ಸಾಮಾಜಿಕ ತಾಣದ ಬಾರ್ಬಿ ಡಾಲ್ ಎಂದೇ ಗುರುತಿಸಿಕೊಂಡಿರುವ, ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಮಗುವಿನ ಫೋಟೊ ಒಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾರೆ. ಈ ಮಗುವಿನ ಚಿತ್ರ ಯಾರದ್ದು ಎಂದು ಅಭಿಮಾನಿಗಳನ್ನು ಪ್ರಶ್ನಿಸಿದ್ದಾರೆ.

ಸದಾ ಒಂದಕ್ಕಿಂತ ಒಂದು ವಿಭಿನ್ನ ವಿಡಿಯೊ ವನ್ನು ಅಪ್‌ಲೋಡ್ ಮಾಡುತ್ತ ಅಭಿಮಾನಿಗಳನ್ನು ಮನರಂಜಿಸುವ ನಿವೇದಿತಾರ ಪ್ರಶ್ನೆಗೆ ಅಭಿಮಾನಿಗಳಿಂದ ಉತ್ತರಗಳ ಹರಿವು ಹೆಚ್ಚಿದೆ. ಹೆಚ್ಚಿನ ಅಭಿಮಾನಿಗಳು ಫೋಟೊದಲ್ಲಿರುವ ಮುದ್ದಾದ ಮಗು ಬೇರೆ ಯಾರು ಅಲ್ಲ ಸ್ವತಃ ನಿವೇದಿತಾ ಗೌಡರ ಬಾಲ್ಯದ ಫೋಟೊ ಎಂದು ಗುರುತಿಸಿದ್ದಾರೆ.

'ನಮ್ಮ ಮುದ್ದು ಗೊಂಬೆ ನಿವಿ ಬೇಬಿ' ಎಂದು ಅಭಿಮಾನಿಗಳು ಎರಡನೇ ಆಯ್ಕೆಗೆ ಅವಕಾಶವನ್ನೇ ಕೊಡದೆ ನೇರವಾಗಿ ಗುರುತಿಸಿದ್ದಾರೆ.

ಇತ್ತೀಚೆಗೆ ನಿವೇದಿತಾ ಹೆಚ್ಚಾಗಿ ಇಂಗ್ಲಿಷ್ ಬಳಸುತ್ತಾರೆ ಎಂದು ಕೆಲವು ಅಭಿಮಾನಿಗಳು ಗರಂ ಆಗಿದ್ದರು. ವಿಮಾನ ನಿಲ್ದಾಣದಲ್ಲಿ ಕ್ಯಾಬಿನ್ ಕ್ರೂ ಆಗಿರುವ ಕಾರಣ ಎಲ್ಲಾ ಭಾಷೆಗಳ ಮೇಲೆ ಗೌರವ ಇರಬೇಕು. ಆದರೆ ಅದನ್ನೇ ಅನುಸರಿಸಿದರೆ ಬೇರೆಯವರೂ ಹಾಗೇ ಮಾಡುತ್ತಾರೆ ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.