ಶನಿವಾರ, ಜೂನ್ 25, 2022
26 °C

ಅರಣ್ಯಾಧಿಕಾರಿಯಾದ ವಿದ್ಯಾ ಬಾಲನ್: ಅಮೆಜಾನ್ ಪ್ರೈಮ್‌ನಲ್ಲಿ ಶೇರ್‌ನೀ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

PV Photo

ಬೆಂಗಳೂರು: ಬಾಲಿವುಡ್‌ನಲ್ಲಿ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದಿರುವ ನಟಿ ವಿದ್ಯಾ ಬಾಲನ್ ಈ ಬಾರಿ ‘ಶೇರ್‌ನೀ’ ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರ ಮನರಂಜಿಸಲು ಬರುತ್ತಿದ್ದಾರೆ.

ವಿದ್ಯಾ ಬಾಲನ್ ಪ್ರಧಾನ ಪಾತ್ರದಲ್ಲಿ ನಟಿಸಿರುವ ಶೇರ್‌ನೀ ಚಿತ್ರ ಜೂನ್ 18ರಂದು ಅಮೆಜಾನ್ ಪ್ರೈಮ್ ವಿಡಿಯೊ ಮೂಲಕ ಬಿಡುಗಡೆಯಾಗುತ್ತಿದೆ.

ಚಿತ್ರವನ್ನು ಟಿ ಸಿರೀಸ್ ಮತ್ತು ಅಬುದಾನ್ಶಿಯ ಎಂಟರ್‌ಟೈನ್‌ಮೆಂಟ್ ನಿರ್ಮಿಸಿದ್ದು, ಅಮಿತ್ ಮಸೂರ್ಕರ್ ನಿರ್ದೇಶನವಿದೆ.

ಶೇರ್‌ನೀ ಚಿತ್ರದ ಟ್ರೇಲರ್ ಈಗಾಗಲೇ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದ್ದು, ವೀಕ್ಷಕರ ಮೆಚ್ಚುಗೆ ಗಳಿಸಿದೆ. ಮಾನವ ಮತ್ತು ವನ್ಯಜೀವಿ ಸಂಘರ್ಷದ ಕಥೆಯನ್ನು ಚಿತ್ರ ಒಳಗೊಂಡಿದೆ.

ಶೇರ್‌ನೀ ಚಿತ್ರದಲ್ಲಿ ಅರಣ್ಯಾಧಿಕಾರಿಯ ಪಾತ್ರದ ಬಗ್ಗೆ ಹೇಳಿಕೆ ನೀಡಿರುವ ವಿದ್ಯಾ ಬಾಲನ್, ಇದೊಂದು ವಿಭಿನ್ನ ಮತ್ತು ಸವಾಲಿನ ಪಾತ್ರವಾಗಿದ್ದು, ವನ್ಯಜೀವಿಗಳು ಮತ್ತು ಅರಣ್ಯ, ಇಂದಿನ ಸ್ಥಿತಿಗತಿಯ ಕುರಿತು ಕೂಡ ಬೆಳಕು ಚೆಲ್ಲಲಿದೆ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು