ಮಂಗಳವಾರ, ಮಾರ್ಚ್ 28, 2023
33 °C

ತಮಿಳು ನಟ ಅಜಿತ್ ಆಸ್ಪತ್ರೆ ಭೇಟಿ ವಿಡಿಯೊ ವೈರಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ: ತಮಿಳು ನಟ ಅಜಿತ್,‌ ಪತ್ನಿ ಶಾಲಿನಿಯೊಂದಿಗೆ ಆಸ್ಪತ್ರೆಗೆ ಭೇಟಿ ನೀಡಿರುವುದು ಕಾಲಿವುಡ್‌ ಅಂಗಳದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಮಾಸ್ಕ್‌ ಧರಿಸಿ ಇಬ್ಬರು ಆಸ್ಪತ್ರೆಗೆ ಬಂದಿದ್ದಾರೆ. ಅಜಿತ್ ಫ್ಯಾನ್‌ ಅಸೋಸಿಯೆಶನ್‌ ನವರು ಅಜಿತ್‌ ಮತ್ತು ಶಾಲಿನಿ ಆರೋಗ್ಯವಾಗಿದ್ದಾರೆ ಎಂದು ಸ್ಪಷ್ಟಪಡಿಸಿದ್ದು ಅಭಿಮಾನಿಗಳಲ್ಲಿ ಮೂಡಿದ್ದ ಆತಂಕ ದೂರವಾಗಿದೆ.

ಇಲ್ಲಿನ ಅಪೋಲ್‌ ಆಸ್ಪತ್ರೆಗೆ  ಅಜಿತ್ ಭೇಟಿ ನೀಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಈ ಭೇಟಿ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಚರ್ಚೆಗಳಿಗೆ ಕಾರಣವಾಗಿದೆ.

ಅಜಿತ್ ಮತ್ತು ಶಾಲಿನಿ ಜನರಲ್‌ ಚಕ್‌ಅಪ್‌ಗೆ ಬಂದಿದ್ದರು ಎಂದು ಅವರ ಆಪ್ತವಲಯದ ಮೂಲಗಳು ಖಚಿಪಡಿಸಿವೆ. 

ಇನ್ನು ಕೆಲವರು ಅಜಿತ್‌ ತಂದೆ ಅಪೋಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿದ್ದು ಅವರನ್ನು ನೋಡಲು ಬಂದಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಆದರೆ ಈ ಮಾಹಿತಿ ಇನ್ನು ಅಧಿಕೃತವಾಗಿಲ್ಲ.

ಮೇ 1ರಂದು ಅಜಿತ್ 49ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು