ನವದೆಹಲಿ: ಇತ್ತೀಚಿನ ಕಾರ್ಯಕ್ರಮಯೊಂದರಲ್ಲಿ ಕಾಂತಾರ ಚಿತ್ರದಲ್ಲಿ ರಿಷಬ್ ಶೆಟ್ಟಿಯ ದೈವದ ಪಾತ್ರವನ್ನು ಅಣುಕಿಸಿ, ದೈವ ಎನ್ನುವ ಬದಲು ದೆವ್ವ ಎಂದಿದ್ದರು. ಇದು ದೈವ ಆರಾಧಕರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ವಿವಾದದ ಬೆನ್ನಲ್ಲೇ ರಿಷಬ್ ಶೆಟ್ಟಿ ಮೌನ ಮುರಿದಿದ್ದಾರೆ.

ಚೆನ್ನೈನಲ್ಲಿ ನಡೆದ ಬಿಹೈಂಡ್ವುಡ್ಸ್ ಕಾರ್ಯಕ್ರಮದಲ್ಲಿ ಮಾತನಾಡಿದ ರಿಷಬ್ ಶೆಟ್ಟಿ, ದೈವ ಅನುಕರಣೆ ಸಂಬಂಧ ರಣವೀರ್ ಸಿಂಗ್ ಹೆಸರನ್ನು ಉಲ್ಲೇಖಿಸದೆಯೇ ತಿರುಗೇಟು ನೀಡಿದ್ದಾರೆ.

ಕಾಂತಾರ ಚಿತ್ರದಲ್ಲಿ ದೈವಗಳ ಬಗ್ಗೆ ಹಾಗೂ ಆಚರಣೆಗಳ ಬಗ್ಗೆ ತಿಳಿಸಲಾಗಿದೆ. ಎಲ್ಲೆಂದರಲ್ಲಿ ದೈವಗಳ ಅನುಕರಣೆ ಸರಿಯಲ್ಲ. ಇದು ಸೂಕ್ಷ್ಮವಾದ ವಿಚಾರವಾಗಿದೆ. ಧಾರ್ಮಿಕ ಆಚರಣೆಗಳ ಪಾವಿತ್ರ್ಯತೆ ಧಕ್ಕೆ ಉಂಟಾಗುತ್ತದೆ ಎಂದು ಹೇಳಿದ್ದಾರೆ.
.ಮನೆ ಬಾಡಿಗೆ ಮಸೂದೆಗೆ ವಿಧಾನಸಭೆ ಅಸ್ತು: ದಂಡ ಪ್ರಮಾಣ ಹೆಚ್ಚಳ, ಜೈಲುಶಿಕ್ಷೆ ರದ್ದು.Lokayukta Raid: ನೋಟು ಹರಿದು ‘ಕಮೋಡ್’ಗೆ ಹಾಕಿದ!.
ಎಲ್ಲೆಂದರಲ್ಲಿ ವೇದಿಕೆ ಕಾರ್ಯಕ್ರಮಗಳಲ್ಲಿ ದೈವಗಳನ್ನು ಅನುಕರಣೆ ಸರಿಯಲ್ಲ. ನಾನು ಪ್ರತಿ ಬಾರಿಯೂ ಇದನ್ನೆ ಹೇಳಿದ್ದೇನೆ. ಧಾರ್ಮಿಕ ವಿಚಾರಗಳು ಹಾಗೂ ಆಚರಣೆಗಳಿಗೆ ಧಕ್ಕೆ ತರಬೇಡಿ ಎಂದು ಮತ್ತೊಮ್ಮೆ ವಿನಂತಿಸಿಕೊಳ್ಳುತ್ತೇನೆ. ಕಾಂತಾರ ಸಿನಿಮಾದಲ್ಲಿ ದೈವಗಳ ಆಚರಣೆಗೆ ಸಂಬಂಧಿಸಿದಂತೆ ನಿಷ್ಠೆ ಹಾಗೂ ನಿಯಮಗಳಿಂದ ಪಾತ್ರವನ್ನು ನಿರ್ವಹಿಸಲಾಗಿತ್ತು. ಹಿರಿಯರ ಮಾರ್ಗದರ್ಶನದಲ್ಲಿ ಪಾತ್ರವನ್ನು ಚಿತ್ರೀಕರಿಸಲಾಗಿತ್ತು. ಎಲ್ಲ ಆಚರಣೆಗಳಿಗೆ ಅದರದ್ದೇ ಆದ ನಿಯಮಗಳು ಇರುತ್ತದೆ. ಈ ಆಚರಣೆಗಳು ನಮ್ಮೊಂದಿಗೆ ಭಾವನಾತ್ಮಕವಾದ ಸಂಪರ್ಕ ಹೊಂದಿವೆ ಎಂದು ರಿಷಬ್ ಹೇಳಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ.

56ನೇ ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ‘ಕಾಂತಾರ’ ಪ್ರೀಕ್ವೆಲ್ನಲ್ಲಿ ಬರುವ ದೈವವನ್ನು ‘ದೆವ್ವ‘ ಎಂದು ಹೇಳಿ ಅಣುಕಿಸಿದರು. ನಟ ರಣ್ವೀರ್ ಸಿಂಗ್ ಹೇಳಿರುವುದು ಚರ್ಚೆಗೆ ಗ್ರಾಸವಾಗಿತ್ತು.
.SIT | ಪಾರದರ್ಶಕ ತನಿಖೆಯ ಖಾತ್ರಿ ನೀಡಿ: ಬೆಳ್ತಂಗಡಿಯಲ್ಲಿ ಮೊಳಗಿದ ಸ್ತ್ರೀ ಧ್ವನಿ.ಸದನ | ಮಾತು-ಗಮ್ಮತ್ತು: ವಿಮಾನ ನಿಲ್ದಾಣಕ್ಕಾಗಿ ‘ಜಗಳ’.
‘ಕಾಂತಾರ’ ಸಿನಿಮಾ ಹಾಗೂ ರಿಷಬ್ ಶೆಟ್ಟಿಯನ್ನು ಹೊಗಳುವ ಭರದಲ್ಲಿ ಎಡವಟ್ಟು ಮಾಡಿಕೊಂಡಿದ್ದರು. ರಣ್ವೀರ್ ಸಿಂಗ್ ವಿರುದ್ಧ ಕನ್ನಡಿಗರು ಆಕ್ರೋಶ ಹೊರ ಹಾಕಿದ್ದರು. ಆ ಬೆನ್ನಲ್ಲೆ ರಣ್ವೀರ್ ಸಿಂಗ್ ಕ್ಷಮೆ ಕೇಳಿದ್ದಾರೆ. ಈ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದರು
.ಸಂಪಾದಕೀಯ: ಡಿಜಿಟಲ್ ಅಪರಾಧಗಳ ಹೆಚ್ಚಳ; ಸೈಬರ್ ಸುರಕ್ಷತೆಗೆ ಬೇಕು ಒತ್ತು.PHOTOS | ಮೈನಸ್ 1.8ಡಿಗ್ರಿ ಸೆಲ್ಸಿಯಸ್ ತಾಪಮಾನ: ಥರಗುಟ್ಟುತ್ತಿರುವ ಕಾಶ್ಮೀರದ ಜನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.