ಅರ್ನೆಸ್ಟ್ ಹೆಮಿಂಗ್ವೇ ಬರೆದ ‘ಎ ಫೇರ್ವೆಲ್ ಟು ಆರ್ಮ್ಸ್’ ಎಂಬ ಕಾದಂಬರಿ ಬಂದದ್ದು 1929ರಲ್ಲಿ. ‘ಮುತ್ತಿನಹಾರ’ ಕನ್ನಡ ಸಿನಿಮಾ ತಯಾರಾದದ್ದು 1990ರಲ್ಲಿ. ಎರಡರ ದ್ರವ್ಯದಲ್ಲಿ ಒಂದು ಸಾಮ್ಯವಿದೆ. 70 ವರ್ಷಗಳ ನಂತರವೂ ಅಂತಹದೊಂದು ಕಥಾಗಾಮಿನಿಯನ್ನು ನಮ್ಮದಾಗಿಸಿಕೊಟ್ಟ ಸಾರ್ಥಕ್ಯ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಅವರದ್ದು.

‘ಮುತ್ತಿನಹಾರ’ ಸಿನಿಮಾ ತೆರೆಕಂಡಾಗ ವಿಷ್ಣುವರ್ಧನ್ ಅಭಿಮಾನಿಗಳು, ಸಿನಿಮಾದಲ್ಲಿನ ಕಥಾನಾಯಕನಂತೆಯೇ ತಲೆ ಬೋಳಿಸಿಕೊಂಡು ಮೊದಲ ಪ್ರದರ್ಶನ ನೋಡಲು ಬಂದಿದ್ದರು. ಬೆಂಗಳೂರಿನ ಚಿತ್ರಮಂದಿರದಲ್ಲಿ ಆಗ ಕೆಲವು ಕಿಡಿಗೇಡಿಗಳು, ತಲೆ ಬೋಳಿಸಿಕೊಂಡು ಬಂದಿದ್ದ ಅಭಿಮಾನಿಗಳ ಮೇಲೆ ಹಲ್ಲೆ ನಡೆಸಿದ್ದರು. ಅವರನ್ನು ಆಸ್ಪತ್ರೆಗೆ ಸಾಗಿಸಲು ಹೇಳಿ, ಚಿಕಿತ್ಸೆ ಕೊಡಿಸಿದ ನಂತರ ಯೋಗಕ್ಷೇಮ ವಿಚಾರಿಸಿಕೊಂಡಿದ್ದವರು ಇದೇ ರಾಜೇಂದ್ರ ಸಿಂಗ್ ಬಾಬು.

ಅದ್ಭುತ ಓಪನಿಂಗ್ ಕಂಡಿದ್ದ ಚಿತ್ರಕ್ಕೆ ರಾಷ್ಟ್ರಮಟ್ಟದಲ್ಲಿ, ರಾಜ್ಯಮಟ್ಟದಲ್ಲಿ ಪ್ರಶಸ್ತಿಗಳೇನೋ ಹುಡುಕಿಕೊಂಡು ಬಂದವು. ಆದರೆ, ಪ್ರೇಕ್ಷಕ ಅದನ್ನು ದೊಡ್ಡ ಪ್ರಮಾಣದಲ್ಲಿ ಗೆಲ್ಲಿಸಲಿಲ್ಲ. ಹಂಸಲೇಖ ಬರೆದಿದ್ದ, ಬಾಲಮುರಳಿಕೃಷ್ಣ ಶಾರೀರದ ‘ದೇವರು ಹೊಸೆದ ಪ್ರೇಮದ ದಾರ...’ ಹಾಡು ಈ ಹೊತ್ತಿಗೂ ಕಾಡುತ್ತದೆ. ಆ ಚಿತ್ರ ನಿರೀಕ್ಷಿತ ಗೆಲುವು ಕಾಣದೆಹೋದರೂ ಸೃಜನಶೀಲತೆ ನೆಚ್ಚಿಕೊಂಡ ಬಾಬು ಗೆದ್ದಿದ್ದರು.

ಅದಾಗಿ ಕೆಲವು ವರ್ಷಗಳ ನಂತರ ‘ಹೂವು ಹಣ್ಣು’ ಚಿತ್ರವನ್ನು ನಿರ್ದೇಶಿಸಿದರು. ವೇಶ್ಯೆಯ ಬದುಕಿನ ಸಿಕ್ಕುಗಳನ್ನು ಒಳಗೊಂಡ, ತಾಯಿ–ಮಗಳ ಮನೋವ್ಯಾಪಾರದ, ತ್ರಿವೇಣಿ ಕಾದಂಬರಿ ಆಧಾರಿತ ಚಿತ್ರ ಅದು. ಜ್ಯೂಲಿ ಲಕ್ಷ್ಮಿ ಹದವರಿತ ಅಭಿನಯವಿದ್ದೂ ಆ ಚಿತ್ರ ಕೂಡ ಕಮರ್ಷಿಯಲ್ ದೃಷ್ಟಿಯಲ್ಲಿ ಸೋತಿತು. ಪ್ರಯೋಗಮುಖಿಯಾಗಿ ಮತ್ತೆ ಬಾಬು ಗೆದ್ದರು ಎಂದು ನಿಸ್ಸಂಶಯವಾಗಿ ಹೇಳಬಹುದು. ಆಮೇಲೆ ಅವರು ‘ಕುರಿಗಳು ಸಾರ್ ಕುರಿಗಳು’, ‘ಕೋತಿಗಳು ಸಾರ್ ಕೋತಿಗಳು’ ತರಹದ ಬ್ರೈನ್ಲೆಸ್ ಕಾಮಿಡಿ ವಸ್ತುವಿಷಯ ಉಣಬಡಿಸಿ ಜನಪ್ರಿಯತೆಯ ಹಳಿಗೆ ಮರಳಿದರು. ಅದಕ್ಕೂ ಮೊದಲು ‘ಮಹಾಕ್ಷತ್ರಿಯ’ ಚಿತ್ರದ ಸಮಾಧಾನಕರ ಯಶಸ್ಸು ಅವರಿಗೆ ಅಗತ್ಯವಿದ್ದ ಜೀವಾನಿಲ ನೀಡಿತ್ತು. ವ್ಯಸನಕ್ಕೆ ಸಿಲುಕಿದ ಯುವಕರನ್ನು ಸರಿದಾರಿಗೆ ತರುವ ಬೋಧನಾ ಧಾಟಿಯ ಈ ಚಿತ್ರದ ‘ಈ ಭೂಮಿ ಬಣ್ಣದ ಬುಗುರಿ ಆ ಶಿವನೇ ಚಾಟಿ ಕಣೋ’ ಹಾಡು ಈ ಹೊತ್ತೂ ಅನುರಣಿಸುತ್ತದೆ.

ಮಹಾತ್ಮ ಪಿಕ್ಚರ್ಸ್ ನಿರ್ಮಾಣ ಸಂಸ್ಥೆಯ ರೂವಾರಿಗಳ ಕುಟುಂಬದ ಕುಡಿ ರಾಜೇಂದ್ರ ಸಿಂಗ್ ಬಾಬು. 48 ಚಿತ್ರಗಳನ್ನು ನಿರ್ಮಿಸಿದ್ದ ಶಂಕರ್ ಸಿಂಗ್ ಹಾಗೂ ನಟಿ ಪ್ರತಿಮಾದೇವಿ ಅವರ ಪುತ್ರ ಈ ಬಾಬು. ತಂದೆಯಂತೆಯೇ ಸಿನಿಮಾ ರಕ್ತದಲ್ಲೇ ಬೆರೆತಿತ್ತು. ಅವರು ‘ನಾಗಕನ್ಯೆ’ ಚಿತ್ರದ ಮೂಲಕ ನಿರ್ದೇಶನಕ್ಕೆ ಕಾಲಿಟ್ಟು ಐವತ್ತು ವರ್ಷಗಳು ಉರುಳಿವೆ.

‘ನಾಗರಹೊಳೆ’ ಚಿತ್ರದ ಸಾಹಸಕ್ಕೆ ಕೈಹಾಕಿ ಮಕ್ಕಳ ಸಿನಿಮಾ ಪ್ರಭೇದದಲ್ಲಿ ಕೈಪಳಗಿಸಿಕೊಂಡ ಅವರು, ಆಮೇಲೆ ‘ಕಿಲಾಡಿ ಜೋಡಿ’, ‘ಭರ್ಜರಿ ಬೇಟೆ’ ಸಾಹಸಚಿತ್ರಗಳನ್ನು ನಿರ್ದೇಶಿಸಿ ಕಮರ್ಷಿಯಲ್ ಚೌಕಟ್ಟಿಗೆ ಒಗ್ಗಿಕೊಂಡರು.

‘ಸುಧಾ’ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗುತ್ತಿದ್ದ ‘ಅಂತ’ ಕಾದಂಬರಿಯ ಮೇಲೆ ಅವರ ಕಣ್ಣು ಬಿತ್ತು. ಪ್ರೆಸ್ ಕ್ಲಬ್ನಲ್ಲಿ ಎದುರಾದ ಆ ಕಾದಂಬರಿಯ ಕರ್ತೃ ಎಚ್.ಕೆ. ಅನಂತರಾವ್ ಅವರನ್ನು ಕಂಡು ಬಾಬು ಚಕಿತರಾಗಿದ್ದರು. ಅಷ್ಟು ಸರಳವಾಗಿದ್ದ ವ್ಯಕ್ತಿಯಿಂದ ಹೊಮ್ಮಿದ್ದ ತೀವ್ರವಾದ ವಸ್ತುವನ್ನು ಅವರು ಸಿನಿಮಾ ಮಾಡಲು ನಿರ್ಧರಿಸಿದರು. ‘ಅಂತ’ ಚಿತ್ರ ಮೂಡಿದ್ದು ಹಾಗೆ. 1981ರಲ್ಲಿ ತೆರೆಕಾಣುವ ಮೊದಲು ಅದು ಸೆನ್ಸಾರ್ ಮಂಡಳಿಯವರ ಕೆಂಗಣ್ಣಿಗೂ ಗುರಿಯಾಗಿತ್ತು. ಅದರಲ್ಲಿನ ಹಿಂಸಾದೃಶ್ಯಗಳನ್ನು ಆಗ ಅನೇಕರು ಕಟುವಾಗಿ ವಿಮರ್ಶೆ ಮಾಡಿದ್ದರು. ಆದರೆ, ಚಿತ್ರ ತೆರೆಕಂಡಿದ್ದೇ ಜನರು ಮುಗಿಬಿದ್ದು ನೋಡಿದರು. ಕನ್ವರ್ ಲಾಲ್ ಪಾತ್ರ ಅಂಬರೀಶ್ ಅವರೊಳಗಿನ ಪ್ರತಿನಾಯಕನನ್ನೂ ಅನಾವರಣಗೊಳಿಸಿತು. ರೆಬೆಲ್ ಸ್ಟಾರ್ ಎಂಬ ಬಿರುದು ಅಂಬರೀಶ್ ಅವರಿಗೆ ಎಷ್ಟು ಅನ್ವರ್ಥ ಎನ್ನುವುದನ್ನು ಪುಷ್ಟೀಕರಿಸಿದ ಚಿತ್ರ ಅದು. ತೆಲುಗಿನಲ್ಲಿ ‘ಅಂತಮ್ ಕಾದಿದಿ ಆರಂಭಂ’, ತಮಿಳಿನಲ್ಲಿ ‘ತ್ಯಾಗಿ’ ಹೆಸರಿನಲ್ಲಿ ಇದೇ ಚಿತ್ರ ರಿಮೇಕ್ ಆಯಿತು. ಅದನ್ನೇ ಹಿಂದಿಯಲ್ಲಿ ‘ಮೇರಿ ಆವಾಜ್ ಸುನೋ’ ಹೆಸರಿನಲ್ಲಿ ಬಾಬು ಖುದ್ದು ನಿರ್ದೇಶಿಸಿದ್ದು ಆ ಸಂದರ್ಭದಲ್ಲಿ ಸಾಧನೆಯೇ ಹೌದು. ಜಿತೇಂದ್ರ, ಹೇಮಾಮಾಲಿನಿ, ಪರ್ವೀನ್ ಬಾಬಿ ಅಲ್ಲಿ ನಟಿಸಿದ್ದರು. ಕನ್ನಡದಲ್ಲಿ ಲಕ್ಷ್ಮಿ, ಲತಾ, ಜಯಮಾಲಾ ಛಾಪು ಮೂಡಿಸಿದ್ದ ಸಿನಿಮಾ ‘ಅಂತ’ ಎನ್ನುವುದನ್ನು ಮರೆಯಲಾಗದು.

ಅರ್ಜುನ್ ಸರ್ಜಾ ಮುಖ್ಯ ಪಾತ್ರಧಾರಿಯಾಗಿದ್ದ ‘ಸಿಂಹದ ಮರಿ ಸೈನ್ಯ’ ಅವರು ಮತ್ತೆ ಮಕ್ಕಳ ಸಾಹಸ ಪ್ರಧಾನ ಚಿತ್ರದತ್ತ ಹೊರಳಿದ್ದಕ್ಕೆ ಉದಾಹರಣೆ. ‘ಗಂಡಭೇರುಂಡ’ ಸಾಹಸಮಯ ಚಿತ್ರ ಮಾಡಿದ ನಂತರ ‘ಬಂಧನ’ ಚಿತ್ರದ ಭಾವಪ್ರವಾಹವನ್ನು ಎಬ್ಬಿಸಿದರು. ವಿಷ್ಣು, ಸುಹಾಸಿನಿ, ಜೈಜಗದೀಶ್ ಅಭಿನಯದ ಈ ಚಿತ್ರದ ನಿಯಂತ್ರಿತ ಮೆಲೋಡ್ರಾಮಾ ಹಾಗೂ ಸೊಗಸಾದ ಹಾಡುಗಳು ಚಿರಸ್ಥಾಯಿಯಾಗಿವೆ. ಆ ಕಾಲಘಟ್ಟದಲ್ಲೇ ಹಿಂದಿ ಚಿತ್ರರಂಗದಲ್ಲೂ ಅವಕಾಶಗಳು ಸಿಕ್ಕವು. ರಾಜಕುಮಾರ್, ಶತ್ರುಘ್ನ ಸಿನ್ಹಾ, ಹೇಮಾಮಾಲಿನಿ ಅಭಿನಯಿಸಿದ್ದ ‘ಶರಾರ’, ಸಂಜಯ್ ದತ್, ಜಯಪ್ರದಾ ಮುಖ್ಯ ಪಾತ್ರಧಾರಿಗಳಾಗಿದ್ದ ‘ಮೇರಾ ಫೈಸಲಾ’, ಶಮ್ಮಿ ಕಪೂರ್, ಶರ್ಮಿಳಾ ಟ್ಯಾಗೋರ್ ಅವರಂತಹ ನುರಿತ ಕಲಾವಿದರು ಇದ್ದ ‘ಏಕ್ ಸೇ ಭಲೆ ದೋ’ ಬಾಲಿವುಡ್ ಅವಕಾಶದ ಕೆಲವು ನಮೂನೆಗಳು.

ಇಟಲಿಯ ‘ಫೋರ್ ಸ್ಟೆಪ್ಸ್ ಇನ್ ದಿ ಕ್ಲೌಡ್ಸ್’ ಚಿತ್ರದ ಆತ್ಮ ಇಟ್ಟುಕೊಂಡಿದ್ದ ‘ಮುಂಗಾರಿನ ಮಿಂಚು’, ಸಿ.ಎನ್. ಮುಕ್ತಾ ಅವರ ಕಾದಂಬರಿ ಆಧರಿಸಿದ ‘ದೋಣಿ ಸಾಗಲಿ’ ಅವರ ಭಾವಸಂವೇದನೆಗೆ ಕನ್ನಡಿ ಹಿಡಿದ ಚಿತ್ರಗಳು. ‘ಭೂಮಿ ತಾಯಿಯ ಚೊಚ್ಚಲ ಮಗ’ ಚಿತ್ರವು ಕೃಷಿಕರ ಬದುಕಿನ ಬಡಬಾನಲವನ್ನು ಕಾಣಿಸಿತು. ‘ಹಿಮಪಾತ’ ಚಿತ್ರದ ಸಾಹಸಕ್ಕೆ ಕೈಹಾಕಿ ಅವರು ಸೋತರೂ ಚಿತ್ರಗಳ ಕನವರಿಕೆಯನ್ನಂತೂ ಬಿಡಲಿಲ್ಲ. ಮಗ ಆದಿತ್ಯ ಅವರಿಗಾಗಿ ‘ಲವ್’, ‘ರೆಬೆಲ್’ ಎಂಬ ಸಿನಿಮಾಗಳನ್ನು ನಿರ್ದೇಶಿಸಿದರು. ಈಗಲೂ ಅವರು ಕಂಬಳದ ವಸ್ತುವಿನ ಚಿತ್ರ ಮುಗಿಸುವ ಕಾರ್ಯದಲ್ಲಿ ನಿರತರು. ದರ್ಶನ್ ಅವರನ್ನು ಹಾಕಿಕೊಂಡು ಐತಿಹಾಸಿಕ ಚಿತ್ರ ಮಾಡಲು ಬಿ.ಎಲ್. ವೇಣು ಅವರಿಂದ ಬರೆಸಿದ್ದ ಚಿತ್ರಕಥೆ ಇನ್ನೂ ಜತನವಾಗಿಯೇ ಇದೆ.

ಈ ಸಂದರ್ಭದಲ್ಲೇ ಅವರ ಚಿತ್ರಪಥವನ್ನು ನೆನಪಿಸಿಕೊಳ್ಳುವ ಕಾರ್ಯಕ್ರಮವನ್ನು ‘ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ’ ಬೆಂಗಳೂರಿನಲ್ಲಿ ಆಯೋಜಿಸಿರುವುದು ಅರ್ಥಪೂರ್ಣ. ಪ್ಯಾನ್ ಇಂಡಿಯಾ ಹೆಸರಿನಲ್ಲಿ ನಾಲ್ಕೈದು ವರ್ಷ ಒಂದೇ ಚಿತ್ರ ಉಜ್ಜುವ ಈ ಹೊತ್ತಿನ ಮಾರುಕಟ್ಟೆ ಜನರೆಲ್ಲಿ? ಪ್ರಯೋಗಕ್ಕೆ ಬೆನ್ನು ಮಾಡದೆ ವೈಫಲ್ಯವನ್ನೂ ಮೆಟ್ಟಿಲಾಗಿಸಿಕೊಂಡ ಬಾಬು ಅವರೆಲ್ಲಿ?

ಗೀತೆಗಳ ಕಡುಮೋಹಿ

ರಾಜೇಂದ್ರ ಸಿಂಗ್ ಬಾಬು ಅವರ ಸಿನಿಮಾಗಳಲ್ಲಿ ಹಾಡುಗಳನ್ನು ಕಟ್ಟಿದ ಬಗೆಯನ್ನು ಬರೆಯುತ್ತಾ ಹೋದರೆ ಒಂದು ಪ್ರಬಂಧವೇ ಆದೀತು. ‘ಮುತ್ತಿನಹಾರ’ ಚಿತ್ರದ ‘ದೇವರು ಹೊಸೆದ ಪ್ರೇಮದ ದಾರ...’ ಗೀತೆಯನ್ನು ಬಾಲಮುರಳಿಕೃಷ್ಣ ಅವರಿಂದಲೇ ಹಾಡಿಸಬೇಕು ಎಂದು ಶತಾಯಗತಾಯ ಪ್ರಯತ್ನಪಟ್ಟರು. ಆಗಿನ ಮದ್ರಾಸ್ಗೆ ಹೋಗಿ, ಬಾಲಮುರಳಿ ಅವರನ್ನು ಒಪ್ಪಿಸಲು ಸಾಕಷ್ಟು ಸಮಯ ವ್ಯಯಿಸಿದರು. ಅವರು ಸಿನಿಮಾ ಗೀತೆ ಹಾಡಲು ಸುಲಭಕ್ಕೆ ಒಪ್ಪುತ್ತಿರಲಿಲ್ಲ. ಬಾಲಮುರಳಿ ಅವರು ಆ ಗೀತೆಯನ್ನು ರೆಕಾರ್ಡ್ ಮಾಡಲು ಪ್ರಾರಂಭಿಸಿದ್ದು ರಾತ್ರಿ. ಅದನ್ನು ಇನ್ನೂ ಪಕ್ಕಾ ರೀತಿಯಲ್ಲಿ ಹಾಡಬೇಕು ಎಂದು ಹಲವು ಸುಧಾರಣೆಗಳೊಂದಿಗೆ ದೀರ್ಘಾವಧಿ ತೆಗೆದುಕೊಂಡು ಹಾಡಿದರು. ಆ ಹಾಡನ್ನು ಕೇಳಿದ ಚಿತ್ರತಂಡದ ಎಲ್ಲರ ಮೈ ಝುಮ್ಮೆಂದಿತ್ತು.

‘ಬಂಧನ’ ಸಿನಿಮಾದಲ್ಲಿ ಎಂ. ರಂಗರಾವ್ ಅವರಿಂದ ಭಾವಗೀತಾತ್ಮಕ ಶೈಲಿಯ ಹಾಡುಗಳನ್ನು ಹೊರತೆಗೆಸಿದ್ದರು. ‘ಬಣ್ಣ ಬಣ್ಣ’ ಹಾಡಿನ ಚಿತ್ರೀಕರಣದ ಸಂದರ್ಭ. ಸುಹಾಸಿನಿ ಅವರಿಗೆ ಒಂದು ಬಣ್ಣ ಹಾಕಿದ ನಂತರ ಇನ್ನೊಂದನ್ನು ಹಾಕಿಸಿಕೊಳ್ಳಲು ಮತ್ತೆ ಅಣಿಯಾಗಲು ಅನುಕೂಲ ಕಲ್ಪಿಸಿಕೊಡಲೆಂದು ಚಿತ್ರೀಕರಣ ನಡೆದ ಸ್ಥಳದಲ್ಲೇ ತಟ್ಟಿಗೆಯ ಒಂದು ತಾತ್ಕಾಲಿಕ ಸ್ನಾನದ ಗುಡಿಸಲು ನಿರ್ಮಿಸಿದ್ದು ಇನ್ನೊಂದು ಕಥೆ.

‘ಅಂತ’ ಸಿನಿಮಾಗೆ ಜಿ.ಕೆ. ವೆಂಕಟೇಶ್ ಅವರು ಸಂಯೋಜನೆ ಮಾಡಿದ್ದ ಹಾಡುಗಳು ಸಕಾಲಿಕ ಶೈಲಿಯಲ್ಲಿದ್ದವು. ‘ನಾನು ಯಾರು ಯಾವ ಊರು’ ಹಾಡಾಗಲೀ, ‘ಪ್ರೇಮವಿದೆ ಮನದೇ’ ಗೀತೆಯಾಗಲಿ ಇವತ್ತಿಗೂ ಗುನುಗುವಷ್ಟು ಲಯಬದ್ಧವಾಗಿವೆ.

Cut-off box - ಗೀತೆಗಳ ಕಡುಮೋಹಿ ರಾಜೇಂದ್ರ ಸಿಂಗ್ ಬಾಬು ಅವರ ಸಿನಿಮಾಗಳಲ್ಲಿ ಹಾಡುಗಳನ್ನು ಕಟ್ಟಿದ ಬಗೆಯನ್ನು ಬರೆಯುತ್ತಾ ಹೋದರೆ ಒಂದು ಪ್ರಬಂಧವೇ ಆದೀತು. ‘ಮುತ್ತಿನಹಾರ’ ಚಿತ್ರದ ‘ದೇವರು ಹೊಸೆದ ಪ್ರೇಮದ ದಾರ...’ ಗೀತೆಯನ್ನು ಬಾಲಮುರಳಿಕೃಷ್ಣ ಅವರಿಂದಲೇ ಹಾಡಿಸಬೇಕು ಎಂದು ಶತಾಯಗತಾಯ ಪ್ರಯತ್ನಪಟ್ಟರು. ಆಗಿನ ಮದ್ರಾಸ್ಗೆ ಹೋಗಿ ಬಾಲಮುರಳಿ ಅವರನ್ನು ಒಪ್ಪಿಸಲು ಸಾಕಷ್ಟು ಸಮಯ ವ್ಯಯಿಸಿದರು. ಅವರು ಸಿನಿಮಾ ಗೀತೆ ಹಾಡಲು ಸುಲಭಕ್ಕೆ ಒಪ್ಪುತ್ತಿರಲಿಲ್ಲ. ಬಾಲಮುರಳಿ ಅವರು ಆ ಗೀತೆಯನ್ನು ರೆಕಾರ್ಡ್ ಮಾಡಲು ಪ್ರಾರಂಭಿಸಿದ್ದು ರಾತ್ರಿ. ಅದನ್ನು ಇನ್ನೂ ಪಕ್ಕಾ ರೀತಿಯಲ್ಲಿ ಹಾಡಬೇಕು ಎಂದು ಹಲವು ಸುಧಾರಣೆಗಳೊಂದಿಗೆ ದೀರ್ಘಾವಧಿ ತೆಗೆದುಕೊಂಡು ಹಾಡಿದರು. ಆ ಹಾಡನ್ನು ಕೇಳಿದ ಚಿತ್ರತಂಡದ ಎಲ್ಲರ ಮೈ ಝುಮ್ಮೆಂದಿತ್ತು. ‘ಬಂಧನ’ ಸಿನಿಮಾದಲ್ಲಿ ಎಂ. ರಂಗರಾವ್ ಅವರಿಂದ ಭಾವಗೀತಾತ್ಮಕ ಶೈಲಿಯ ಹಾಡುಗಳನ್ನು ಹೊರತೆಗೆಸಿದ್ದರು. ‘ಬಣ್ಣ ಬಣ್ಣ’ ಹಾಡಿನ ಚಿತ್ರೀಕರಣದ ಸಂದರ್ಭ. ಸುಹಾಸಿನಿ ಅವರಿಗೆ ಒಂದು ಬಣ್ಣ ಹಾಕಿದ ನಂತರ ಇನ್ನೊಂದನ್ನು ಹಾಕಿಸಿಕೊಳ್ಳಲು ಮತ್ತೆ ಅಣಿಯಾಗಲು ಅನುಕೂಲ ಕಲ್ಪಿಸಿಕೊಡಲೆಂದು ಚಿತ್ರೀಕರಣ ನಡೆದ ಸ್ಥಳದಲ್ಲೇ ತಟ್ಟಿಗೆಯ ಒಂದು ತಾತ್ಕಾಲಿಕ ಸ್ನಾನದ ಗುಡಿಸಲು ನಿರ್ಮಿಸಿದ್ದು ಇನ್ನೊಂದು ಕಥೆ. ‘ಅಂತ’ ಸಿನಿಮಾಗೆ ಜಿ.ಕೆ. ವೆಂಕಟೇಶ್ ಅವರು ಸಂಯೋಜನೆ ಮಾಡಿದ್ದ ಹಾಡುಗಳು ಸಕಾಲಿಕ ಶೈಲಿಯಲ್ಲಿದ್ದವು. ‘ನಾನು ಯಾರು ಯಾವ ಊರು’ ಹಾಡಾಗಲೀ ‘ಪ್ರೇಮವಿದೆ ಮನದೇ’ ಗೀತೆಯಾಗಲಿ ಇವತ್ತಿಗೂ ಗುನುಗುವಷ್ಟು ಲಯಬದ್ಧವಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.