ಗುರುವಾರ , ಜನವರಿ 21, 2021
29 °C

ಟಾಲಿವುಡ್‌ಗೆ ಕಾಲಿರಿಸಿದ್ದಾರೆ ಚಂದನವನದ ಬೆಡಗಿ ಶ್ರೀಲೀಲಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಕಿಸ್‌’ ಸಿನಿಮಾದ ಮೂಲಕ ಚಂದನವನಕ್ಕೆ ಕಾಲಿಟ್ಟ ಬೆಡಗಿ ಶ್ರೀಲೀಲಾ ಟಾಲಿವುಡ್‌ಗೆ ಹಾರಿದ್ದಾರೆ. ‘ಪೆಳ್ಳಿ ಸಂದದಿ’ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದು ಇದು ಅವರ ಚೊಚ್ಚಲ ತೆಲುಗು ಸಿನಿಮಾವಾಗಿದೆ. ಇತ್ತೀಚೆಗೆ ಚಿತ್ರತಂಡವನ್ನು ಭೇಟಿ ಮಾಡಲು ಹೈದರಾಬಾದ್‌ಗೆ ತೆರಳಿದ್ದರು ಈ ಬೆಡಗಿ.

ತೆಲುಗಿನ ಖ್ಯಾತ ನಟ ಶ್ರೀಕಾಂತ್ ಅವರ ಪುತ್ರ ರೋಶನ್ ಮೆಕಾ ಈ ಚಿತ್ರದ ಮೂಲಕ ನಾಯಕನಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಆಸಕ್ತಿದಾಯಕ ವಿಷಯ ಎಂದರೆ 25 ವರ್ಷಗಳ ಹಿಂದೆ ಶ್ರೀಕಾಂತ್‌ ಪೆಳ್ಳಿ ಸಂದದಿ ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾವನ್ನು ರಾಘವೇಂದ್ರ ರಾಮ್ ನಿರ್ದೇಶನ ಮಾಡಿದ್ದರು. ಇದು ಆ ಸಿನಿಮಾದ ಸೀಕ್ವೆಲ್‌ ಎನ್ನುತ್ತಿವೆ ಮೂಲಗಳು. ಆದರೆ ಶೀರ್ಷಿಕೆ ಮಾತ್ರ ಒಂದೇ ಸಿನಿಮಾದ ಕಥಾಸಾರಂಶ ಬೇರೆಯದ್ದೇ ಇದೆ ಎನ್ನುತ್ತಾರೆ ಶ್ರೀಲೀಲಾ.

ಈಗೀನ ಪೆಳ್ಳಿ ಸಂದದಿ ಸಿನಿಮಾವನ್ನು ಗೌರಿ ನಿರ್ದೇಶನ ಮಾಡುತ್ತಿದ್ದು, ರಾಘವೇಂದ್ರ ರಾವ್ ಸಹಕಾರ ನೀಡಲಿದ್ದಾರೆ.

‘ನಾನು ಈ ತಿಂಗಳ ಅಂತ್ಯಕ್ಕೆ ಚಿತ್ರತಂಡ ಸೇರಿಕೊಳ್ಳಲಿದ್ದೇನೆ. ಸದ್ಯ ಕನ್ನಡದಲ್ಲಿ ಧನ್ವೀರ್‌ ಜೊತೆ ನಟಿಸುತ್ತಿರುವ ಬೈಟುಲವ್‌ ಚಿತ್ರದ ಶೂಟಿಂಗ್‌ನಲ್ಲಿ ತೊಡಗಿದ್ದೇನೆ. ‍‍ಪೆಳ್ಳಿ ಸಂದದಿ ಸಿನಿಮಾವನ್ನು ಆದಷ್ಟು ಬೇಗ ಮುಗಿಸುವ ಯೋಜನೆ ಹಾಕಿಕೊಂಡಿದೆ ಚಿತ್ರತಂಡ. ನಾನು ಧ್ರುವ ಸರ್ಜಾ ಜೊತೆ ದುಬಾರಿ ಸಿನಿಮಾದ ಶೂಟಿಂಗ್‌ನಲ್ಲಿ ಭಾಗವಹಿಸುವ ಮೊದಲು ಈ ಚಿತ್ರದ ಶೂಟಿಂಗ್ ಮುಗಿಸಬೇಕಿದೆ. ಪೆಳ್ಳಿ ಸಂದದಿ ಚಿತ್ರದ ಪಾತ್ರದ ಬಗ್ಗೆ ನಾನು ಹೆಚ್ಚಿಗೆ ಏನು ಹೇಳಲೂ ಸಾಧ್ಯವಿಲ್ಲ. ಆದರೆ ಈ ಪಾತ್ರ ತುಂಬಾ ಚೆನ್ನಾಗಿದೆ, ಆ ಕಾರಣಕ್ಕೆ ನಟಿಸಲು ಒಪ್ಪಿಕೊಂಡೆ. ಈ ಚಿತ್ರಕ್ಕೆ ಎಂಎಂ ಕೀರವಾಣಿ ಸಂಗೀತ ನಿರ್ದೇಶನವಿದೆ’ ಎಂದು ಚಿತ್ರದ ಬಗ್ಗೆ ವಿವರಣೆ ನೀಡುತ್ತಾರೆ ಶ್ರೀಲೀಲಾ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು