ಎಪ್ಪತ್ತರ ದಶಕದಲ್ಲಿ ತೆರೆಕಂಡು, ಇಂದಿಗೂ ಜನಪ್ರಿಯತೆ ಉಳಿಸಿಕೊಂಡಿರುವ ‘ಶೋಲೆ’ ಸಿನಿಮಾಗೂ ಕರ್ನಾಟಕದ ರಾಮನಗರಕ್ಕೂ ನಂಟು ಬೆಸೆದಿದೆ. ವಿಶೇಷ ಎಂದರೆ ರಾಮನಗರದ ಜನರಿಗೂ ‘ಶೋಲೆ’ ಸಿನಿಮಾಗೂ ಒಂದು ಸಂಬಂಧವಿದೆ. ಶೋಲೆ ಸಿನಿಮಾದ ಹೆಸರು ಕೇಳಿದ ಅದೆಷ್ಟೋ ಜನರಿಗೆ ಮೊದಲು ನೆನಪಾಗುವುದೇ ರಾಮನಗರದ ರಾಮದೇವರ ಬೆಟ್ಟ.
.ಧರ್ಮೇಂದ್ರ ಆರೋಗ್ಯದಲ್ಲಿ ಏರುಪೇರು: ಸ್ಮಶಾನಕ್ಕೆ ಆಗಮಿಸುತ್ತಿರುವುದೇಕೆ ನಟ ನಟಿಯರು.ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ಆರೋಗ್ಯ ಸ್ಥಿತಿ ಗಂಭೀರ.
1975ರ ಆಗಸ್ಟ್ 15ರಂದು ತೆರೆಕಂಡಿದ್ದ ಶೋಲೆ ಸಿನಿಮಾವನ್ನು ರಮೇಶ್ ಸಿಪ್ಪಿ ನಿರ್ದೇಶನ ಮಾಡಿದ್ದರು. ಈ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ಮತ್ತು ಧರ್ಮೇಂದ್ರ ಅವರು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ವಿಶೇಷ ಏನೆಂದರೆ ಈ ಸಿನಿಮಾದ ಚಿತ್ರೀಕರಣವು ರಾಮನಗರದ ರಾಮದೇವರ ಬೆಟ್ಟದಲ್ಲಿ ನಡೆದಿದ್ದು. ಶೋಲೆ ಚಿತ್ರಕಥೆ ಪಕ್ಕಾ ಆದಮೇಲೆ ನಿರ್ದೇಶಕ ರಮೇಶ್ ಸಿಪ್ಪಿ ಅವರು ರಾಮನಗರದ ಬೆಟ್ಟಸಾಲನ್ನು ಚಿತ್ರೀಕರಣಕ್ಕೆ ಆಯ್ಕೆ ಮಾಡಿಕೊಂಡರು. ಸಿನಿಮಾದಲ್ಲಿನ ರಾಮಗಢ ಅಸಲಿಗೆ ಇದ್ದುದು ರಾಮದೇವರ ಬೆಟ್ಟದಲ್ಲಿ.

ಪ್ರವಾಸಿ ತಾಣವಾದ ರಾಮನಗರವನ್ನು ಕರ್ನಾಟಕ ಪ್ರವಾಸೋದ್ಯಮವು ಒಂದು ಪ್ರಮುಖ ತಾಣವನ್ನಾಗಿ ಅಭಿವೃದ್ಧಿಪಡಿಸಲು 2017ರಲ್ಲಿ ರಾಜ್ಯ ಸರ್ಕಾರ ಯೋಜನೆಯೊಂದನ್ನು ರೂಪಿಸಿತ್ತು. ಅದರಲ್ಲಿ ‘ಶೋಲೆ’ ಚಿತ್ರದ ದೃಶ್ಯಗಳನ್ನು ಮರುಸೃಷ್ಟಿಸಲು 3ಡಿ ತಂತ್ರಜ್ಞಾನದೊಂದಿಗೆ ‘ಶೋಲೆ-ದ 3-ಡಿ ವರ್ಚುವಲ್ ರಿಯಾಲಿಟಿ ವಿಲೇಜ್’ ಅನ್ನು ನಿರ್ಮಿಸಲು ಕರ್ನಾಟಕ ಸರ್ಕಾರ ಯೋಜಿಸಿತ್ತು. ಇದರ ಜೊತೆಗೆ, ರಾಮನಗರವು ಗಬ್ಬರ್ ಸಿಂಗ್ ಗುಹೆ, ಬಸಂತಿಯ ಗಾಡಿ, ಠಾಕೂರ್ ಕೈಕೋಳ ಹಾಕಿದ ಸ್ಥಳ ಮತ್ತು ಜೈ ಆತ್ಮಹತ್ಯೆಗೆ ಬೆದರಿಕೆ ಹಾಕಿದ್ದ ನೀರಿನ ಟ್ಯಾಂಕ್ ಸೇರಿದಂತೆ ಹಲವಾರು ಪ್ರವಾಸಿ ಆಕರ್ಷಣೆಯ ತಾಣವನ್ನಾಗಿ ಮಾಡಲು ಯೋಚಿಸಿತ್ತು.

