ಬುಧವಾರ, ಸೆಪ್ಟೆಂಬರ್ 29, 2021
21 °C

ಮಣಿ ಚಿತ್ರದಲ್ಲಿ ಸೌಂದರ್ಯ ಗಿಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೆಗಾಸ್ಟಾರ್‌ ಚಿರಂಜೀವಿ ನಟನೆಯ ಮುಂದಿನ ಚಿತ್ರದಲ್ಲಿ ನಾಯಕಿಯಾಗಿ ತ್ರಿಷಾ ನಟಿಸುತ್ತಿದ್ದಾರೆ. ಟಾಲಿವುಡ್‌ನ ಮತ್ತೊಬ್ಬ ಪ್ರಸಿದ್ಧ ನಿರ್ದೇಶಕ ಮಣಿರತ್ನಂ ಅವರ ಬಹುನಿರೀಕ್ಷಿತ ಚಿತ್ರ, ಈಗಾಗಲೇ ಭಾರಿ ಕುತೂಹಲ ಮೂಡಿಸಿರುವ ‘ಪೊನ್ನಿಯಿನ್‌ ಸೆಲ್ವನ್‌’ನಲ್ಲೂ ತ್ರಿಷಾ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಎಂಬ ವದಂತಿ ಹಬ್ಬಿದೆ.

ವಿಜಯ್‌ ಸೇತುಪತಿ ನಟನೆಯ ‘96’ ಚಿತ್ರದ ಅದ್ಭುತ ಯಶಸ್ಸಿನ ನಂತರ ಒಂದರ ಹಿಂದೆ ಒಂದರಂತೆ ಸಿನಿಮಾ ಅವಕಾಶಗಳು ತ್ರಿಷಾರನ್ನು ಹುಡುಕಿಕೊಂಡು ಬರುತ್ತಿವೆ. ಆದರೆ ಬಲುಜಾಣತನದಿಂದ ತ್ರಿಷಾ ಅವಕಾಶಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಕೊರಟಾಳ ಶಿವ ನಿರ್ದೇಶನದ, ಚಿರಂಜೀವಿ ನಟನೆಯ ಚಿತ್ರಕ್ಕೆ ತ್ರಿಷಾ ಅವರನ್ನು ನಾಯಕಿಯಾಗಿ ನಟಿಸಲು ಕೇಳಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅದೇ ಸಮಯದಲ್ಲಿ ಮಣಿರತ್ನಂ ಅವರ ಮುಂದಿನ ಬಿಗ್‌ ಬಜೆಟ್‌ ಚಿತ್ರ ‘ಪೊನ್ನಿಯಿನ್‌ ಸೆಲ್ವನ್‌’ನಲ್ಲಿ ನಟಿಸುವಂತೆಯೂ ತ್ರಿಷಾ ಅವರಿಗೆ ಅವಕಾಶ ಬಂದಿದೆ.

ಚಿರಂಜೀವಿ ಹಾಗೂ ಮಣಿರತ್ನಂ ನಿರ್ದೇಶನದ ಎರಡೂ ಚಿತ್ರಗಳು ಪ್ರಮುಖವಾದುದ್ದಾಗಿದೆ. ಎರಡೂ ಚಿತ್ರಗಳು ಒಂದೇ ಸಮಯದಲ್ಲಿ ಚಿತ್ರೀಕರಣ ನಡೆಯುವ ಸಾಧ್ಯತೆಯಿರುವುದರಿಂದ ತೊಂದರೆಯಾಗಬಹುದೆಂದು ತ್ರಿಷಾ ಅವರಿಗೆ ನಿರ್ಧಾರ ತೆಗೆದುಕೊಳ್ಳಲು ಕೂಡ ಕಷ್ಟವಾಗಿದೆ. ತ್ರಿಷಾ ‘ಪೊನ್ನಿಯಿನ್‌ ಸೆಲ್ವನ್‌’ ಚಿತ್ರದಲ್ಲಿ ನಟಿಸಲಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ.

ಮಲಯಾಳ ಸಿನಿಮಾದಲ್ಲಿ ಸದ್ಯ ತ್ರಿಷಾ ತೊಡಗಿಸಿಕೊಂಡಿದ್ದಾರೆ. ಜೀತು ಜೋಸೆಫ್‌ ನಿರ್ದೇಶನದ ಈ ಚಿತ್ರದ ನಾಯಕ ಮೋಹನ್‌ಲಾಲ್‌.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು