ತದೆ. ಪುರಾಣ, ಸಸ್ಯ ವಿಜ್ಞಾನ, ದರ್ಶನಶಾಸ್ತ್ರ, ವೇದ ವೇದಾಂತ, ಆಯುರ್ವೇದ, ಯೋಗ ಹಾಗೂ ಸಮಕಾಲೀನದಲ್ಲಿ ಬರುವ ‘ಪದ್ಮಪುಷ್ಪ’ದ ಕುರಿತಾದ ವಿಚಾರ ಚಿತ್ರದಲ್ಲಿರಲಿದೆ’ ಎಂದಿದ್ದಾರೆ ನಿರ್ದೇಶಕರು.

ಮನು ಯಾಪ್ಲಾರ್ ಹಾಗೂ ನಾಗರಾಜ ಅದವಾನಿ ಛಾಯಾಚಿತ್ರಗ್ರಹಣವಿದೆ. ಮುಖ್ಯಭೂಮಿಕೆಯಲ್ಲಿ ಬಾಲಕಿ ಮಹಾಪದ್ಮ, ಪರಿಪೂರ್ಣ ಚಂದ್ರಶೇಖರ್, ಸಿತಾರ ಮುಂತಾದವರಿದ್ದಾರೆ. ಸೆಪ್ಟೆಂಬರ್ ತಿಂಗಳಿನಿಂದ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT