ಅನಿರೀಕ್ಷಿತ ಯಶಸ್ಸು, ಭಿನ್ನ ಮಾದರಿ ಕಥೆಗಳು, ಸಾಮಾಜಿಕ ವಿಶ್ಲೇಷಣೆಯೊಂದಿಗೆ, ಈ ವರ್ಷವು ಭಾರತೀಯ ಚಿತ್ರರಂಗದ ಕಥನವನ್ನು ಮರುರೂಪಿಸಿದೆ. ದೊಡ್ಡ ಬಜೆಟ್ ಸಿನಿಮಾಗಳ ಆಕರ್ಷಣೆಯ ಜೊತೆಗೆ ಜಾಣ್ಮೆಯಿಂದ ನಿರೂಪಿಸಿದ ನವಿರು ಕಥೆಗಳು ನಿರೀಕ್ಷೆ ಮೀರಿ ಯಶಸ್ಸಿನ ಗಡಿ ದಾಟಿದೆ. 2025ರಲ್ಲಿ ಭಾರತೀಯ ಚಿತ್ರರಂಗದಲ್ಲಿ ಆಗಿರುವ ಮಹತ್ತರ ಬದಲಾವಣೆಗಳ ಒಂದು ನೋಟ ಇಲ್ಲಿದೆ...

ಕಾಂತಾರ: ಪ್ರಾದೇಶಿಕ ಕಥೆಗಳ ಯಶಸ್ಸು

ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ, ಹೊಂಬಾಳೆ ಫಿಲಂಸ್ ನಿರ್ಮಾಣದ 'ಕಾಂತಾರ- ಅಧ್ಯಾಯ 1' ಪ್ರೀಕ್ವೆಲ್ ನ ಅದ್ಬುತ ಯಶಸ್ಸು, ಪ್ರಾದೇಶಿಕ ಕಥೆಗಳ ಪ್ರಾಪಂಚಿಕ ಸ್ವೀಕೃತಿ ಮನೋಭಾವವನ್ನು ಮರುಸಾಬೀತುಪಡಿಸಿದೆ. ಮತ್ತೊಮ್ಮೆ ಗಲ್ಲಾಪೆಟ್ಟಿಗೆ ಕೊಳ್ಳೆಹೊಡೆದ ಕಾಂತಾರ ಸಿನಿಮಾ, ಜಾನಪದದ ಎಳೆ, ಪ್ರಕೃತಿ ಹಾಗೂ ಭೂತಕೋಲ ಸಂಸ್ಕೃತಿಯ ಮೂಲ ಮುಂತಾದವುಗಳನ್ನು ಜಾಣ್ಮೆಯಿಂದ ಹೆಣೆಯಲಾದ ಸಿನಿಮಾ. ಜೊತೆಗೆ ಪ್ರೇಕ್ಷಕರ ಭಾವನೆಗಳಿಗೆ ತಾಕುವ ಅಂಶಗಳು, ಬೆರಗುಗೊಳಿಸುವ ಆ್ಯಕ್ಷನ್ ದೃಶ್ಯಗಳನ್ನೂ ಚಿತ್ರ ಹೊಂದಿದೆ. ಅಂದಾಜು ₹125 ಕೋಟಿ ವೆಚ್ಚದಲ್ಲಿ ತಯಾರಾದ ಈ ಸಿನಿಮಾ ₹850-900 ಕ್ಕೂ ಹೆಚ್ಚು ಕೋಟಿ ಬಾಚಿಕೊಂಡಿದೆ.

ಲೋಕ: ಅಧ್ಯಾಯ ಆರಂಭಿಸಿದ 'ಮಹಿಳಾ ಸೂಪರ್ ಹೀರೋ'

'ಲೋಕ ಅಧ್ಯಾಯ 1: ಚಂದ್ರ' ಚಿತ್ರದೊಂದಿಗೆ ಭಾರತೀಯ ಚಿತ್ರರಂಗಕ್ಕೆ ತನ್ನ ಮೊದಲ ಆಧುನಿಕ, ಮಹಿಳಾ ಸೂಪರ್ಹೀರೋ ದಕ್ಕಿದ್ದಾರೆ. ಡೊಮಿನಿಕ್ ಅರುಣ್ ಬರೆದು ನಿರ್ದೇಶಿಸಿದ ಮತ್ತು ದುಲ್ಕರ್ ಸಲ್ಮಾನ್ ಅವರ ವೇಫೇರರ್ ಫಿಲಂಸ್ ನಿರ್ಮಾಣದ ಮಲಯಾಳಂ ಆ್ಯಕ್ಷನ್ ಚಿತ್ರವಾದ 'ಲೋಕಾ'ದಲ್ಲಿ ಕಲ್ಯಾಣಿ ಪ್ರಿಯದರ್ಶನ್ ನಾಯಕಿಯಾಗಿ ನಟಿಸಿದ್ದಾರೆ. ಸ್ಪೆಷಲ್ ಎಫೆಕ್ಟ್ಸ್ ಜೊತೆಗೆ ಅದ್ಭುತ ಗುಣಮಟ್ಟದ ತಾಂತ್ರಿಕ ಕಾರ್ಯಗಳ ಮೂಲಕ ₹30 ಕೋಟಿ ಬಜೆಟ್ ನ ಈ ಸಿನಿಮಾ ಗಳಿಸಿದ್ದು ಬರೋಬ್ಬರಿ ₹300 ಕೋಟಿ. ಈ ಮೂಲಕ ಮಲಯಾಳಂನಲ್ಲಿ ಸಾರ್ವಕಾಲಿಕ ಅತಿಹೆಚ್ಚು ಗಳಿಕೆ ಕಂಡ ಸಿನಿಮಾ ಎಂಬ 'ಎಲ್2- ಎಂಪುರಾನ್' ಸಿನಿಮಾದ ದಾಖಲೆಯನ್ನು ಮುರಿದಿದೆ. ಜೊತೆಗೆ ಈ ವರ್ಷ ಅತಿಹೆಚ್ಚು ಗಳಿಕೆ ಕಂಡ ಸಿನಿಮಾಗಳ ಪಟ್ಟಿ ಸೇರಿದೆ.

ಕೂಲಿ: ಕುಗ್ಗದ ತಾರಾ ನಟರ ದೌಲತ್ತು

ಬಾಕ್ಸ್ ಆಫೀಸ್ ಯಶಸ್ಸು ಊಹೆಗೆ ದಕ್ಕುವುದಿಲ್ಲ. ಆದರೂ ಪರದೆಯ ಮೇಲೆ ಸೂಪರ್ ಸ್ಟಾರ್ ರಜನಿಕಾಂತ್ ಕಾಣಿಸಿಕೊಂಡರೆ ಶಿಳ್ಳೆ ಚಪ್ಪಾಳೆ ಖಚಿತ. ಲೋಕೇಶ್ ಕನಕರಾಜ್ ನಿರ್ದೇಶನದ 'ಕೂಲಿ' ಆ್ಯಕ್ಷನ್ ಚಿತ್ರ, ರಜನಿಕಾಂತ್ ಸೇರಿದಂತೆ, ನಾಗಾರ್ಜುನ ಅಕ್ಕಿನೇನಿ, ಸೌಬಿನ್ ಶಾಹಿರ್, ಉಪೇಂದ್ರ, ಶ್ರುತಿ ಹಾಸನ್, ಸತ್ಯರಾಜ್, ರಚಿತಾ ರಾಮ್, ಅಮಿರ್ ಖಾನ್ ಹಾಗೂ ಪೂಜಾ ಹೆಗ್ಡೆ ಅವರಂತಹ ಸ್ಟಾರ್ಗಳನ್ನು ಒಳಗೊಂಡಿದೆ. ಸೇಡಿನ ಕಥೆ ಹೊಂದಿರುವ ಈ ಸಿನಿಮಾ ₹400 ಕೋಟಿ ವೆಚ್ಚದಲ್ಲಿ ಸನ್ ಪಿಕ್ಚರ್ಸ್ ನಿಂದ ನಿರ್ಮಾಣವಾಗಿದ್ದು, ₹514-520 ಕೋಟಿ ಗಳಿಸಿದೆ. ಆದಾಗ್ಯೂ 74 ವರ್ಷ ವಯಸ್ಸಿನ ಸೂಪರ್ ಸ್ಟಾರ್ ನಟಿಸುವ ಪ್ರತಿ ಸಿನಿಮಾ ಕೂಡ ಅಲೆಯೆಬ್ಬಿಸುವುದಲ್ಲದೆ ಉತ್ತಮ ಆರಂಭಿಕ ಗಳಿಕೆಯನ್ನೂ ನೀಡುತ್ತದೆ ಎನ್ನುವುದು ಅವರ ಸ್ಟಾರ್ ಪವರ್ ಅನ್ನು ಬಿಂಬಿಸುತ್ತದೆ.

ಸೈಯಾರ: ಹಳಿಗೆ ಮರಳಿದ ಪ್ರೇಮಕಥೆ

ಹಲವು ಯುಗಗಳನ್ನು ವ್ಯಾಖ್ಯಾನಿಸುವ, ಸಂಗೀತ ಕೇಂದ್ರಿತವಾದ ಪ್ರೇಮಕಥೆಗಳ ಪರಂಪರೆಯನ್ನು ಮೆಲುಕು ಹಾಕುವಂತೆ ಈ ವರ್ಷ ಬಿಡುಗಡೆಯಾದ ಹಿಂದಿಯ 'ಸೈಯಾರ' ಸಿನಿಮಾ, 'ಎ ಮೂಮೆಂಟ್ ಟು ರಿಮೆಂಬರ್' ಎನ್ನುವ 2004ರ ಕೊರಿಯನ್ ಸಿನಿಮಾವನ್ನು ಭಾರತೀಯ ಸಂದರ್ಭಕ್ಕೆ ತಕ್ಕಂತೆ ಮರುರೂಪಿಸಿದೆ. ಜೆನ್–ಝಿ ಮೆಚ್ಚುಗೆಗೆ ಪಾತ್ರವಾದ ಈ ಸಿನಿಮಾ ಭರ್ಜರಿ ಯಶಸ್ಸನ್ನು ಕಂಡಿದೆ. ಯಶ್ ರಾಜ್ ಫಿಲಂಸ್ ನಿರ್ಮಾಣದಲ್ಲಿ ಮೋಹಿತ್ ಸೂರಿ ನಿರ್ದೇಶನದ ಈ ಚಿತ್ರದಲ್ಲಿ ಹೊಸ ಪ್ರತಿಭೆಗಳಾದ ಅಹಾನ್ಪಾಂಡೆ ಮತ್ತು ಅನೀತ್ ಪಡ್ಡಾ ನಟಿಸಿದ್ದರು. ಇಬ್ಬರಿಗೂ ಇದು ಮೊದಲ ಸಿನಿಮಾವಾಗಿದ್ದರೂ ನಟನೆಯಲ್ಲಿ ಛಾಪು ಮೂಡಿಸಿದ್ದಾರೆ. ಸೈಯಾರ, ಸುಮಾರು ₹570 ಕೋಟಿ ಗಳಿಕೆ ಕಂಡು, ಬ್ಲಾಕ್ ಬಸ್ಟರ್ ಹಿಟ್ ಎನಿಸಿಕೊಂಡಿದೆ.

ಚಿಂತನೆ ಹಚ್ಚಿದ, ಗಮನ ಸೆಳೆದ ಚಿತ್ರಗಳು

ಈ ವರ್ಷ ಬಿಡುಗಡೆಯಾದ 'ಸೂಪರ್ಬಾಯ್ಸ್ ಆಫ್ ಮಾಲೆಗಾಂವ್', 'ಫುಲೆ', 'ಹ್ಯೂಮನ್ಸ್ ಇನ್ ದಿ ಲೂಪ್' ಮತ್ತು 'ಹೋಮ್ಬೌಂಡ್' ಚಿತ್ರಗಳು ಚಿತ್ರಮಂದಿರಗಳಲ್ಲಿ ಯಶಸ್ಸು ಕಾಣುವ ಮೂಲಕ, ಕಲಾತ್ಮಕ ಸಿನಿಮಾಗಳು ಕೂಡ ಹೆಚ್ಚು ಹೆಚ್ಚು ಜನರನ್ನು ತಲುಪಬೇಕಿದೆ ಎನ್ನುವುದನ್ನು ನೆನಪಿಸಿವೆ. ಈ ಸಿನಿಮಾಗಳು ಒಟಿಟಿಯಲ್ಲಿಯೂ ಹೆಚ್ಚಿನ ವೀಕ್ಷಣೆ ಪಡೆದಿದ್ದು, ಚಿತ್ರೋತ್ಸವಗಳಲ್ಲಿಯೂ ವ್ಯಾಪಕ ಪ್ರಶಂಸೆ ಗಳಿಸಿವೆ. ಒಟಿಟಿ ಹಾಗೂ ಚಿತ್ರಮಂದಿರಗಳಲ್ಲಿ ಈ ಸಿನಿಮಾಗಳ ಇರುವಿಕೆಯು ಇಂತಹ ಭಿನ್ನ ಸಿನಿಮಾಗಳು ದೊಡ್ಡ ಬಜೆಟ್ ಸಿನಿಮಾಗಳಂತೆಯೇ ಸುಲಭವಾಗಿ ಪ್ರೇಕ್ಷಕರಿಗೆ ತಲುಪುವಂತಾಗಬೇಕಿದೆ ಎಂಬುದನ್ನು ನೆನಪಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.