ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

#ಆರ್‌ಆರ್‌ಆರ್‌ ಚಿತ್ರಕ್ಕೆ ಪ್ರಭಾಸ್‌

Last Updated 15 ಏಪ್ರಿಲ್ 2019, 19:30 IST
ಅಕ್ಷರ ಗಾತ್ರ

ತೆಲುಗು ಚಿತ್ರರಂಗದಲ್ಲಿ ಭಾರಿ ಕುತೂಹಲ ಕೆರಳಿಸಿರುವ ಚಿತ್ರ ರಾಜಮೌಳಿ ನಿರ್ದೇಶನದ#ಆರ್‌ಆರ್‌ಆರ್‌. ಭರ್ಜರಿ ತಾರಾಗಣ ಒಂದೆಡೆಯಾದರೆ ಚಿತ್ರಕತೆ ಬಯಸುವಂತಹ ಅದ್ದೂರಿ ಸೆಟ್‌ ಮತ್ತು ತಾಂತ್ರಿಕ ಕೌಶಲದಿಂದಾಗಿ ಈ ಚಿತ್ರ ಬಿಡುಗಡೆಗಾಗಿ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.

ತೆಲುಗು ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸುವ ಮತ್ತೊಂದು ಚಿತ್ರ ಇದಾಗಬೇಕು ಎಂಬ ರಾಜಮೌಳಿ ಲೆಕ್ಕಾಚಾರ. ಇದೀಗ ಅವರು ಕೊಟ್ಟಿರುವ ಹೊಸ ಸುದ್ದಿ ನೋಡಿ.

#ಆರ್‌ಆರ್‌ಆರ್‌ ನಲ್ಲಿ ‘ಬಾಹುಬಲಿ’ ಪ್ರಭಾಸ್‌ಗೆ ಮಹತ್ವದ ಜವಾಬ್ದಾರಿಯೊಂದನ್ನು ಅವರು ಸೃಷ್ಟಿಸಿದ್ದಾರೆ. ಹೌದು, ಪ್ರಭಾಸ್‌#ಆರ್‌ಆರ್‌ಆರ್‌ನ ಎರಡು ಪ್ರಮುಖ ಪಾತ್ರಗಳಿಗೆ ಕಂಠದಾನ ಮಾಡಲಿದ್ದಾರೆ.ಅಲ್ಲುರಿ ಸೀತಾರಾಮ ಮತ್ತು ಕೋಮರಮ್‌ ಭೀಮ್‌ ಪಾತ್ರಗಳ ಸಂಭಾಷಣೆಗೆ ಪ್ರಭಾಸ್‌ ಕಂಠ ನೀಡಲಿದ್ದಾರೆ.

ತಾರಕ್‌ ಮತ್ತು ರಾಮ್‌ಚರಣ್‌ ಮಾಡಲಿರುವ ಈ ಪಾತ್ರಕ್ಕೆ ಪ್ರಭಾಸ್‌ ಎಂಟ್ರಿಯಿಂದಾಗಿ ತಾರಾ ಮೌಲ್ಯ ಹೆಚ್ಚಿದಂತಾಗಿದೆ. ಚಿತ್ರೀಕರಣದ ವೇಳೆ ಪಾದದ ಮೂಳೆಗೆ ಏಟು ಬಿದ್ದಿರುವ ಕಾರಣ ರಾಮ್‌ ಚರಣ್‌ ವಿಶ್ರಾಂತಿಯಲ್ಲಿದ್ದಾರೆ. ಅವರು ಹಿಂತಿರುಗುತ್ತಲೇ ಪ್ರಭಾಸ್‌#ಆರ್‌ಆರ್‌ಆರ್‌ ಸೆಟ್‌ ಸೇರಿಕೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT