ಚೆನ್ನೈ: ರಜನಿಕಾಂತ್ ಅವರು, ಬಸ್ ಕಂಡೆಕ್ಟರ್ ವೃತ್ತಿಯಿಂದ ಅಭಿಮಾನಿಗಳ ನೆಚ್ಚಿನ ‘ತಲೈವಾ‘ ಆಗಿ ಬೆಳೆದು ಬಂದ ಇತಿಹಾಸವೇ ಅದ್ಭುತ. ಸಾಮಾನ್ಯ ವ್ಯಕ್ತಿಯೂ ಸೂಪರ್ಸ್ಟಾರ್ ಆಗಬಹುದು ಎಂಬುದಕ್ಕೆ ಅವರೇ ಮಾದರಿ.

ತಮಿಳು ಸೂಪರ್ಸ್ಟಾರ್ಗೆ ಇಂದು 75ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ. ಈ ಹಿನ್ನೆಲೆ ರಜನಿಕಾಂತ್ ಅವರ ವೃತ್ತಿಜೀವನದ ಅತ್ಯಂತ ಯಶಸ್ಸು ತಂದುಕೊಟ್ಟ ''ಪಡಿಯಪ್ಪ' ಸಿನಿಮಾ ಇಂದು ಮರು ಬಿಡುಗಡೆಗೊಂಡಿದೆ..

'ಎನ್ಡಿಟಿವಿ' ನಡೆಸಿದ ಈ ಹಿಂದಿನ ಸಂದರ್ಶನದಲ್ಲಿ ನಿರ್ದೇಶಕ ಪಂಕಜ್ ಪರಾಶರ್ ಅವರು ರಜನಿ ಕುರಿತು ಅಚ್ಚರಿಯ ಸಂಗತಿಗಳನ್ನು ಹಂಚಿಕೊಂಡಿದ್ದರು.
.ರಣವೀರ್ ಸಿಂಗ್ ನಟನೆಯ ಧುರಂಧರ್ ಸಿನಿಮಾ ಪ್ರದರ್ಶನ ತಡೆಹಿಡಿದ ಕೊಲ್ಲಿ ದೇಶಗಳು.T20 ಪಂದ್ಯದಲ್ಲಿ ಸೋಲು: ಆ ವೇಗಿಯ ಬಗ್ಗೆ ಕೊಹ್ಲಿ ಹೇಳಿದ್ದು ನಿಜ ಎಂದ ಅಭಿಮಾನಿಗಳು.
'ಚಾಲ್ಬಾಜ್' ಚಿತ್ರದಲ್ಲಿ ಬಾಲಿವುಡ್ ನಟಿ ಶ್ರೀದೇವಿ ಅವರೊಂದಿಗೆ ರಜನಿಕಾಂತ್ ಕಾಣಿಸಿಕೊಂಡಿದ್ದರು. ಈ ಸಿನಿಮಾದ ಚಿತ್ರೀಕರಣ ವೇಳೆ ರಜನಿ ಸೆಟ್ನಲ್ಲಿ ಸೂಪರ್ಸ್ಟಾರ್ ರೀತಿ ನಡೆದುಕೊಳ್ಳುತ್ತಿರಲಿಲ್ಲ. ಎಲ್ಲರೊಂದಿಗೆ ಮೃದುವಾಗಿ ಮಾತನಾಡುತ್ತಿದ್ದರು. ಶ್ರೀದೇವಿ ಸೆಟ್ಗೆ ಬಂದ ವೇಳೆ ನಮಸ್ಕಾರ 'ಶ್ರೀದೇವಾ' ಎಂದು ಜೋರಾಗಿ ಕೂಗುವ ಮೂಲಕ ಹಾಸ್ಯ ಚಟಾಕಿ ಹಾರಿಸುತ್ತಿದ್ದರು ಎಂದು ಪರಾಶರ್ ಹೇಳಿದ್ದರು.

1960ರ ದಶಕದಲ್ಲಿ ಅವರು ಸ್ವತಃ ಕಾರು ಚಲಾಯಿಸುತ್ತಿದ್ದರು. ಒಮ್ಮೆ ರಜನಿಕಾಂತ್ ನನ್ನನ್ನು ಹೋಟೆಲ್ ಬಳಿ ಡ್ರಾಪ್ ಮಾಡುವುದಾಗಿ ಕಾರಿನಲ್ಲಿ ಕರೆದುಕೊಂಡು ಹೋದರು. ಆದರೆ ಕಾರಿನಲ್ಲಿ ಎಸಿ ಕೆಲಸ ಮಾಡುತ್ತಿರಲಿಲ್ಲ. ಈ ವೇಳೆ ನಾನು ಕಿಟಕಿಯ ಗ್ಲಾಸ್ ಅನ್ನು ಒಪನ್ ಮಾಡಿದೆ. ಅವರು ಹೇಳಿದರು ಗ್ಲಾಸ್ ಒಪನ್ ಮಾಡಿದರೆ ತೊಂದರೆ ಆಗುತ್ತದೆ ಎಂದು ನಾನು ಕೇಳಲಿಲ್ಲ. ಆ ಬಳಿಕ ಸಿಗ್ನಲ್ ಬಳಿ ಇಬ್ಬರು ತಲೈವಾ ಎಂದು ಕೂಗಿದರು. ಕಾರಿನ ಸುತ್ತಲೂ ಜಮಾಯಿಸಿದರು. ನೆಚ್ಚಿನ ತಲೈವಾನನ್ನು ನೋಡಲು ಟ್ರಾಫಿಕ್ ಜಾಮ್ ಆಯಿತು. ಟ್ರಾಫಿಕ್ ನಿಯಂತ್ರಿಸಲು ಪೊಲೀಸರೇ ಬರಬೇಕಾಯಿತು. ಆಗಾ ತಿಳಿಯಿತು ರಜನಿಕಾಂತ್ ಅವರಿಗಿದ್ದ ಸ್ಟಾರ್ಡಮ್ ಎಂತಹದ್ದು ಎಂದು ಪರಾಶರ್ ಹೇಳಿದ್ದರು.
.ತಮಿಳು ಮಾತ್ರವಲ್ಲ, ಕನ್ನಡದಲ್ಲೂ ನಟಿಸಿದ್ದಾರೆ ರಜನಿಕಾಂತ್: ಇಲ್ಲಿವೆ ಪಟ್ಟಿ.ಉಡುಪಿಯ ರಾಜ್ಯ ಮಹಿಳಾ ನಿಲಯದಲ್ಲಿ ಮದುವೆ ಸಂಭ್ರಮ: ಧಾರೆ ಎರೆದುಕೊಟ್ಟ ಡಿಸಿ.
ರಜನಿಕಾಂತ್ ಅಷ್ಟೊಂದು ಸರಳ ಎಂದು ತಿಳಿದಿರಲಿಲ್ಲ. ಒಮ್ಮೆ ರಜನಿಕಾಂತ್ ನನಗೆ ಹೇಳಿದ್ದು ಹೀಗೆ.. ಅಭಿಮಾನಿಗಳು ನಮ್ಮನ್ನು (ಸ್ಟಾರ್) ಆರಾಧಿಸುತ್ತಾರೆ, ಪ್ರೀತಿಸುತ್ತಾರೆ. ಆದರೆ ಅದು ಸ್ಟಾರ್ಗಳಿಗೆ ತಲೆಗೆ ಹತ್ತಬಾರದು. ಸರಳವಾಗಿ ಇರಬೇಕು. ಹೀಗಾಗಿಯೇ ನಾನು 10–12 ದಿನ ದೇವಸ್ಥಾನಗಳಲ್ಲಿ ವಾಸಿಸುತ್ತೇನೆ. ಪರ್ವತಗಳನ್ನು ಏರುತ್ತೇನೆ ಎಂದಿದ್ದರು.

ಗೋವಾದಲ್ಲಿ ನಡೆದ 56ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ (ಐಎಫ್ಎಫ್ಐ) ಸಮಾರಂಭದಲ್ಲಿ ರಜನಿಕಾಂತ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಯಿತು.
.ದಕ್ಷಿಣದಲ್ಲಿ ವಿಧಾನಸಭೆ ಚುನಾವಣೆಗಳು: ಗೆಲುವಿನ ನಾಗಾಲೋಟ ಮುಂದುವರಿಸಲು BJP ತಯಾರಿ.ಅಧಿವೇಶನಕ್ಕೆ ಬಂದಿರೊ? ಪಾರ್ಟಿ ಮಾಡಲು ಬಂದಿರೊ? ಕೈ ನಾಯಕರ ವಿರುದ್ಧ ಬಿವೈವಿ ಕಿಡಿ.ಜುಬೀನ್ ಗರ್ಗ್ ಸಾವು: 3,500ಕ್ಕೂ ಅಧಿಕ ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ ಸಿಐಡಿ.ಹೇಗಿದ್ದಾರೆ ನೋಡಿ ಡಾ. ವಿಷ್ಣುವರ್ಧನ್ ಮೊಮ್ಮಗ ಜ್ಯೇಷ್ಠವರ್ಧನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.