ಬಾಲಿವುಡ್‌ನ ಗ್ಲ್ಯಾಮರ್ ಬೆಡಗಿ ಕರೀನಾ ಕಪೂರ್ ಖಾನ್ ತಮ್ಮ ಸೌಂದರ್ಯ ಮತ್ತು ಅಭಿನಯದಿಂದ ಹಲವು ಹುಡುಗರ ರಾತ್ರಿ ನಿದ್ದೆ ಕದ್ದಿರಬಹುದು. ಮಗುವಾದ ಮೇಲೂ ತಮ್ಮ ದೇಹಸಿರಿಯನ್ನು ಮೊದಲಿನಂತೆ ಕಾಪಾಡಿಕೊಂಡಿರುವ ಕರೀನಾ ಹುಡುಗರಷ್ಟೇ ಅಲ್ಲ ಹುಡುಗಿಯರ ಮನವನ್ನೂ ಕದ್ದಿದ್ದಾರೆ.

ಈಚೆಗೆ ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಕತ್ರೀನಾ ಕೈಫ್ ತಾವು ಗೇ ಆಗಿದ್ದರೆ ಕರೀನಾ ಕಪೂರ್ ಜೊತೆಗೆ ಡೇಟಿಂಗ್ ಮಾಡುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ. ಅದರಲ್ಲೂ ಸಲಿಂಗಿಯಾಗಿ ಸಂಬಂಧ ಹೊಂದುವಂತಿದ್ದರೆ ನಿಸ್ಸಂಶಯವಾಗಿ ಕರೀನಾ ಜೊತೆಗೆ ಸಂಬಂಧ ಹೊಂದುತ್ತಿದ್ದೆ ಎಂದು ಮುಕ್ತವಾಗಿ ಹೇಳಿಕೊಂಡಿದ್ದಾರೆ.

ಈ ಹಿಂದೆ ಕತ್ರೀನಾ ಸಂದರ್ಶನವೊಂದರಲ್ಲಿ,‘ ತಾನು ಕರೀನಾ ಜೊತೆಗೆ ಕೆಲಸ ಮಾಡಲು ಬಯಸುವುದಾಗಿ ಹೇಳಿಕೊಂಡಿದ್ದರು. ಕರೀನಾ ನನಗೆ ಆತ್ಮೀಯಳು. ಆಕೆ ನೋಡಲು ತುಂಬಾ ಸರಳ ಮತ್ತು ಸುಂದರವಾಗಿದ್ದಾಳೆ’ ಎಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.