ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗಾ ಸಾಧುಗಳ ಕೈಯಲ್ಲಿ ರಂಗ ಸಮುದ್ರ ಟೀಸರ್‌

Last Updated 15 ಜನವರಿ 2023, 8:16 IST
ಅಕ್ಷರ ಗಾತ್ರ

‘ರಂಗಸಮುದ್ರ’ ಸಿನಿಮಾ ಈಗ ಮತ್ತೊಂದು ವಿಶೇಷವಾದ ರೀತಿಯಲ್ಲಿ ಸಿನಿಮಾ ಪ್ರಚಾರ ಆರಂಭಿಸಿದೆ. ಕಾಶಿಗೆ ತೆರಳಿದ ಚಿತ್ರತಂಡ ಒಬ್ಬ ನಾಗಸಾಧು ಕೈಯಲ್ಲಿ ಹಾಡು ಬಿಡುಗಡೆ ಮಾಡಿಸಿದೆ. ಹಾಡನ್ನು ಬಾಲಿವುಡ್‌ ಗಾಯಕ ಕೈಲಾಶ್‌ ಖೇರ್‌ ಹಾಡಿದ್ದಾರೆ.

ರಂಗಾಯಣ ರಘು ಪ್ರಧಾನ ಪಾತ್ರದಲ್ಲಿದ್ದಾರೆ. ಹಾಡು ವರ್ಣರಂಜಿತವಾಗಿ ಮೂಡಿಬಂದಿದೆ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಹುಲಿಜಯಂತಿ ಊರಿನ ಮಾಳಿಂಗರಾಯ ಸ್ವಾಮಿ ಜಾತ್ರೆಯಲ್ಲಿ ಚಿತ್ರೀಕರಣ ನಡೆದಿದೆ. ಸುಮಾರು 15 ಲಕ್ಷ ಜನಸ್ತೋಮವನ್ನು ಚಿತ್ರೀಕರಿಸಲಾಗಿದೆ ಎನ್ನುತ್ತಾರೆ ನಿರ್ದೇಶಕ ರಾಜಕುಮಾರ್ ಅಸ್ಕಿ ಹಾಗೂ ಕೊರಿಯೋಗ್ರಫರ್ ಬಿ. ಧನಂಜಯ್.

ಇನ್ನು ರೈತ ಕುಟುಂಬದಿಂದ ಬಂದು ರಾಜಕೀಯ/ಸಾಮಾಜಿಕ ಕ್ಷೇತ್ರದಲ್ಲಿ ತನ್ನದೆ ಆದ ಹೆಸರು ಮಾಡಿರುವ ಹೊಯ್ಸಳ ಕೊಣನೂರು ಅವರು ಈ ಚಿತ್ರದ ನಿರ್ಮಾಪಕರು. ಹೊಸಬರನ್ನೆ ಒಳಗೊಂಡಿರುವ ಈ ಚಿತ್ರತಂಡಕ್ಕೆ ಬೆನ್ನೆಲುಬಾಗಿದ್ದಾರೆ.

ರಂಗಸಮುದ್ರ ಚಿತ್ರದಲ್ಲಿ 5 ಹಾಡುಗಳಿವೆ. ಕೈಲಾಶ್ ಕೇರ್, ಬಾಹುಬಲಿ ಖ್ಯಾತಿಯ ಎಂ.ಎಂ. ಕೀರವಾಣಿ, ವಿಜಯ್ ಪ್ರಕಾಶ್, ಸಂಚಿತ್ ಹೆಗ್ಡೆ ಹಾಗು ದೇಸಿ ಮೋಹನ್ ಧ್ವನಿಯಾಗಿದ್ದಾರೆ. ವಾಗೀಶ್‌ ಚನ್ನಗಿರಿ ಸಾಹಿತ್ಯವಿದೆ.

ದೇಸಿಮೋಹನ್ ಈ ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಆರ್.ಗಿರಿ ಅವರ ಛಾಯಾಗ್ರಹಣ, ಕೆ.ಜಿ.ಎಫ್ ಖ್ಯಾತಿಯ ಶ್ರೀಕಾಂತ್ ಅವರ ಸಂಕಲನ ಈ ಚಿತ್ರಕ್ಕಿದೆ.

ಮುಖ್ಯಭೂಮಿಕೆಯಲ್ಲಿ ರಂಗಾಯಣ ರಘು, ಸಂಪತ್ ರಾಜ್, ಕೆವಿಆರ್, ದಿವ್ಯಾಗೌಡ, ಮೋಹನ್ ಜುನೇಜಾ, ಗುರುರಾಜ್ ಹೊಸಕೋಟೆ, ಮಿಮಿಕ್ರಿ ಗೋಪಿ, ಉಗ್ರಂ ಮಂಜು, ಸದಾನಂದ, ಮೂಗ್ ಸುರೇಶ್, ಶಂಕರ್ ದಾಸ್ ಬಳ್ಳಾರಿ, ಮಹೇಂದ್ರ, ಸ್ಕಂದ ತೇಜಸ್ ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT