ದಕ್ಷಿಣ ಭಾರತದಲ್ಲಿಯೇ ಅತಿದೊಡ್ಡ ಆಡಿಯೊ ಸಂಸ್ಥೆ ಎನಿಸಿಕೊಂಡಿರುವ ‘ಲಹರಿ’ಗೀಗ ಸುವರ್ಣ ಸಂಭ್ರಮ. ಸಾವಿರಾರು ಕನ್ನಡ ಸಿನಿಮಾ ಹಾಡುಗಳನ್ನು ಜನರಿಗೆ ತಲುಪಿಸಿದ ಸಂಸ್ಥೆಯ ಏಳುಬೀಳುಗಳ ಕುರಿತು ಸಂಸ್ಥೆಯ ಮುಖ್ಯಸ್ಥ ವೇಲು ಮಾತನಾಡಿದ್ದಾರೆ.

‘ಐವತ್ತು ವರ್ಷಗಳ ಹಿಂದೆ ಅಣ್ಣ ಮನೋಹರ್ ನಾಯ್ಡು ಅವರು ₹500ನಿಂದ ಪ್ರಾರಂಭಿಸಿದ ಸಂಸ್ಥೆಯಿದು. ಜೀವನದಲ್ಲಿ ಏನಾದರೂ ಮಾಡಲೇಬೇಕೆಂಬ ಹಠದಿಂದ ಇದನ್ನು ಶುರು ಮಾಡಿದರು. ‘ಲಹರಿ’ ಎಂಬ ಹೆಸರು ನೀಡಿದ್ದು ಸಾಹಿತಿ ದಿವಂಗತ ವಿಜಯನಾರಸಿಂಹ ಅವರು. ನಮ್ಮ ಮೊದಲ ಕ್ಯಾಸೆಟ್ ‘ವಿವಾಹ ಗೀತೆಗಳು’. ನಂತರ ಮಂಜುಳಾ ಗುರುರಾಜ್ ಆರ್ಕೆಸ್ಟ್ರಾದ ‘ಅಷ್ಟದೇವಿ ದರ್ಶನ’ ಎಂಬ ಭಕ್ತಿಗೀತೆಗಳನ್ನು ಬಿಡುಗಡೆಗೊಳಿಸಿದವು. ‘ಚಾಮುಂಡೇಶ್ವರಿ ಪೂಜಾ ಮಹಿಮೆ’ ನಮ್ಮ ಸಂಸ್ಥೆಯಿಂದ ಬಿಡುಗಡೆಗೊಂಡ ಮೊದಲ ಸಿನಿಮಾ ಧ್ವನಿಸುರಳಿ’ ಎಂದು ಮಾತು ಪ್ರಾರಂಭಿಸಿದರು ವೇಲು.

ಕ್ಯಾಸೆಟ್ಗಳ ಬಳಿಕ ಸಂಸ್ಥೆಯಿಂದ ಕನ್ನಡ ಖವ್ವಾಲಿ ಗೀತೆಗಳು, ಕನ್ನಡ ಜನಪದ ಗೀತೆಗಳು ಹೊರಬಂದವು. ಸಂಸ್ಥೆಗೆ ತಿರುವು ನೀಡಿದ್ದು 1987ರಲ್ಲಿ ತೆರೆಕಂಡ ‘ಪ್ರೇಮಲೋಕ’ ಸಿನಿಮಾ. ಈ ಸಿನಿಮಾದ 36 ಲಕ್ಷ ಕ್ಯಾಸೆಟ್ಗಳನ್ನು ಲಹರಿ ಈತನಕ ಮಾರಾಟ ಮಾಡಿದೆ. ‘ಸಂಸ್ಥೆ ಇತಿಹಾಸದಲ್ಲಿ ಅತಿಹೆಚ್ಚು ಮಾರಾಟಗೊಂಡ ಕ್ಯಾಸೆಟ್ ಇದು. ಇಲ್ಲಿವರೆಗೂ ಏನಿಲ್ಲವೆಂದರೂ ಒಂದೂವರೆ ಲಕ್ಷ ಹಾಡುಗಳನ್ನು ಬಿಡುಗಡೆಗೊಳಿಸಿದೆ. ಕೋಟ್ಯಂತರ ಕ್ಯಾಸೆಟ್ಗಳನ್ನು ಮಾರಾಟ ಮಾಡಿದ್ದೇವೆ. 1992ರ ನಂತರ ಕ್ಯಾಸೆಟ್ ಭರಾಟೆ ಕಡಿಮೆಯಾಯಿತು. 2000ದ ಹೊತ್ತಿಗೆ ಪೂರ್ತಿಯಾಗಿ ನಿಂತಿತು. ಆಮೇಲೆ ಸಿ.ಡಿಗಳು ಪ್ರಾರಂಭಗೊಂಡವು. ಸಿ.ಅಶ್ವತ್ಥ ಅವರ ‘ಮುಂಬೈನಲ್ಲಿ ಸಿ.ಅಶ್ವತ್ಥ್’ ನಮ್ಮ ಕೊನೆಯ ಕ್ಯಾಸೆಟ್. ಐದು ದಶಕಗಳಲ್ಲಿ ಕೋಟ್ಯಂತರ ಕ್ಯಾಸೆಟ್ ಮಾರಾಟ ಮಾಡಿದ್ದೇವೆ’ ಎನ್ನುತ್ತಾರೆ ವೇಲು.

‘ಸಿ.ಡಿ ಬಳಿಕ ಪೆನ್ಡ್ರೈವ್, ಎಂಪಿ3ಗಳು ಬಂದವು. ಸಿ.ಡಿ ಇರುವ ತನಕವೂ ಆಡಿಯೊ ಮಾರುಕಟ್ಟೆ ಚೆನ್ನಾಗಿತ್ತು. 2004ರಲ್ಲಿ ಡಿಜಿಟಲ್ ಮಾರುಕಟ್ಟೆ ತೆರೆದುಕೊಂಡಿತು. ಆಗ ಆಡಿಯೊ ಕಂಪನಿಗಳ ದುಸ್ಥಿತಿ ಪ್ರಾರಂಭವಾಯಿತು. ಸಾಕಷ್ಟು ಆಡಿಯೊ ಕಂಪನಿಗಳು ಬಾಗಿಲು ಹಾಕಿದವು. 3600 ಕ್ಯಾಸೆಟ್ ಅಂಗಡಿಗಳು ಬಾಗಿಲು ಹಾಕಿದವು. ಆ ಎರಡು ವರ್ಷ ನಮಗೆ ಕಠಿಣ ದಿನಗಳು. ಅಂಥ ಕಾಲದಲ್ಲಿಯೂ ಧೈರ್ಯ ಮಾಡಿ ಮುಚ್ಚಿದ ಕಂಪನಿಗಳ ಹಾಡುಗಳನ್ನು ಖರೀದಿ ಪ್ರಾರಂಭಿಸಿದೆವು. ಅದಾದ ಬಳಿಕ ಯೂಟ್ಯೂಬ್, ಸ್ಪಾಟಿಫೈ, ಗಾನಾ ಮೊದಲಾದ ಸುಮಾರು 30 ಡಿಜಿಟಲ್ ವೇದಿಕೆಗಳ ಉಗಮವಾಯಿತು. ಮತ್ತೆ ಆಡಿಯೊಗೆ ಬೇಡಿಕೆ ಪ್ರಾರಂಭವಾಯಿತು. ಈಗ ಮಾರುಕಟ್ಟೆ ಸ್ಥಿರವಾಗಿದೆ. ಅಂದು ಕ್ಯಾಸೆಟ್ಗಳ ಮೂಲಕ ಹಾಡುಗಳು ನಮ್ಮ ರಾಜ್ಯ ಅಥವಾ ಪಕ್ಕದ ರಾಜ್ಯಗಳಿಗೆ ಮಾತ್ರ ತಲುಪುತ್ತಿದ್ದವು. ಈಗ ಹಾಗಲ್ಲ, ಹಾಡುಗಳನ್ನು ಅಮೇಜಾನ್ ಕಾಡಿನಿಂದ, ಬಿಳಿಗಿರಿರಂಗನ ಬೆಟ್ಟದವರೆಗೆ ಎಲ್ಲಿ ಬೇಕಾದರೂ ಕುಳಿತು ಕೇಳಬಹುದು ಎಂಬಂತಾಗಿದೆ. ಮಾರುಕಟ್ಟೆ ವಿಸ್ತರಿಸಿಕೊಂಡಿದೆ’ ಎನ್ನುತ್ತಾರೆ ಅವರು.

‘ನಮ್ಮ ಸಹೋದರ ಸಂಸ್ಥೆ ಎಂಆರ್ಟಿ ಮ್ಯೂಸಿಕ್ ಕೂಡ ಮೊದಲಿನಿಂದಲೂ ಇತ್ತು. ಕರೋನಾ ಬಳಿಕ ತಮಿಳುನಾಡಿನ ಸಂಗೀತ ಕಂಪನಿ ಖರೀದಿಸಿದೆವು. ಅದನ್ನು ಎಂಆರ್ಟಿ ಜೊತೆ ವಿಲೀನಗೊಳಿಸಿದ ನಂತರ ಈ ಸಂಸ್ಥೆ ಕೂಡ ಮುನ್ನೆಲೆಗೆ ಬಂತು ‘ಎ’, ‘ಅಂಜದ ಗಂಡು’, ‘ರಣಧೀರ’, ‘ಯುದ್ಧಕಾಂಡ’, ‘ದೇವತಾ ಮನುಷ್ಯ’ದಿಂದ ‘ಕೆಜಿಎಫ್’ವರೆಗೆ ಸಾಕಷ್ಟು ಸಿನಿಮಾಗಳ ಹಿಟ್ ಹಾಡುಗಳು ನಮ್ಮಲ್ಲಿವೆ’ ಎಂದು ಕಂಪನಿಯ ಹಳೆಯ ನೆನಪುಗಳೊಂದಿಗೆ ಮಾತಿಗೆ ವಿರಾಮವಿತ್ತರು.

ದಿಗ್ಗಜ ಸಂಗೀತಗಾರರ ಹಾಡುಗಳು

‘1992ರಲ್ಲಿ ಮಣಿರತ್ನಂ ಅವರ ‘ರೋಜಾ’ ಚಿತ್ರದ ಆಡಿಯೊ ಹಕ್ಕುಗಳು ₹75 ಲಕ್ಷಗಳ ದುಬಾರಿ ಮೊತ್ತಕ್ಕೆ ಖರೀದಿಸಿದ್ದು ಲಹರಿ. ಈ ಚಿತ್ರದಿಂದಲೇ ಎ.ಆರ್.ರೆಹಮಾನ್ರಂಥ ಸಂಗೀತ ನಿರ್ದೇಶಕರಾಗಿ ಜನಪ್ರಿಯರಾಗಿದ್ದು. 1991ರಲ್ಲಿ ಮಣಿರತ್ನಂ ನಿರ್ದೇಶನದ ‘ದಳಪತಿ’ ಚಿತ್ರಕ್ಕೆ ಅತಿ ಹೆಚ್ಚು ರಾಯಧನ ನೀಡಿ ಖರೀದಿಸಿದ್ದೆವು. ಎನ್ಟಿಆರ್ ಅವರ ‘ಬ್ರಹ್ಮರ್ಷಿ ವಿಶ್ವಾಮಿತ್ರ’ ಚಿತ್ರದ ಆಡಿಯೊ ಖರೀದಿಸಿದ್ದೆವು. ಆಗ ಮುಖ್ಯಮಂತ್ರಿಯಾಗಿದ್ದ ಅವರೇ ಈ ಚಿತ್ರದ ಧ್ವನಿಸುರುಳಿ ಬಿಡುಗಡೆ ಮಾಡಿದ್ದು ವಿಶೇಷವಾಗಿತ್ತು. ಕನ್ನಡದಲ್ಲಿ ‘ಕೆಜಿಎಫ್’ ಚಿತ್ರದ ಆಡಿಯೊವನ್ನು ಅತಿ ಹೆಚ್ಚು ಹಣ ನೀಡಿ ಖರೀದಿಸಿದ್ದು. ವಿ.ಮನೋಹರ್ ಅವರ ‘ಓ ಕುಸುಮಾ ಬಾಲೆ’ ಗುರುಕಿರಣ್ ಅವರ ‘ಎ’ ಮುಂತಾದ ಚಿತ್ರಗಳ ಹಾಡುಗಳು ಸೇರಿದಂತೆ ಸುಮಾರು 30–35 ದಿಗ್ಗಜ ಸಂಗೀತ ನಿರ್ದೇಶಕರಿಗೆ ಲಹರಿ ವೇದಿಕೆ ಒದಗಿಸಿದೆ.

4500 ಸಿನಿಮಾಗಳ ಸಿನಿಮಾ ಆಡಿಯೊ ಖರೀದಿಸಿದ್ದೇವೆ. ಒಂದೂವರೆ ಲಕ್ಷ ಹಾಡುಗಳನ್ನು ಬಿಡುಗಡೆ ಮಾಡಿದ್ದೇವೆ. ಮನೆಯಲ್ಲಿ ಇಬ್ಬರಿಗೆ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ. ಸಂಸ್ಥೆಗೆ ಎರಡು ಗ್ರ್ಯಾಮಿ ಬಂದಿದೆ. ನಮ್ಮ ಆಡಿಯೊ ಸಂಸ್ಥೆಯ ‘ನಾಟು ನಾಟು’ ಹಾಡಿಗೆ ಆಸ್ಕರ್ ಬಂದಿದೆ’ ಎಂದು ಸಂಸ್ಥೆಯ ಸಿನಿಧ್ವನಿಪಯಣವನ್ನು ಮೆಲುಕು ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.