ಇನ್ನು, ಈ ರಾಮದೇವರ ಬೆಟ್ಟವು ಶೋಲೆ ಚಲನಚಿತ್ರದ ಚಿತ್ರೀಕರಣಕ್ಕೆ ಬಳಸಲಾದ ಪ್ರಮುಖ ಸ್ಥಳವಾಗಿದೆ. ಇದು ಪಟ್ಟಣದ ಸಮೀಪದಲ್ಲಿದೆ ಮತ್ತು 400 ಮೆಟ್ಟಿಲುಗಳನ್ನು ಹತ್ತಿ ತಲುಪಬಹುದು. ಶೋಲೆ-ದ 3-ಡಿ ವರ್ಚುವಲ್ ರಿಯಾಲಿಟಿ ವಿಲೇಜ್ ಅನ್ನು ₹7.5 ಕೋಟಿ ವೆಚ್ಚದಲ್ಲಿ 42,000 ಚದರ ಅಡಿ ವಿಸ್ತಾರದಲ್ಲಿ 3ಡಿ ತಂತ್ರಜ್ಞಾನದೊಂದಿಗೆ ನಿರ್ಮಾಣ ಮಾಡುವ ಉದ್ದೇಶ ಕರ್ನಾಟಕ ಸರ್ಕಾರದ್ದಾಗಿತ್ತು. ‘ಶೋಲೆ’ಯ ಕೆಲವು ಭಾಗಗಳನ್ನು ಮರುಸೃಷ್ಟಿಸಲು ಮತ್ತು ಪ್ರವಾಸಿಗರಿಗೆ ಚಿತ್ರದ ಅನುಭವವನ್ನು ನೀಡಲು ಸರಕಾರ ಮುಂದಾಗಿತ್ತು.

ಗಬ್ಬರ್ ಸಿಂಗ್ ಗುಹೆ:

ಶೋಲೆ ಸಿನಿಮಾದಲ್ಲಿ ಗಬ್ಬರ್ ಸಿಂಗ್ ಬಳಸಿದ್ದ ಗುಹೆಯನ್ನು ಮರುನಿರ್ಮಾಣ ಮಾಡಲು ಯೋಚಿಸಿತ್ತು. ಈ ಸ್ಥಳ ಸಂರಕ್ಷಿತ ರಣಹದ್ದುಗಳ ಅಭಯಾರಣ್ಯದ ಹೊರಗೆ ಇದೆ.

ಬಸಂತಿಯ ಗಾಡಿ:

‘ಶೋಲೆ‘ ಸಿನಿಮಾದಲ್ಲಿ ಬಸಂತಿ (ನಟಿ ಹೇಮಾ ಮಾಲಿನಿ) ಬಳಸಿದ್ದ ಗಾಡಿಯ ಪ್ರದರ್ಶನಕ್ಕೆ ಇರಿಸಲು ಯೋಚಿಸಿತ್ತು.

ಠಾಕೂರ್ ಕೈಕೋಳ ಹಾಕಿದ ಗುಹೆ:

ಶೋಲೆ ಚಲನಚಿತ್ರದಲ್ಲಿ ಠಾಕೂರ್ ಅವರ ಕೈಕೋಳಗಳನ್ನು ಈ ಗುಹೆಯಲ್ಲಿ ತೋರಿಸಬೇಕೆಂದು ಯೋಚಿಸಿತ್ತು.

ಜೈ ಆತ್ಮಹತ್ಯೆಗೆ ಬೆದರಿಕೆ ಹಾಕಿದ ನೀರಿನ ಟ್ಯಾಂಕ್:

ಈ ನೀರಿನ ಟ್ಯಾಂಕ್ ಅನ್ನು ಕೂಡ ಪ್ರವಾಸಿ ಆಕರ್ಷಣೆಯಾಗಿ ಅಭಿವೃದ್ಧಿಪಡಿಸಲು ಯೋಚಿಸಿತ್ತು.

ಇನ್ನು, ಶೋಲೆ ಸಿನಿಮಾದಲ್ಲಿ ಬಸಂತಿ ಪಾತ್ರವು ಎಲ್ಲರ ಅಚ್ಚುಮೆಚ್ಚು. ಬಸಂತಿ ಪಾತ್ರದಲ್ಲಿ ನಟಿ ಹೇಮಾಮಾಲಿನಿ ಅಭಿನಯಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಈ ಸಿನಿಮಾದ ಸಾಹಸ ದೃಶ್ಯಗಳ ಚಿತ್ರೀಕರಣವನ್ನು ಗುಡ್ಡಗಾಡು ಇರುವ ಭೂಪ್ರದೇಶದಲ್ಲೇ ಮಾಡಬೇಕು ಎಂದು ರಮೇಶ್ ಸಿಪ್ಪಿ ಮೊದಲು ನಿರ್ಧರಿಸಿದರು. ಕಲಾ ನಿರ್ದೇಶಕ ರಾಮ್ ಯೆಡೇಕರ್ ಅವರೂ ಈ ಪ್ರದೇಶ ಗಬ್ಬರ್ ಸಿಂಗ್ ಅಡಗುದಾಣಕ್ಕೆ ಹೇಳಿ ಮಾಡಿಸಿದ್ದು ಎಂದು ಒಪ್ಪಿಕೊಂಡಿದ್ದರು. ಆ ಕಾಲಘಟ್ಟದಲ್ಲಿ ಪೂರ್ಣಪ್ರಮಾಣದಲ್ಲಿ ಹೊರಾಂಗಣ ಚಿತ್ರೀಕರಣ ಮಾಡುವುದು ದೊಡ್ಡ ರಿಸ್ಕ್ ಆಗಿತ್ತು. ಹವಾಮಾನ ವೈಪರೀತ್ಯಗಳನ್ನು ಎದುರಿಸಿ, ಸ್ಟುಡಿಯೊ ಸೆಟ್ಅಪ್ನಿಂದ ಹೊರಗೆ ಒಂದು ಇಡೀ ಸಿನಿಮಾ ಚಿತ್ರೀಕರಿಸುವುದು ಸುಲಭದ ಮಾತಾಗಿರಲಿಲ್ಲ. ಛಾಯಾಚಿತ್ರಗ್ರಹಣ ಮಾಡುವವರಿಗೂ ಅದು ತಲೆಬಿಸಿಯ ವ್ಯವಹಾರವೇ ಆಗಿತ್ತು. ಹೀಗಾಗಿ ಎರಡು ವರ್ಷ ರಾಮನಗರದಲ್ಲೇ ಇಡೀ ಚಿತ್ರತಂಡ ಬೀಡುಬಿಟ್ಟಿತು. ಸಿನಿಮಾ ಚಿತ್ರೀಕರಣದಲ್ಲಿ ತೊಡಗುವವರು ತಂಗಲೆಂದೇ ‘ಸಿಪ್ಪಿ ಟೌನ್ಶಿಪ್’ ಕೂಡ ತಯಾರಿಸಿ ಬಿಟ್ಟಿದ್ದರು. ಸ್ಥಳೀಯರ ಜೊತೆಗೆ ಇಡೀ ಚಿತ್ರತಂಡ ಬಾಂಧವ್ಯ ಬೆಳಿಸಿತ್ತು.

ಆದರೆ ಶೋಲೆ ಸಿನಿಮಾ ಚಿತ್ರೀಕರಿಸಿದ ಎಲ್ಲಾ ಸ್ಥಳಗಳು ಸಹ ಸಂರಕ್ಷಿತ ವಲಯಗಳಿಗೆ ಸೇರಿದ್ದರಿಂದ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕರ್ನಾಟಕ ಸರ್ಕಾರ ಈ ಯೋಜನೆಗೆ ಯಾವುದೇ ಅನುಮತಿ ನೀಡಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.