ಸೋಮವಾರ, ಅಕ್ಟೋಬರ್ 25, 2021
26 °C

ಸಹೋದರಿಗೆ ಯೋಗ ಹೇಳಿಕೊಟ್ಟ ಶಿಲ್ಪಾ ಶೆಟ್ಟಿ ಪುತ್ರ ವಿಯಾನ್ ರಾಜ್

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Shilpa Shetty Instagram

ಬೆಂಗಳೂರು: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪುತ್ರ ವಿಯಾನ್ ರಾಜ್ ಕುಂದ್ರಾ, ತಂಗಿ ಸಮಿಶಾಗೆ ಯೋಗ ಹೇಳಿಕೊಡುತ್ತಿರುವ ವಿಡಿಯೊ ವೈರಲ್ ಆಗಿದೆ.

ವಿಯಾನ್ ಜತೆ ಸಮಿಶಾ ಯೋಗ ಮಾಡುತ್ತಿರುವ ವಿಡಿಯೊವನ್ನು ನಟಿ ಶಿಲ್ಪಾ ಶೆಟ್ಟಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ವಿಯಾನ್ ರಾಜ್ ಈ ವಿಡಿಯೊದಲ್ಲಿ ಯೋಗ ಮಾಡುತ್ತಾ ತಂಗಿಗೂ ಯೋಗ ಮಾಡುವಂತೆ ಹೇಳುತ್ತಾರೆ. ವಿಯಾನ್ ಯೋಗ ಭಂಗಿ ನೋಡಿದ ಸಮಿಶಾ, ಅಣ್ಣನ ಜತೆ ತಾನೂ ಯೋಗ ಮಾಡಲು ಮುಂದಾಗುತ್ತಾಳೆ.

ಈ ವಿಡಿಯೊ ವೈರಲ್ ಆಗಿದ್ದು, ತಾಯಿಯಂತೆಯೇ ಮಕ್ಕಳು ಕೂಡ ಫಿಟ್ನೆಸ್ ಕುರಿತು ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ.

ರಾಜ್ ಕುಂದ್ರಾ ಪ್ರಕರಣ ಬಳಿಕ ಶಿಲ್ಪಾ ಶೆಟ್ಟಿ ಅವರ ವೈಯಕ್ತಿಕ ಬದುಕು ಇತ್ತೀಚೆಗೆ ಸಾರ್ವಜನಿಕವಾಗಿ ಹೆಚ್ಚು ಚರ್ಚೆಗೆ ಒಳಗಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು