ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಕಾಂತಾರ ಚಾಪ್ಟರ್ 1’ ಅ. 2ರಂದು ಅದ್ಧೂರಿಯಾಗಿ ತೆರೆಕಂಡಿತ್ತು. ದೇಶದಾದ್ಯಂತ 7 ಸಾವಿರಕ್ಕೂ ಅಧಿಕ ಪರದೆಯಲ್ಲಿ ಬಿಡುಗಡೆಯಾಗಿದ್ದ ‘ಕಾಂತಾರ ಚಾಪ್ಟರ್ 1’ ಮೊದಲ ವಾರದಲ್ಲೇ ₹509.25 ಕೋಟಿ ಗಳಿಕೆ ಮಾಡಿತ್ತು.

ಸಿನಿಮಾ ಬಿಡುಗಡೆಯಾಗಿ ವಾರ ಉರುಳಿದ್ದರೂ ಸಿನಿಮಾ ಪ್ರೇಕ್ಷಕರನ್ನು ಸೆಳೆಯುವುದು ನಿಂತಿಲ್ಲ. ಸಿನಿಮಾ ನೋಡಿ ಆಚೆ ಬಂದ ಪ್ರತಿಯೊಬ್ಬರು ಮಾತಾಡಿದ್ದೇ ಕ್ಲೈಮ್ಯಾಕ್ಸ್ ಬಗ್ಗೆ. ರಿಷಬ್ ಶೆಟ್ಟಿ ಅವರ ಎನರ್ಜಿ ಬಗ್ಗೆಯೇ ಪ್ರೇಕ್ಷಕರು ಹಾಡಿ ಹೊಗಳುತ್ತಿದ್ದಾರೆ.
.ಕಾಂತಾರ ಅಧ್ಯಾಯ-1| ಭಾರತೀಯ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದೆ: ಸುಮಲತಾ.ಬಿಗ್ ಬಿ ಅಮಿತಾಬ್ರನ್ನು ಭೇಟಿಯಾದ ರಿಷಬ್: ಉತ್ಸುಕನಾಗಿದ್ದೇನೆ ಎಂದಿದ್ದೇಕೆ?.
ಅಷ್ಟು ಅದ್ಭುತವಾಗಿ ಮೂಡಿಬಂದಿದ್ದ ಕ್ಲೈಮ್ಯಾಕ್ಸ್ ಹಿಂದಿನ ಚಿತ್ರೀಕರಣದ ಹೇಗಿತ್ತು ಎಂಬುವುದರ ಬಗ್ಗೆ ರಿಷಬ್ ಶೆಟ್ಟಿ ಮಾಹಿತಿ ಹಂಚಿಕೊಂಡಿದ್ದಾರೆ. ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ಕ್ಲಿಕ್ಕಿಸಿಕೊಂಡ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಅದರ ಜೊತೆಗೆ ‘ಕ್ಲೈಮ್ಯಾಕ್ಸ್ ಶೂಟಿಂಗ್ನ ಸಮಯ. ಊದಿಕೊಂಡಿದ್ದ ಕಾಲು, ನಿತ್ರಾಣವಾಗಿದ್ದ ದೇಹ. ಇವತ್ತು ಕೋಟ್ಯಂತರ ಜನ ನೋಡಿ ಮೆಚ್ಚುವ ಹಾಗೆ ಆಗಿದೆ. ಇದು ನಾವು ನಂಬಿರುವ ಶಕ್ತಿಗಳ ಆಶೀರ್ವಾದದಿಂದ ಮಾತ್ರ ಸಾಧ್ಯ. ಸಿನಿಮಾ ನೋಡಿ ಅಭಿಪ್ರಾಯ ವ್ಯಕ್ತಪಡಿಸಿದ ತಮ್ಮೆಲ್ಲರಿಗೂ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.

ರಿಷಬ್ ಶೆಟ್ಟಿ ಹಂಚಿಕೊಂಡ ಪೋಸ್ಟ್ ನೋಡಿದ ಅಭಿಮಾನಿಗಳು, ನಿಮ್ಮ ಶ್ರಮಕ್ಕೆ ಸಿಕ್ಕ ಫಲ ಇದು, ನಮ್ಮ ಕನ್ನಡ ಹೆಮ್ಮೆಯ ಚಿತ್ರ ಕಾಂತಾರ ಎಂದು ಕಾಮೆಂಟ್ಸ್ ಮೂಲಕ ತಮ್ಮ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.